ಹಾಸನ

ಸಕಲೇಶಪುರ ದೊಡ್ಡಕೆರೆ ಅಭಿವೃದ್ಧಿವೈಖರಿಗೆ ಸ್ಥಳೀಯರ ಅಸಮಾಧಾನ

Published On :

ಕನ್ನಡಪ್ರಭ ವಾರ್ತೆ ಸಕಲೇಶಪುರ ಮೇ 30
ಬಹು ಮಹತ್ವಾಕಾಂಕ್ಷೆಯ ಪಟ್ಟಣದ ದೊಡ್ಡಕೆರೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವ ವೈಖರಿಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಲಕ್ಷ್ಮಿಪುರಂ ಬಡಾವಣೆಯ ನಿವಾಸಿಗಳು ಕೆರೆಯ ಬಳಿ ಶುಕ್ರವಾರ ಜಮಾಯಿಸಿ ಪ್ರತಿಭಟನೆ ನಡೆಸಲು ಮುಂದಾದರಾದರು ಕೊನೆಕ್ಷಣದಲ್ಲಿ ಕೆಲವು ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ. ಕೆರೆ ಅಭಿವೃದ್ದಿ ಪಡಿಸಿ ವಿಹಾರಧಾಮವಾಗಿ ರೂಪಿಸುವ ಕನಸಿನೊಂದಿಗೆ ಕೆರೆ ಅಭಿವೃದ್ದಿ ಮಾಡಲಾಗುತ್ತಿದೆ. ದೊಡ್ಡಕೆರೆ 9.5 ಎಕರೆ ವಿಸ್ತೀರ್ಣದಲ್ಲಿದ್ದು ಇದರಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 3 ಎಕರೆ ಕೆರೆ ಜಾಗ ಬಿಟ್ಟುಕೊಡಲಾಗಿದೆ. ಇನ್ನುಳಿದ 6.5 ಎಕರೆ ಕೆರೆಯನ್ನು ಅಭಿವೃದ್ದಿ ಪಡಿಸಬೇಕಿದ್ದು ಸುಮಾರು 2 ಎಕರೆಗೂ ಹೆಚ್ಚಿನ ಜಾಗ ಖಾಸಗಿಯವರಿಂದ ಒತ್ತುವರಿಯಾಗಿದೆ ಎಂದು ಹೇಳಲಾಗುತ್ತಿದೆ.

ಒತ್ತುವರಿ ಜಾಗ ಬಿಟ್ಟು ಅಭಿವೃದ್ದಿ ಏಕೆ  
ಆದರೆ, ಕೆರೆ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ತಾಲೂಕು ಆಡಳಿತ, ಕೆರೆ ಜಾಗವನ್ನು ಗುರುತಿಸಿ ಕೊಡದ ಕಾರಣದಿಂದಾಗಿ ಗುತ್ತಿಗೆದಾರರು ಒತ್ತುವರಿ ಜಾಗವನ್ನು ಹಾಗೆಯೆ ಬಿಟ್ಟು ಅಭಿವೃದ್ದಿ ಕಾಮಗಾರಿ ನಡೆಸುತ್ತಿದ್ದಾರೆ. ಕೆರೆ ಕಾಮಗಾರಿ ಕೆಲಸ ಆರಂಭವಾಗಿ ಮೂರು ತಿಂಗಳು ಕಳೆದರೂ ಇದುವರಗೆ ಕೆರೆಯ ಹೂಳನ್ನು ಎತ್ತಲಾಗಿಲ್ಲ. ಮಳೆಗಾಲ ಆರಂಭವಾಗಿ ಕೆರೆಯಲ್ಲಿ ನೀರು ತುಂಬಿದ ನಂತರ ಹೂಳೆತ್ತಲು ಸಾಧ್ಯವಿಲ್ಲ ಎಂದು ಬಡಾವಣೆಯ ನಿವಾಸಿಗರು ಆರೋಪಿಸುತ್ತಾರೆ. ದಶಕದ ಹೋರಾಟದ ನಂತರ ಆರಂಭವಾಗಿರುವ ಕೆರೆ ಅಭಿವೃದ್ದಿ ಕಾಮಗಾರಿಯ ಬಗ್ಗೆ ಜನರು ಬಾರಿ ನಿರೀಕ್ಷೆ ಹೊಂದಿದ್ದು ಸಮರ್ಪಕ ಕಾಮಗಾರಿ ನಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ.ಪಿ. ಕೃಷ್ಣಪ್ಪ, ಬಿ.ಕೆ. ಮಹೇಶ್, ಕೆ.ಡಿ ರಾಜು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.