ವಡವಾಣಹೊಸಹಳ್ಳಿ ಸಮಸ್ಯೆಗಳ ಆಗರ
ರಾಮನಾಥಪುರ: ಇಲ್ಲಿಗೆ ಹತ್ತಿರವಿರುವ ಕೊಣನೂರು ಹೋಬಳಿ ಚಿಕ್ಕಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ವಡವಾಣಹೊಸಳ್ಳಿ ಗ್ರಾಮ ಅನೇಕ ಸಮಸ್ಯೆಗಳ ಆಗರವಾಗಿ ಬಹುತೇಕ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, 1000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ, ಗ್ರಾಮವು ಚರಂಡಿ, ಶೌಚಾಲಯ, ಬೀದಿ ದೀಪದ ಸಮಸ್ಯೆ ಹೀಗೆ ಹಲವಾರು ಸೌಕರ್ಯಗಳಿಂದ ವಂಚಿತವಾಗಿದೆ.
ಚರಂಡಿ ಅವ್ಯವಸ್ಥೆ : ಗ್ರಾಮದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದೇ ಗ್ರಾಮದ ಮನೆಗಳ ಪಕ್ಕ ಕೊಳಚೆ ನೀರು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಗ್ರಾಮಕ್ಕೆ ಬರುವ ಮುಖ್ಯ ರಸ್ತೆಗೆ ಒಮ್ಮೆ ಡಾಂಬರ್ ಹಾಕಿದ್ದನ್ನು ಬಿಟ್ಟರೆ ಮತ್ತೆ ಈ ರಸ್ತೆ ಅಭಿವೃದ್ದಿಗೆ ಗಮನಹರಿಸಿಲ್ಲ ಆದ ಕಾರಣ ಮುಖ್ಯ ರಸ್ತೆಯೆಲ್ಲ ಗುಂಡಿಗಳಿಂದ ಕೂಡಿದ್ದು ಧೂಳುಮಯವಾಗಿದೆ, ಹಾಗೂ ಊರಿನ ಒಳಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆಗಾಲದಲ್ಲಿ ಈ ಮಣ್ಣು ರಸ್ತೆಯಲ್ಲಿ ತಿರುಗಾಡಲು ಆಗುವುದಿಲ್ಲ ಗ್ರಾಮದಲ್ಲಿ ಚರಂಡಿ, ಶೌಚಾಲಯ ಮೂಲ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಂಗಡಿಗಳ ಮೇಲೆ ದಾಳಿ 50 ಸಾವಿರ ರು.ಮೌಲ್ಯದ ಪ್ಲಾಸ್ಟಿಕ್ ವಶ
ಹಾಸನ: ನಗರಸಭೆಯ ಸಿಬ್ಬಂದಿ ಎರಡು ಮಳಿಗೆಗಳ ಮೇಲೆ ದಾಳಿ ನಡೆಸಿ ಕಡಿಮೆ ಮೈಕ್ರಾನ್ ಇರುವ ಪ್ಲಾಸ್ಟಿಕ್ಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ನಗರದ ಸಂತೆಪೇಟೆಯಲ್ಲಿನ 2 ಹೋಲ್ಸೇಲ್ ಮಾರಾಟ ಮಳಿಗೆಗಳ ಮೇಲೆ ಮಂಗಳವಾರ ಪೌರಾಯುಕ್ತ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ನಗರಸಭೆ ಸಿಬ್ಬಂದಿ 50 ಸಾವಿರ ರು. ಮೌಲ್ಯದ ಪ್ಲಾಸ್ಟಿಕ್ ಕಾರಿಬ್ಯಾಗ್ಗಳನ್ನು ವಶಪಡಿಸಿಕೊಂಡರು.
ಈಗಾಗಲೇ ಮಾರಾಟ ಮಾಡದಂತೆ ನಿಷೇಧ ಏರಿರುವ ಕಡಿಮೆ ಮೈಕ್ರಾನ್ ಇರುವ ತೆಳುವಾದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ಮಾರಾಟ ಮಾಡುತ್ತಿದ್ದ ಪಟೇಲ್ ಟ್ರೇಡಿಂಗ್, ಪರಮೇಶ್ವರ ಮಾರ್ಕೆಟಿಂಗ್ ಮೇಲೆ ದಾಳಿ ನಡೆಸಿ ಅಲ್ಲಿದ್ದ ದಾಸ್ತಾನನ್ನು ವಶಕ್ಕೆ ಪಡೆದರು. ಪ್ಲಾಸ್ಟಿಕ್ ಬಳಕೆಯನ್ನು ನಗರದಲ್ಲಿ ನಿಷೇಧಿಸಿದ್ದರೂ ಈಗಲೂ ಮಾರಾಟ ನಡೆಸಲಾಗುತ್ತಿದೆ. ಇದರಿಂದ ತ್ಯಾಜ್ಯ ಸಮಸ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಪ್ರತಿ ಮಂಗಳವಾರ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

