ಹಾಸನ

ಮೂಢನಂಬಿಕೆ ಜಾಗೃತಿ ಪ್ರಾತ್ಯಕ್ಷಿಕೆ

Published On :

ಹೊಳೆನರಸೀಪುರ: ಪಟ್ಟಣದ ಮೈಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತರಬೇತುದಾರ ತಮ್ಮಯ್ಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಶಿಕ್ಷಕ ಭವಾನಿಶಂಕರ್ ಮೂಢನಂಬಿಕೆಗಳ ಬಗ್ಗೆ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿಯೂ ಸಹ ಮೂಢನಂಬಿಕೆಗಳು ಮನುಷ್ಯನೊಂದಿಗೆ ಬೆಳೆದುಕೊಂಡು ಬಂದಿದ್ದು ಒಂದು ಕಾಲದ ಕೆಲವೊಂದು ನಂಬಿಕೆಗಳು ಇನ್ನೊಂದು ಕಾಲದಲ್ಲಿ ಸುಳ್ಳೆಂದು  ವೈಜ್ಞಾನಿಕವಾಗಿ ಸಾಬೀತಾಗುತ್ತದೆ. ಹೀಗಾಗಿ ಆ ನೆರಳಿಗೆ ಅಥವಾ ಅವನ ಪ್ರತಿಫಲನಕ್ಕೆ ತೊಂದರೆ ಉಂಟು ಮಾಡಿದರೆ ವ್ಯಕ್ತಿಯ ಆತ್ಮಕ್ಕೆ ತೊಂದರೆ ಮಾಡಿದಂತೆ ಎಂದು ನಂಬಲಾಗಿತ್ತು ಎಂದರು. ಬೆಕ್ಕು ಅಡ್ಡ ಹೋಗುವುದು, ಹಲ್ಲಿ ನುಡಿಯುವುದು, ಕನ್ನಡಿ ಒಡೆಯುವುದು, ಮೈಮೇಲೆ ದೇವರು ಬರುವುದು, ಮೈಮೇಲೆ ದೆವ್ವ ಬರುವುದು, ನಾಲಗೆ ಮೇಲೆ ಕರ್ಪೂರ ಹಚ್ಚಿಕೊಳ್ಳುವುದು, ಗಾಳಿಯಲ್ಲಿ ಬೆಂಕಿ ಹೊತ್ತಿಸುವುದು, ಮೈಮೇಲೆ ಬೆಂಕಿ ಆಡಿಸುವುದು, ಬೀಳುತ್ತಿರುವ ನಕ್ಷತ್ರ ನೋಡಿದರೆ ಅಪಶಕುನ ಎನ್ನುವುದು ಹೀಗೆ ಹಲವಾರು ಉದಾಹರಣೆಗಳನ್ನು
ಪ್ರಾತ್ಯಕ್ಷಿಕೆ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.