ವಿಗ್ರಹ ಭಿನ್ನ: ಪೇಜಾವರ ಶ್ರೀ ಪರಿಶೀಲನೆ
ಕೆರೋಡಿ (ಸಕಲೇಶಪುರ ತಾ.) : ಸುಮಾರು 200 ವರ್ಷಗಳಷ್ಟು ಹಳೆಯದಾದ ಗೋಪಾಲಪುರದ ವೇಣುಗೋಪಾಲಸ್ವಾಮಿ ವಿಗ್ರಹ ಭಿನ್ನ ವಾಗಿರುವುದರ ಬಗ್ಗೆ ಪರಿಶೀಲಿಸಲು ಉಡುಪಿಯ ಶ್ರೀ ಪೇಜಾವರ ಸ್ವಾಮೀಜಿ ಮಂಗಳವಾರ ಕೆರೋಡಿ ಗ್ರಾಮಕ್ಕೆ ಆಗಮಿಸಿದ್ದರು.
ಗ್ರಾಮಸ್ಥರ ಕೋರಿಕೆಯ ಮೇರೆಗೆ ಆಗಮಿಸಿದ್ದ ಅವರನ್ನು ಮಂಗಳವಾದ್ಯ, ದೀಪಾರತಿ, ಶಂಕ ಜಾಗಟೆಗಳೊಂದಿಗೆ ಶ್ರೀಗಳನ್ನು ಬರ ಮಾಡಿಕೊಳ್ಳಲಾಯಿತು. ಮೂರ್ತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.
ಹಳೆಯ ದೇವಾಲಯದ ಐತಿಹ್ಯ ಮತ್ತು ಮಾಹಿತಿಯನ್ನು ಎಂ. ಲೋಲಾಕ್ಷಿ ನೀಡಿದರು. ಕೆ.ಎಂ. ಕೃಷ್ಣೇಗೌಡ ಸ್ವಾಗತಿಸಿದರು. ಕೆಂಚೇಗೌಡ ವಂದಿಸಿದರು. ಕವನ ಪ್ರಾರ್ಥನೆ ಮಾಡಿದರು. ಗ್ರಾಮದ ಪಟೇಲ ಕೆ.ಕೆ. ನಾಗೇಗೌಡ, ಉದ್ಯಮಿ ದೇವಶೆಟ್ಟಿ ಇನ್ನಿತರರು ಹಾಜರಿದ್ದರು.
ಪೇಜಾವರರ ಆಗಮನದ ಹಿನ್ನೆಲೆಯಲ್ಲಿ ಬಾಳ್ಳುಪೇಟೆಯಿಂದ ಕೆರೋಡಿವರೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜೂ.7ಕ್ಕೆ ಲಕ್ಷ್ಮೀದೇವಿ ಕಳಶೋತ್ಸವ
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಯ ಮಳಲಿ ಗ್ರಾಮದ ಶ್ರೀಲಕ್ಷ್ಮೀದೇವಿ(ಗಿಡ್ಡಮ್ಮ) ದೇವಸ್ಥಾನದ ಕಳಶೋತ್ಸವ ಮತ್ತು ಜಾತ್ರಾ ಮಹೋತ್ಸವವು ಜೂ.7ರಂದು ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ದೇಣಿಗೆ ಸಂಗ್ರಹಿಸಲು ಸರ್ಕಾರದಿಂದ ಯಾರನ್ನೂ ನಿಯೋಜಿಸಿರುವುದಿಲ್ಲ ಎಂದು ತಹಸೀಲ್ದಾರ್ ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಿರುವ ಅವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಹಾಲಿ ಅಸ್ತಿತ್ವದಲ್ಲಿ ಇರುವುದಿಲ್ಲ. ಶ್ರೀ ದೇವರ ಜಾತ್ರೆ ಪ್ರಯುಕ್ತ ದೇಣಿಗೆ ಅಥವಾ ಕಾಣಿಕೆ ಸಂಗ್ರಹಿಸಲು ಯಾರನ್ನೂ ಸರ್ಕಾದಿಂದ ನಿಯೋಜಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಭಕ್ತರು ಅಧಿಕೃತ ಮೊಹರು ಇಲ್ಲದ ಆಹ್ವಾನ ಪತ್ರಿಕೆಗಳನ್ನು ಮಾನ್ಯ ಮಾಡಬಾರದಾಗಿ ಕೋರಿರುವ ಅವರು, ಕಳಶೋತ್ಸವದ ಪ್ರಯುಕ್ತ ವಂತಿಗೆ ಮತ್ತು ಸೇವಾ ಶುಲ್ಕವನ್ನು ಸಲ್ಲಿಸಲು ಅಪೇಕ್ಷಿಸುವ ಭಕ್ತಾಧಿಗಳು ದೇವಸ್ಥಾನದ ಸಿಬ್ಬಂದಿಯವರಲ್ಲಿ ಪಾವತಿಸಿ ಅಧಿಕೃತ ರಶೀದಿ ಪಡೆಯಬೇಕಾಗಿ ಕೋರಲಾಗಿದೆ. ಅಥವಾ ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳು ಹೊಳೆನರಸೀಪುರ ಇವರ ಕಾರ್ಯಾಲಯದಲ್ಲಿ ನಗದು ಪಾವತಿಸಿ ರಶೀದಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಇಂತಹ ಅಧಿಕೃತ ವ್ಯವಸ್ಥೆಯಲ್ಲಿ ಸಲ್ಲಿಸಲ್ಪಡುವ ಕಾಣಿಕೆ, ದೇಣಿಗೆ ಮತ್ತು ನಗದು ಮೊಬಲಗು ಮಾತ್ರ ಶ್ರೀ ದೇವರ ಸನ್ನಿಧಿಗೆ ಸಲ್ಲುವುದಾಗಿ ಈ ಮೂಲಕ ದೃಢೀಕರಿಸಲಾಗಿದ್ದು, ಸ್ವ-ಇಚ್ಚೆಯಿಂದ ದೇವರ ಸೇವೆ ಮತ್ತು ಉತ್ಸವ ಮಾಡಿಸಲು ವಸ್ತು ರೂಪದಲ್ಲಾಗಲೀ ಅಥವಾ ನಗದು ರೂಪದಲ್ಲಾಗಲೀ ಕೊಡುಗೆ ನೀಡಲಿಚ್ಚಿಸುವವರು ಮೇ 25ರೊಳಗೆ ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳು ಹೊಳೆನರಸೀಪುರ ಇವರ ಕಾರ್ಯಾಲಯದಲ್ಲಿ ಲಿಖಿತವಾಗಿ ನೀಡುವಂತೆ ತಹಸೀಲ್ದಾರ್ ರಾಘವೇಂದ್ರ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

