ದಲಿತ ಹಿತರಕ್ಷಣಾ ಸಭೆ: ಸಮಸ್ಯೆಗಳ ಅಲವತ್ತುಕೊಂಡ ಸದಸ್ಯರು
ಅರಸೀಕೆರೆ: ಪಟ್ಟಣದ ಹಾಸನ ರಸ್ತೆಯಲ್ಲಿರುವ ಅಂಬೇಡ್ಕರ್ ಗ್ರಂಥಾಲಯದಲ್ಲಿ ದಲಿತ ಹಿತರಕ್ಷಣಾ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಸಮಸ್ಯೆಗಳ ಪಟ್ಟಿಯನ್ನು ನಗರಠಾಣೆ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡರ ಮುಂದಿಟ್ಟರು.
ಸಂಜೆ ವೇಳೆ ರಸ್ತೆಯ ಎಡಬದಿಗಳಲ್ಲಿ ಕುಡುಕರ ಕಾಟ ಮಿತಿಮೀರಿದೆ. ದ್ವಿಚಕ್ರವಾಹನ ಸವಾರರು ಅಜಾಗರೂಕತೆ ಗಾಡಿ ಚಲಾಯಿಸುವ ಮೂಲಕ ಭೀತಿ ಹುಟ್ಟಿಸತೊಡಗಿದ್ದಾರೆ. ಹಾಸನ ರಸ್ತೆಯ 8ನೇ ತಿರುವಿನಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದೆ. ಜಾನುವಾರಗಳ ರಕ್ತವನ್ನು ಒಳಚರಂಡಿಗೆ ಬಿಡಲಾಗುತ್ತಿದ್ದು ಇದರಿಂದ ರೋಗ ರುಜಿನಗಳು ಹಬ್ಬುವ ಭೀತಿ ಹೆಚ್ಚಾಗಿದೆ, ಎಂಬ ಆತಂಕ ವ್ಯಕ್ತಪಡಿಸಿದರು.
ಪಿಎಸ್ಐ ಅಯ್ಯನಗೌಡ ಮಾತನಾಡಿ, ಪಟ್ಟಣದ ನಾನಾ ಕಡೆ ಅಕ್ರಮ ಮದ್ಯಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮಟ್ಕಾ ದಂಧೆ ನಡೆಸುತ್ತಿರುವವರಿಗೆ ಬಿಸಿ ಮುಟ್ಟಿಸಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ವಿರುದ್ಧ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಬೇಕು. ಆಗ ಮಾತ್ರ ಇಂತಹ ಸಮಾಜಘಾತಕರನ್ನು ಮಟ್ಟಹಾಕಲು ಸಾಧ್ಯವಾಗುತ್ತದೆ. ಖಸಾಯಿಖಾನೆ ನಡೆಸುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ, ಮನಬಂದಂತೆ ದ್ವಿಚಕ್ರವಾಹನ ಚಲಾಯಿಸುವವರಿಗೆ ತಕ್ಕಶಾಸ್ತಿ ಕಾದಿದೆ ಎಂದು ಎಚ್ಚರಿಸಿದರು.
ಪತ್ರಕರ್ತ ಶೇಖರ್ ಸಂಕೋಡನಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ರಂಗಸ್ವಾಮಿ, ಮಂಜುನಾಥ್, ದಲಿತ ಸಮುದಾಯದ ಮುಖಂಡರಾದ ಶಿವನ್ರಾಜ್, ಪಳನಿಅಪ್ಪು, ಆನಂದ್ಕುಟ್ಟಿ, ಮಂಜುನಾಥ್.ಬಿ, ಸುರೇಂದ್ರಬಾಬು, ರಾಘು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

