ಹಾಸನ

ರುದ್ರಪಟ್ಟಣ: ಎಲ್ಲೆಲ್ಲೂ ಸಂಗೀತವೇ...

Published On :

ಅರಕಲಗೂಡು: ಹೌದು, ಎಲ್ಲಿ ನೋಡಿದರೂ ಸಂಗೀತಮಯ, ಎಲ್ಲ ಕಡೆಯೂ ಸಂಗೀತ ಗುಯ್ಗುಡುವ ನಾದ ಸ್ವರ ಆಲಾಪಗಳ ಝೇಂಕಾರ.ಈ ನಡುವೆ ಸಂಗೀತದ ಲೇಪವೇ ತಿಳಿಯದ ವ್ಯಕ್ತಿಯೂ ಗುಂಯ್ಗುಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಂತಹ ವಾತಾವರಣ ಇದ್ದುದು, ಕರ್ನಾಟಕದ ತಿರುವಯ್ಯಾರ್ ಎಂದೇ ಖ್ಯಾತಿ ಹೊಂದಿರುವ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ. ಮೂರು ದಿನಗಳ 13ನೇ ಸಂಗೀತೋತ್ಸವ ಸಂದರ್ಭದಲ್ಲಿ ಎರಡನೇ ದಿನವಾದ ಶನಿವಾರ ಬೆಳಗ್ಗೆ 6.30ಕ್ಕೆ ಕಾವೇರಿ ನದಿಗೆ ತೆರಳಿದ ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ಇತರ ರುದ್ರಪಟ್ಟಣದ ಮೂಲದವರೇ ಆಗಿ ಹೊರ ಊರುಗಳಲ್ಲಿ ನೆಲಸಿರುವ ಅನಿವಾಸಿ ಗ್ರಾಮಸ್ಥರು ಕಾವೇರಿ ನದಿಗೆ ತೆರಳಿ ಪೂಜೆ ಸಲ್ಲಿಸಿದರು.
  ತುಸು ವಿರಾಮದ ನಂತರ ಸಂಗೀತದ ಗಟ್ಟಿನಾದ ಆರಂಭಗೊಂಡಿತ್ತು. ಬೆಳಗ್ಗೆ 10.15ಕ್ಕೆ ಸರಿಯಾಗಿ ಸಂಗೀತ ಮಂಟಪದಲ್ಲಿ ಯುಗಳ ವೈಲಿನ್ ವಾದನ ಆರಂಭಗೊಂಡಿತು. ವಿದ್ವಾನ್ ಎಚ್.ಎಂ. ಸ್ಮಿತಾ ಮತ್ತು ವಿದ್ವಾನ್ ಎಚ್.ಎಂ. ಸಿಂಧು, ಯುಗಳ ವೈಲಿನ್ ವಾದನ ನುಡಿಸಿದರೆ, ವಿದ್ವಾನ್ ತುಮಕೂರು ಬಿ.ರವಿಶಂಕರ್, ವಿದ್ವಾನ್ ತುಮಕೂರು ಬಿ.ಶಶಿಶೇಖರ್ ಕ್ರಮವಾಗಿ ಮೃದಂಗ ಮತ್ತು ಘಟ ನುಡಿಸಿದರು.
ವಿದ್ವಾನ್ ಎಸ್.ಸೌಮ್ಯ ಶರ್ಮಾ, ವಿದ್ವಾನ್ ಆರ್.ಕೆ.ಪ್ರಸನ್ನ ಕುಮಾರ್, ವಿದ್ವಾನ್ ವಾನರಾಸಿ ಬಾಲಕೃಷ್ಣ ಭಾಗವತರ್, ವಿದ್ವಾನ್‌ಬಳ್ಳಾರಿ ಎಂ.ರಾಘವೇಂದ್ರ ಇತರ ಪ್ರಸಿದ್ದ ಪಕ್ಕವಾದ್ಯ ವಿದ್ವಾಂಸರೊಂದಿಗೆ ಹಾಡಿ ಸಂಗೀತೋತ್ಸವಕ್ಕೆ ಮೆರಗು ತಂದರು. ವಿದ್ವಾನ್ ಚಂದನ್‌ಕುಮಾರ್ ಅವರ ಕೊಳಲು ವಾದನ, ವಿದ್ವಾನ್ ನಳಿನಾ ಮೋಹನ್ ಪಿಟೀಲು, ವಿದ್ವಾನ್ ಎ.ರೇಣುಕಾ ಪ್ರಸಾದ್ ಮೃದಂಗ, ವಿದ್ವಾನ್ ಎ.ಎಸ್.ಎನ್. ಸ್ವಾಮಿ-ಖಂಜರಿ ನುಡಿಸಿ ಗೋಷ್ಠಿಗೆ ಮೆರಗು ತಂದರು. ಹೀಗೆ ಐದು ಸಂಗೀತ ವಿದ್ವಾಂಸರ ತಂಡಗಳು ಬೆಳಗಿನಿಂದ ಸಂಜೆಯವರೆಗೂ ಪ್ರತಿ ಗಂಟೆಗೊಂದು ತಂಡದಂತೆ ಸಂಗೀತ ಗಾಯನ ನಡೆಸಿಕೊಟ್ಟು, ವೇದಿಕೆಯ ಎದುರಿಗಿದ್ದ ಪ್ರೇಕ್ಷಕರು ತಲೆ ತೂಗುವಂತೆ ಮಾಡಿದರು.

 ಅ.ರಾ.ಸುಬ್ಬರಾವ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.