ಅಕ್ರಮ ದಾಸ್ತಾನು: 120 ಕ್ಕೂ ಹೆಚ್ಚು ಲಾರಿ ಲೋಡ್ನಷ್ಟು ಮರಳು ವಶ
ಕನ್ನಡಪ್ರಭ ವಾರ್ತೆ ್ಣ ಆಲೂರು ್ಣ ಮೇ 23
ತಾಲೂಕಿನ ಕರಿಗುಡ್ಡನಹಳ್ಳಿ ಗ್ರಾಮದ ಯಗಚಿ ನದಿಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಉಪವಿಭಾಗಾಧಿಕಾರಿ ಮಹದೇವಪ್ಪ ಡಾ.ಮಧುಕೇಶ್ವರ್, ತಹಸೀಲ್ದಾರ್ ಮಹದೇವಯ್ಯ ಹಾಗೂ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಹೇಮಾವತಿ ಹಾಗೂ ಯಗಚಿ ನದಿಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಸಂಬಂಧವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನವೂ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯವರು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಪ್ರತಿದಿನವೂ ಹಿಡಿದು ತಂದು ಪಟ್ಟಣದ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ನಿಲುಗಡೆ ಮಾಡುತ್ತಿದ್ದು, ಇದರಿಂದ ಏನೂ ಉಪಯೋಗವಿಲ್ಲ. ನದಿಪಾತ್ರದ ನಾನಾ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಶೇಖರಿಸಿಡಲಾಗಿದೆ ಎಂದು ದೂರು ನೀಡಿದ್ದರು.
ಇದರನ್ವಯ ಕಾರ್ಯಪ್ರವೃತ್ತರಾದ ಪಟ್ಟಣದ ಪೊಲೀಸರು ಕರಿಗುಡ್ಡನಹಳ್ಳಿಯಲ್ಲಿ ಮರಳು ದಾಸ್ತಾನು ಇರುವ ಬಗ್ಗೆ ಪತ್ತೆ ಹಚ್ಚಿ ತಹಸೀಲ್ದಾರ್ ಅವರ ಗಮನಕ್ಕೆ ತಂದು, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 120ಕ್ಕೂ ಹೆಚ್ಚು ಲಾರಿ ಲೋಡ್ನಷ್ಟು ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರೇ ಬೇರೆಡೆಗಳಲ್ಲೂ ಇದ್ದ ಅಕ್ರಮ ಮರಳು ದಾಸ್ತಾನನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅದನ್ನೂ ಅಧಿಕಾರಿಗಳು ಪಡೆದರು.
ನಂತರ ಗ್ರಾಮದಲ್ಲಿ ಮರಳು ಕಾಯಲು ಯಾರನ್ನೂ ನಿಯೋಜಿಸದ ಕಾರಣ ರಾತ್ರೋರಾತ್ರಿ ಮರಳನ್ನು ತುಂಬಿಕೊಂಡು ಹೋಗಲು ಕೆಲವರು ಯೋಜನೆ ರೂಪಿಸಿದ್ದಾರೆ ಎಂಬುದನ್ನು ಅರಿತ ಪೊಲೀಸರು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರರ್ತಿಮ್ಮಶೆಟ್ಟಿ, ಕಿರಿಯ ಎಂಜಿನಿಯರ್ವೆಂಕಟೇಶ್, ಕಂದಾಯಾಧಿಕಾರಿ ರಂಗಸ್ವಾಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

