ಹಾಸನ

ಮತ್ತೆ ದೊಡ್ಡಗೌಡ್ರುಗೇ ಸಿಂಹಾಸನ

Published On :

ಕ.ಪ್ರ.ವಾರ್ತೆ    ಹಾಸನ    ಮೇ 16
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯಮಾಲೆ ಹಾಕಿಕೊಳ್ಳುವ ಮೂಲಕ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಶುಕ್ರವಾರ ನಡೆದ ಮತಗಳ ಎಣಿಕೆಯಲ್ಲಿ ಗೌಡರು 1,00,462 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಗೌಡರು 5,09,841 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು 4,09,379 ಮತಗಳನ್ನು ಪಡೆದರು. ಬಿಜೆಪಿಯ ಸಿ.ಎಚ್, ವಿಜಯಶಂಕರ್‌ಗೆ 1,65,688 ಮತ ಗಳಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಸಾಧಿಸಿದ ದೇವೇಗೌಡರು. 15 ನೇ ಸುತ್ತಿನ ಎಣಿಕೆ ನಂತರ ಹೆಚ್ಚಿನ ಅಂತರ ಕಾಯ್ದುಕೊಂಡರು. 23 ಸುತ್ತಿನ ಮತಗಳ ಎಣಿಕೆ ನಡೆಯಿತು. ಪ್ರತಿ ಸುತ್ತಿನಲ್ಲೂ ಗೌಡರು ಮುನ್ನಡೆ ಸಾಧಿಸಿದರು.
ಕಡೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 15, 472  ಮತಗಳನ್ನು ಗೌಡರಿಗಿಂತ ಹೆಚ್ಚಾಗಿ ಪಡೆದರಾದರೂ ಹಾಸನ ಜಿಲ್ಲೆ ವ್ಯಾಪ್ತಿಗೆ ಬರುವ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಹೊಳೆನರಸೀಪುರದಲ್ಲಿ ಗೌಡರಿಗೆ 50, 981 ಲೀಡ್ ಬಂದರೆ, ಶ್ರವಣಬೆಳಗೊಳ ಕ್ಷೇತ್ರದಲ್ಲಿ 22,353 ಅಧಿಕ ಮತಗಳು ಬಂದವು. ಅರಕಲಗೂಡು, ಹಾಸನ ಮತ್ತು ಅರಸೀಕರೆ ತಾಲೂಕುಗಳಲ್ಲೂ ಗೌಡರಿಗೆ ಅಧಿಕ ಮತಗಳು ಬಂದವು.


ಮಂಜುಗೆ ಸ್ವಕ್ಷೇತ್ರದಲ್ಲೇ ಹಿನ್ನಡೆ


ಅರಕಲಗೂಡು ಕ್ಷೇತ್ರದಿಂದ ಶಾಸಕರಾಗಿರುವ ಮಂಜು ಅವರಿಗೆ ಹೆಚ್ಚು ಮತಗಳು ಬರಲಿಲ್ಲ. ಗೌಡರಿಗೇ ಹೆಚ್ಚು ಮತಗಳು ಲಭಿಸಿದವು. ದೇವೇಗೌಡರಿಗೆ 77,764 ಮತಗಳು ಬಂದರೆ, ಮಂಜು ಅವರಿಗೆ 63,321ಮತಗಳು ಬಂದವು.


ಇದು ಐದನೇ ಗೆಲವು


ದೇವೇಗೌಡರು 2014 ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿ, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2004, 2009 ಮತ್ತು 2014 ಚುನಾವಣೆಗಳಲ್ಲಿ ಗೌಡರಿಗೆ ಸತತ ಗೆಲುವು. ಅಲ್ಲದೆ,  ಗೌಡರಿಗೆ ಇದು 5ನೇ ಬಾರಿ ಗೆಲವು. 1991, 1998, 2004, 2009 ಮತ್ತು 2014ರಲ್ಲಿ ಗೆಲವು. 1991ರಲ್ಲಿ ಸೋಲನ್ನು ಅನುಭಸಿದ್ದರು.


ಈ ಬಾರಿ ಕಡಿಮೆ ಅಂತರ


ಕಳೆದ ಚುನಾವಣೆಗೆ ಹೋಲಿಸಿದರೆ, ಈಗ ಗೌಡರು ಗೆದ್ದಿರುವ ಅಂತರ ಕಡಿಮೆಯಾಗಿದೆ. 2009ರಲ್ಲಿ ಗೌಡರು 2,91,113 ಅಧಿಕ ಮತಗಳನ್ನು ಗಳಿಸಿ ಭರ್ಜರಿ ಜಯ ಸಾಧಿಸಿದ್ದರು. ಈಗ ಗೆಲುವಿನ ಅಂತರ 1,00,462 ಮತಗಳಿಗೆ ಕುಗ್ಗಿದೆ.


ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಲೀಡ್ ?



ಹಾಸನ

ಎಚ್.ಡಿ. ದೇವೇಗೌಡ  ಅಂತರ  ಎ. ಮಂಜು
61,757         12,552     49,205

ಹೊಳೆನರಸೀಪುರ
98,838,   50,98   47,857

ಸಕಲೇಶಪುರ
52,515   434  52,081


ಕಡೂರು  

32,065,     15,472  47,537


ಶ್ರವಣಬೆಳಗೊಳ  

77, 563    22,353   55,210


ಅರಸೀಕೆರೆ   

62,086    12,811   49,275


ಬೇಲೂರು  
47,013   2,256   44,757


ಅರಕಲಗೂಡು  
77,764  14,443  63,321


ಒಟ್ಟು ಅಂಚೆ ಮತಗಳು


1026


 ಚಲಾವಣೆಗೊಂಡ  ಮತ


11,47,534


ಮತಗಳ ಅಂತರ ಜಯ


1,00,462

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.