ಪೂರಕ ಪರೀಕ್ಷೆಗೆ ಶುಲ್ಕ ಕಟ್ಟಲು 28 ಕಡೆ ದಿನ
ಹಾಸನ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಜುಲೈ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ದಂಡ ರಹಿತವಾಗಿ ಶುಲ್ಕ ಪಾವತಿಸಲು ಮೇ 28 ಕಡೆಯ ದಿನ ಆಗಿದೆ ಎಂದು ಹಾಸನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಅನಧಿಕೃತ ಶಾಲೆಗಳ ವಿವರ: ಹಾಸನ ಜಿಲ್ಲೆಯಲ್ಲಿ 7 ಶಾಲೆಗಳನ್ನು ಅನಧಿಕೃತ ಶಾಲೆಗಳೆಂದು ಘೋಷಿಸಲಾಗಿದ್ದು ಈ ಶಾಲೆಗಳಿಗೆ 2014-15ನೇ ಸಾಲಿಗೆ ಪೋಷಕರು ವಿದ್ಯಾರ್ಥಿಗಳನ್ನು ದಾಖಲಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್. ಬಸವರಾಜ ಕೋರಿದ್ದಾರೆ. ಅನಧಿಕೃತ ಶಾಲೆಗಳ ವಿವರ ಕೆಳಕಂಡಂತಿದೆ. ಶ್ರೀ ಲಕ್ಷ್ಮೀ ವಿದ್ಯಾಲಯ ಗಂಜಲಗೂಡು ಅರಕಲಗೂಡು ತಾಲೂಕು 6-7ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ, ಬೆನಕ ಪ್ರಾಥಮಿಕ ಶಾಲೆ ಕೋಟವಾಳು ರಾಮನಾಥಪುರ ಅರಕಲಗೂಡು ತಾಲೂಕು 6-7ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ, ಕಾವೇರಿ ಪ್ರಾಥಮಿಕ ಶಾಲೆ ಕೊಣನೂರು ಅರಕಲಗೂಡು ತಾಲೂಕು 6-7ನೇ ತರಗತಿ ಕನ್ನಡ ಮಾಧ್ಯಮ, ಎಪಿಎ. ಕಿರಿಯ ಪ್ರಾಥಮಿಕ ಶಾಲೆ ಕೆ.ಆರ್.ಪುರಂ ಹಾಸನ 1-5ನೇ ತರಗತಿ ಕನ್ನಡ ಮಾಧ್ಯಮ, ಸಾವಿತ್ರಿ ಕಾನ್ವೆಂಟ್ ಉತ್ತರ ಬಡಾವಣೆ ಹಾಸನ 6-7ನೇ ತರಗತಿ ಆಂಗ್ಲ ಮಾಧ್ಯಮ , ಸೇಂಟ್ ಆಗ್ನೇಸ್ ಕಿರಿಯ ಪ್ರಾಥಮಿಕ ಶಾಲೆ ಸಕಲೇಶಪುರ 6-7ನೇ ತರಗತಿ ಆಂಗ್ಲ ಮಾಧ್ಯಮ, ಬ್ಲಾಸಂ ಕಿರಿಯ ಪ್ರಾಥಮಿಕ ಶಾಲೆ ಬಾಳ್ಳುಪೇಟೆ ಸಕಲೇಶಪುರ ತಾಲೂಕು 6-7ನೇ ತರಗತಿ ಆಂಗ್ಲ ಮಾಧ್ಯಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

