768 ಕೋಟಿ ಬಜೆಟ್ ಮಂಡನೆ
ಹಾಸನ ಜಿಲ್ಲಾ ಪಂಚಾಯಿತಿ
ಕ.ಪ್ರ.ವಾರ್ತೆ ಹಾಸನ ಮೇ 28
ಇಲ್ಲಿನ ಜಿಲ್ಲಾ ಪಂಚಾಯಿತಿಯ 2014-15ನೇ ಸಾಲಿನ ರು. 768 ಕೋಟಿ ಅಯವ್ಯಯ ಅಂದಾಜು ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಅಧ್ಯಕ್ಷೆ ಅಂಬಿಕಾ ರಾಮಣ್ಣ 768 ಕೋಟಿ 85 ಲಕ್ಷದ 86 ಸಾವಿರ ರು.ಗಳ ಮುಂಗಡ ಪತ್ರ ಮಂಡಿಸಿದರು. ಜಿಲ್ಲಾ ಪಂಚಾಯಿತಿಯ ಸದಸ್ಯರು ಮುಂಗಡ ಪತ್ರವನ್ನು ಅನುಮೋದಿಸಿದರು.
ಬಜೆಟ್ನಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ದಿ, ಕುಡಿಯುವ ನೀರು ಪೂರೈಕೆ, ಪ್ರಾಥಮಿಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಯೋಜನೆಯಲ್ಲಿ 1ನೇ 3 ಭಾಗದಷ್ಟು ಮಹಿಳಾ ಫಲಾನುಭವಿಗಳಿಗೆ ಆದ್ಯತೆ ನೀಡಲು ಮತ್ತು ಶೇ. 22.75 ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಅಭಿವೃದ್ದಿಗೆ ಬಳಸಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಮುಂಗಡ ಪತ್ರವನ್ನು ಮೂರು ಹಂತಗಳ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯಿತಿಗೆ, ಯೋಜನೆ ಮತ್ತು ಯೋಜನೇತರ ಕಾರ್ಯಕ್ರಮಗಳಿಗೆ ವಿಭಾಗಿಸಿದ ಅಧ್ಯಕ್ಷೆ ಅಂಬಿಕಾ ರಾಮಣ್ಣ, ರಾಜ್ಯ ಯೋಜನೆಯೆ 143 ಕೋಟಿ 77 ಲಕ್ಷದ 15 ಸಾವಿರ ರು., ಕೇಂದ್ರ ಯೋಜನೆಯು 94 ಕೋಟಿ, 29 ಲಕ್ಷದ 9 ಸಾವಿರ ರು. ಮತ್ತು ಯೋಜನೇತರಕ್ಕೆ 530 ಕೋಟಿ 79 ಲಕ್ಷದ 62 ಸಾವಿರ ರು.ಗಳು ಸೇರಿದಂತೆ 768 ಕೋಟಿ 85 ಲಕ್ಷದ 86 ಸಾವಿರ ರು.ಗಳ ಅಯವ್ಯಯ ಮಂಡಿಸಿದರು.
ಮರ ತೆಗೆಸುವಂತೆ ಆಗ್ರಹ
ಬೇಲೂರು-ಬಿಕ್ಕೋಡು ಮಾರ್ಗ ಮಧ್ಯೆ ಮರವೊಂದು ಅಡ್ಡಲಾಗಿ ಇರುವುದರಿಂದ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತಿವೆ. ಆ ಮರವನ್ನು ತೆಗೆಸುವಂತೆ ಕಳೆದ 2 ಸಭೆಗಳಲ್ಲಿ ತಿಳಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆಗೆಸಿಲ್ಲ ಎಂದು ಸದಸ್ಯ ಬಿ.ಡಿ.ಚಂದ್ರೇಗೌಡ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಈ ರೀತಿಯ ಸಭೆಗಳಿಗೆ ಇಲಾಖೆ ಮುಖ್ಯ ಅಧಿಕಾರಿಗಳೇ ಬರಬೇಕು. ಇಲಾಖೆಯ ಕೆಳಗಿನ ಅಧಿಕಾರಿಗಳು ಬಂದರೆ ಅವರಿಗೆ ಸರಿಯಾಗಿ ತಿಳಿಯುವುದಿಲ್ಲ. ಆದ್ದರಿಂದ ಮುಂದೆ ಸಭೆಗಳಿಗೆ ಬರುವಾಗ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅಧಿಕಾರಿಗಳಿಗೆ ತಾಕೀಕು ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಸದಸ್ಯರು ಹಾಗೂ ಇತರರು ಇದ್ದರು.
ಯಾವುದಕ್ಕೆ ಎಷ್ಟೆಷ್ಟು ಅನುದಾನ
2013-14ನೇ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಮತ್ತು ಕೇಂದ್ರ ವಲಯದಡಿ ಐಎಂಐಎಸ್ ಮತ್ತು ಸಿಎಪಿ ಅಡಿ 90.35 ಕೋಟಿ ರು.ಗಳ ಅನುದಾನ ನಿಗದಿಯಾಗಿದ್ದು, 52.75 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ 52.02 ಕೋಟಿ ರು.ಗಳ ವೆಚ್ಚ ಮಾಡಿ 2693 ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. 2014-15ನೇ ಸಾಲಿನಲ್ಲಿ ಎನ್ಆರ್ಡಿ ಡಬ್ಲ್ಯೂಪಿ ಮಾರ್ಗಸೂಚಿಯಂತೆ ಅವಶ್ಯವಿರುವ ಕುಡಿಯುವ ನೀರಿನ ಕಾಮಗಾರಿಯ ಕ್ರಿಯಾ ಯೋಜನೆಯನ್ನು ರೂಪಿಸಲು 83.70 ಕೋಟಿ ರು.ಗಳ ಅನುದಾನ ನಿಗದಿ ಪಡಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಯೋಜನಾ ಕಾರ್ಯಕ್ರಮಗಳಿಗಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 75.74 ಕೋಟಿ ರು., ಲೋಕ ಶಿಕ್ಷಣಕ್ಕೆ 10 ಲಕ್ಷ ರು., ಯುವಜನ ಸೇವೆಗಳು ಮತ್ತು ಕ್ರೀಡೆಗೆ 77 ಲಕ್ಷ ರು., ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು, ಗ್ರಾಮೀಣಕ್ಕೆ 10.29 ಕೋಟಿ ರು., ಭಾರತೀಯ ವೈದ್ಯ ಪದ್ಧತಿ (ಆಯುಷ್ಗೆ 45 ಲಕ್ಷ ರು., ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ 23.47 ಕೋಟಿ ರು., ಗ್ರಾಮೀಣ ನೀರು ಪೂರೈಕೆಗೆ 3.34 ಕೋಟಿ ರು., ಸಮಾಜ ಕಲ್ಯಾಣಕ್ಕೆ 15.23 ಕೋಟಿ ರು., ವಿಶೇಷ ಘಟಕ ಯೋಜನೆಗೆ 1.10 ಕೋಟಿ ರು., ಹಿಂದುಳಿತ ವರ್ಗಗಳ ಕಲ್ಯಾಣಕ್ಕೆ 10.37 ಕೋಟಿ ರು., ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕೆ 32.83 ಕೋಟಿ ರು., ಪೌಷ್ಟಿಕ ಆಹಾರಕ್ಕೆ 12.27 ಕೋಟಿ ರು., ಕೃಷಿ ಆಹಾರಕ್ಕೆ 1.49 ಕೋಟಿ ರು., ತೋಟಗಾರಿಕೆಗೆ 60 ಲಕ್ಷ ರು., ಪಶ ಸಂಗೋಪನೆಗೆ 4.90 ಕೋಟಿ ರು. ಮೀನುಗಾರಿಕೆಗೆ 34 ಲಕ್ಷ ರು., ಅರಣ್ಯ (ಭೂಸಾರ ಸಂರಕ್ಷಣೆ ಸೇರಿ)ಕ್ಕೆ 55 ಲಕ್ಷ ರು., ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಕ್ಕೆ 19 ಲಕ್ಷ ರು., ಗ್ರಾಮೀಣ ಇಂಧನ ಕಾರ್ಯಕ್ರಮಗಳಿಗೆ 1.75 ಕೋಟಿ ರು., ಪಂಚಾಯತರಾಜ್ ಸಂಸ್ಥೆಗಳಿಗೆ ಅನುದಾನಕ್ಕೆ 60 ಲಕ್ಷ ರು., ಸಣ್ಣ ನೀರಾವರಿಗೆ 35.86 ಕೋಟಿ ರು., ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಕ್ಕೆ 10 ಲಕ್ಷ ರು., ರೇಷ್ಮೆಗೆ 15.75 ಲಕ್ಷ ರು., ರಸ್ತೆ ಮತ್ತು ಸೇತುವೆಗೆ 37 ಲಕ್ಷ ರು., ಸಚಿವಾಲಯ ಆರ್ಥಿಕ ಸೇವೆಗಳು ಜಿಲ್ಲಾ ಯೋಜನೆ ಘಟಕಕ್ಕೆ 3.60 ಲಕ್ಷ ರು. ಹಾಗೂ ಇತರೆ ಸೇರಿದಂತೆ 238 ಕೋಟಿ 06 ಲಕ್ಷದ 24 ಸಾವಿರ ಅನುದಾನ ನಿಗದಿಪಡಿಸಲಾಗಿದೆ ಎಂದರು. ಇನ್ನು ಯೋಜನೇತರ ಕಾರ್ಯಕ್ರಮಗಳಾದ ಲೋಕೋಯಪಯೋಗಿ ಇಲಾಖೆಗೆ 7.48 ಕೋಟಿ ರು., ಸಾಮಾನ್ಯ ಶಿಕ್ಷಣಕ್ಕೆ 3.80 ಕೋಟಿ ರು., ಕ್ರೀಡೆ ಮತ್ತು ಯುವಜನ ಸೇವೆಗೆ 13.62 ಲಕ್ಷ ರು., ವೈದ್ಯಕೀಯ, ಜನಾರೋಗ್ಯಕ್ಕೆ 35.74 ಕೋಟಿ ರು., ಕುಟುಂಬ ಕಲ್ಯಾಣಕ್ಕೆ 18.90 ಲಕ್ಷ ರು., ನೀರು ಸರಬರಾಜು, ನೈರ್ಮಲ್ಯಕ್ಕೆ 16.54 ಲಕ್ಷ ರು., ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 18.13 ಕೋಟಿ ರು., ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗೆ 19.70 ಕೋಟಿ ರು., ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕೆ 64.06 ಲಕ್ಷ ರು., ಪೌಷ್ಠಿಕ ಆಹಾರಕ್ಕೆ 15.94 ಕೋಟಿ ರು., ಸಸ್ಯ ಸಂಗೋಪನೆಗೆ 7.41 ಕೋಟಿ ರು., ಭೂಸಾರ ಮತ್ತು ಜಲ ಸಂರಕ್ಷಣೆಗೆ 2.22 ಕೋಟಿ ರು., ಪಶು ಸಂಗೋಪನೆಗೆ 14.25 ಕೋಟಿ ರು., ಮೀನುಗಾರಿಕೆಗೆ 71.92 ಕೋಟಿ ರು., ಅರಣ್ಯ ಮತ್ತು ವನ್ಯ ಜೀವನಕ್ಕೆ 2.49 ಕೋಟಿ ರು., ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ 17.91 ಕೋಟಿ ರು., ಸಣ್ಣ ನೀರಾವರಿ 2.23 ಕೋಟಿ ರು., ಗ್ರಾಮೋದ್ಯಮ, ಸಣ್ಣ ಉದ್ಯಮಕ್ಕೆ 3.75 ಕೋಟಿ ರು., ಸೇರಿದಂತೆ 530 ಕೋಟಿ 79 ಲಕ್ಷದ 62 ಸಾವಿರ ರು.ಗಳ ಯೋಜನೇತರ ಕಾರ್ಯಕ್ರಮಗಳಿಗೆ ಅನುದಾನ ನಿಗದಿಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

