ಪ್ರಾಮಾಣಿಕವಾಗಿ ಮತ ಚಲಾಯಿಸಿ: ರೇವಣ್ಣ
ಶಿಗ್ಗಾಂವಿ: ಆಸೆ ಆಮಿಷಗಳಿಗೆ ಒಳಪಡದೆ, ಹೆದರಿಕೆ ಬೆದರಿಕೆಗಳಿಗೆ ಅಂಜದೆ, ಮದ್ಯ ಸೇವನೆಗೆ ಬಲಿಯಾಗದೆ, ಒಡವೆ ವಸ್ತ್ರಗಳ ಆಮಿಷಕ್ಕೆ ಒಳಗಾಗದೆ ವಿದ್ಯಾರ್ಥಿಗಳು ಅಮೂಲ್ಯವಾದ ತಮ್ಮ ಮತವನ್ನು ನಿಷ್ಠಾವಂತ ವ್ಯಕ್ತಿಗಳಿಗೆ ನೀಡಬೇಕೆಂದು ಶಿಗ್ಗಾಂವಿ ತಾಪಂ ಇಓ ಬಿ. ರೇವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಗ್ಗಾಂವಿ ತಾಪಂ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013 ಅಂಗವಾಗಿ ಮತದಾನದಲ್ಲಿ ಹೆಚ್ಚಿನ ಪ್ರಮಾಣ ಮತದಾನ ಮಾಡುವ ಕುರಿತು ಶಿಸ್ತುಬದ್ಧ ತರಬೇತಿ ನೀಡುವ ಹಾಗೂ ಮತದಾನದಲ್ಲಿ ಪಾಲ್ಗೊಳ್ಳುವಿಕೆ ಕುರಿತು ಮತದಾನ ಜಾಗೃತಿ (ಸ್ವೀಪ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ.ಎಸ್.ಜಿ. ವಿಭೂತಿ, ಮತದಾನದ ಮೌಲ್ಯ, ಮತದಾರರ ಗುರುತಿನ ಚೀಟಿ ಪಡೆಯುವ ವಿಧಾನಗಳು, ಮತ ಚಲಾಯಿಸುವ ವಿಧಾನಗಳು ಹಾಗೂ ಮತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ಎಂ. ಜಯದೇವಯ್ಯ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಎಂಎಂ ವಿಸ್ತರಣಾಧಿಕಾರಿ ಎಸ್.ಬಿ. ಕಂಬಿ, ಕಚೇರಿ ಅಧೀಕ್ಷಕ ಪಿ.ಎ. ಭಜಂತ್ರಿ, ನಿಲಯಪಾಲಕ ಮಾಲತೇಶ ಸಿ.ಬಿ, ರಾಜೇಶ್ವರಿ ಲದ್ದಿಮಠ, ವಿ.ಎಸ್. ಬೂದಿಹಾಳ, ರಾಘವೇಂದ್ರ ವೇರ್ಣೇಕರ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯದ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಯಲ್ಲಪ್ಪ ತಳವಾರ ಸ್ವಾಗತಿಸಿದರು. ರಮೇಶ ಆರ್. ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ಚಿಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

