ಮೋದಿ ಪ್ರಮಾಣ: ಜಿಲ್ಲೆಯಲ್ಲಿ ವಿಜಯೋತ್ಸವ
ಆಲೂರು: ನರೇಂದ್ರ ಮೋದಿಯವರು ರಾಷ್ಟ್ರದ 15 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬಸ್ನಿಲ್ದಾಣದ ಮುಂಭಾಗ ಮೋದಿ ಟೀ ಕ್ಯಾಂಟೀನ್ ನಿರ್ಮಿಸಿ ಟೀ ಹಾಗೂ ಸಿಹಿ ಹಂಚಿದ ಕಾರ್ಯಕರ್ತರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ದೊಡ್ಡ ಪರದೆ ಮೇಲೆ ವೀಕ್ಷಿಸಿ ಸಂತಸ ಪಟ್ಟರು
ನಂತರ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್ ಮಾತನಾಡಿ ಮೋದಿಯವರು ಇಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಅಪಾರ ಸಂತಸ ತಂದಿದೆ ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಸುದಿನ ಮೋದಿಯವರ ಆಡಳಿತದಲ್ಲಿ ದೇಶವು ವಿಶ್ವದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿರುವ ದೇಶವಾಗಲಿದ್ದು ಪ್ರಪಂಚದ ಭೂಪಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ ಮಾನ ದೊರೆಯಲಿದೆ.
ಜಿಲ್ಲಾ ಅಧ್ಯಕ್ಷ ರೇಣುಕುಮಾರ್, ಡಾ. ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ಕಾಂತರಾಜು, ಡಾ. ಜಯರಾಜ್, ಎ.ಹೆಚ್. ರಮೇಶ್, ಎ.ಹೆಚ್. ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಉದಯ್, ನೀಲೇಶ್, ಹೇಮಂತ್, ಚಿದಾನಂದ್, ಮಡ್ಡಿ, ನವೀನ, ಜಗದೀಶ್, ರವಿಪ್ರಕಾಶ, ಚಂದ್ರಪ್ಪ, ಜಗದೀಶ, ಕರಿಯಪ್ಪ, ಕ್ಯಾಂಟೀನ್ ನಾಗರಾಜ, ಧರ್ಮಪ್ಪ , ಚಂದ್ರಶೇಖರ, ಕುಮಾರ್, ಸೋಮಶೇಖರ್ ಇತರರು ಇದ್ದರು.
ಉಚಿತ ಟೀ ವಿತರಣೆ
ಹಾಸನ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ನಗರದ ಉತ್ತರ ಬಡಾವಣೆ, ಅರಳಿಕಟ್ಟೆ ವೃತ್ತದ ಬಳಿ ನಮೋ ಗೆಳೆಯರ ಬಳಗದಿಂದ ಸಾರ್ವಜನಿಕರಿಗೆ ಉಚಿತ ಟೀ ವಿತರಣೆ ಮಾಡಲಾಯಿತು.
ವರ್ಧಮಾನ್ ಪ್ರಾವೀಜನ್ ಸ್ಟೋರ್ಸ್ ನಮೋ ಟೀ ಸ್ಟಾಲ್ನಲ್ಲಿ ಬೆಳಗಿನಿಂದ ಸಂಜೆ ಮೋದಿ ಪ್ರಮಾಣವಚನ ಸ್ವೀಕರಿಸುವವರೆಗೂ ಟೀ ಹಾಗೂ ಬಿಸ್ಕತ್ಅನ್ನು ಉಚಿತವಾಗಿ ನೀಡಿ ಗಮನ ಸೆಳೆದರು. ನೂರಾರು ಜನರು ಬಂದು ಟೀ ಕುಡಿದು ಸಂಭ್ರಮಿಸಿದರು. ನಗರದ ನಾನಾ ಭಾಗಗಳಲ್ಲಿ ಮೋದಿ ಅಭಿಮಾನಿಗಳು ಟೀ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

