ಎಡಿಜಿಪಿ ರವೀಂದ್ರನಾಥ ವರ್ಗ ಖಂಡಿಸಿ ಪ್ರತಿಭಟನೆ
ಹಾಸನ: ಕೆಎಸ್ಆರ್ಪಿಯ ಎಡಿಜಿಪಿ ರವೀಂದ್ರ ನಾಥ ಅವರ ಮೇಲಿನ ಆರೋಪಗಳು ಸುಳ್ಳಾಗಿದ್ದು, ಅವರನ್ನು ವರ್ಗಾಹಿಸಿರುವುದನ್ನು ಖಂಡಿಸಿ ಹಾಸನದ ಕೆಎಸ್ಆರ್ಪಿಯ 11ನೇ ಬಿಟಾಲಿಯನ್ ಸಿಬ್ಬಂದಿ ಗುರುವಾರ ಪ್ರತಿಭಟನ ನಡೆಸಿದರು.
ಪ್ರತಿಭಟನಕಾರರು ನಗರದ 11ನೇ ಪಡೆ ಕೆಎಸ್ಆರ್ಪಿಯ ಕಮಾಂಡೆಂಟ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಪೊಲೀಸ್ ಅಧಿಕಾರಿ ರವಿಕಾಂತೇಗೌಡರ ವಿರುದ್ಧ ಘೋಷಣೆ ಕೂಗಿದರು.
ಎಡಿಜಿಪಿ ರವೀಂದ್ರನಾಥ್ ಬಹಳ ಉತ್ತಮ ಹಾಗೂ ಒಳ್ಳೆಯ ಅಧಿಕಾರಿಯಾಗಿದ್ದು, ಅವರು ಈ ರೀತಿಯ ಕೃತ್ಯ ಎಸಗುವಂತಹ ವ್ಯಕ್ತಿಯಲ್ಲ. ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿ ಇರುವಂತಹ ರವೀಂದ್ರ ನಾಥ್ ಅವರ ಏಳಿಗೆ ಸಹಿಸಲಾರದಂತಹವರು ಈ ರೀತಿಯ ಪಿತೂರಿ ನಡೆಸಿ ರವೀಂದ್ರನಾಥ್ ವಿರುದ್ಧ ಅಪಪ್ರಚಾರನಡೆಸಿದ್ದಾರೆ. ಇದು ಖಂಡನೀವಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಫಿ ಶಾಪ್ನಲ್ಲಿ ಹುಡುಗಿಯ ಪೋಟೊ ತೆಗೆದಿದ್ದಾರೆ ಎಂಬ ಕಾರಣ ವೊಡ್ಡಿ ಅವರ ವಿರುದ್ಧ ಹುಡುಗಿಯರ ಕೈಯಲ್ಲಿ ದೂರು ಕೊಡಿಸಿದ್ದಾರೆ. ಆ ಹುಡುಗಿಯವರು ಘಟನೆ ನಡೆದಾಗ ದೂರು ನೀಡುವದನ್ನು ಬಿಟ್ಟು ಸಂಜೆ ಬಂದು ದೂರು ನೀಡಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರ ಕೈವಾಡವಿದೆ. ರವೀಂದ್ರನಾಥ್ ಅವರ ವಿರುದ್ಧ ಔರಾದ್ಕರ್ ಮೊದಲಿನಿಂದಲೂ ತೊಂದರೆ ನೀಡಿಕೊಂಡು ಬರುತ್ತಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಲ್ಲದೆ ರವೀಂದ್ರ ನಾಥ್ ವಿರುದ್ಧ ಅಸಭ್ಯವಾಗಿ ವರ್ತಿಸಿದ ಸಬ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

