ಅಕ್ರಮ ತಡೆಗೆ ಅಬಕಾರಿ ನಿಯಂತ್ರಣ ದಳ ರಚನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 1
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭ ಚುನಾವಣೆ ಸದಾಚಾರ ಸಂಹಿತೆ ಜಾರಿ ಅಂಗವಾಗಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಾಗಾಟ, ಮಾರಾಟ ಮತ್ತು ಅಕ್ರಮ ಮದ್ಯದ ದಾಸ್ತಾನು ಸಾಗಾಟ ಹಾಗೂ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅವರ ನೇರ ಅಧೀನದಲ್ಲಿ ಮುಖ್ಯ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಅಬಕಾರಿ ಉಪ ಆಯುಕ್ತರ ಕಚೇರಿ ಅಬಕಾರಿ ನಿರೀಕ್ಷಕಿ ಪ್ರತಿಭಾ ಹಿತ್ತಲಮನಿ ಅವರನ್ನು ಹಾವೇರಿ ಜಿಲ್ಲಾ ಮಟ್ಟದ ಕಂಟ್ರೋಲ್ ಯೂನಿಟ್ ನೋಡಲ್ ಅಧಿಕಾರಿಗಳನ್ನಾಗಿ(ದೂರವಾಣಿಟ 08375ಟ 249063, ಮೊಟ 9739232946 ನೇಮಿಸಲಾಗಿದೆ.
ಪ್ರತಿ ತಾಲೂಕಿನಲ್ಲಿ ಜರುಗಬಹುದಾದ ಅಕ್ರಮ ಮದ್ಯದ ಹಾವಳಿ ತಡೆಗಟ್ಟಲು, ತಾಲೂಕಿನ ವಲಯ ನಿರೀಕ್ಷಕರ ನೇತೃತ್ವದಲ್ಲಿ ಅಬಕಾರಿ ನಿಯಂತ್ರಣ ದಳದವರನ್ನು ರಚಿಸಲಾಗಿದೆ.
ಆಯಾ ತಾಲೂಕಿನ ವಲಯ ಅಬಕಾರಿ ನಿರೀಕ್ಷಕರು ನೋಡೆಲ್ ಅಧಿಕಾರಿಗಳಾಗಿರುತ್ತಾರೆ ಎಂದು ಜಿಲ್ಲಾ ಅಬಕಾರಿ ಅಧೀಕ್ಷಕರು ತಿಳಿಸಿದ್ದಾರೆ.
ಹಾವೇರಿ ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ದೂರವಾಣಿಟ 08375ಟ 235265 ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೆ ದ್ವಿತೀಯ ದರ್ಜೆ ಸಹಾಯಕ ಎಸ್.ಬಿ. ಚೌಕಿಮಠ ಹಾಗೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8ರ ವರೆಗೆ ಪ್ರಥಮ ದರ್ಜೆ ಸಹಾಯಕ ಎಂ.ವಿ. ಬಸರಿಕಟ್ಟಿ ಕರ್ತವ್ಯ ನಿರ್ವಹಿಸುವರು.
ರಾಣಿಬೆನ್ನೂರು ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ ದೂರವಾಣಿಟ 08373ಟ 267587, ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಆರ್.ಎಫ್. ಬಂಕಾಪುರ ಹಾಗೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8ರ ವರೆಗೆ ಪ್ರಥಮ ದರ್ಜೆ ಸಹಾಯಕ ಭೂಪತಿ ಕರ್ತವ್ಯ ನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

