ಪ್ರಾದೇಶಿಕ ಪಕ್ಷಗಳತ್ತ ಒಲವು: ಉದಾಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 9
ಹಾನಗಲ್ಲ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿದ್ಧರಾಮಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಎಂ. ಉದಾಸಿ ಸಮ್ಮುಖದಲ್ಲಿ ಮಂಗಳವಾರ ಕರ್ನಾಟಕ ಜನತಾ ಪಕ್ಷ ಸೇರಿದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯೂ ಆಗಿರುವ ಸಿ.ಎಂ. ಉದಾಸಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಸಮಸ್ಯೆಗಳ ಸುಳಿಯಲ್ಲಿವೆ. ಇದು ದೇಶದಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿಯಾಗುತ್ತಿದೆ. ರಾಜ್ಯ ರಾಜಕಾರಣವೂ ಬದಲಾಗುತ್ತಿದ್ದು, ಪ್ರಾದೇಶಿಕ ಪಕ್ಷಗಳತ್ತ ಮತದಾರರ ಒಲವು ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಜನತೆ ಗಮನ ಸೆಳೆಯುತ್ತಿದೆ. ಸುಭದ್ರ, ಅಭಿವೃದ್ಧಿಪರ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದರು. ಪಕ್ಷದಲ್ಲಿ ಹಳಬರು-ಹೊಸಬರು ಎಂಬ ಭೇದಕ್ಕೆ ಅವಕಾಶ ನೀಡದೆ ಸೇವಾ ಮನೋಭಾವನೆಯಿಂದ ಒಗ್ಗಟ್ಟಾಗಿ ಸಂಘಟನೆಗೆ ಮುಂದಾಗಬೇಕು. ಆ ಮೂಲಕ ಕೆಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿವಿಧ ಪಕ್ಷಗಳ ಯಲ್ಲಪ್ಪ ಚಲವಾದಿ, ಮಲ್ಲಿಕಾರ್ಜುನ ಸುಣಗಾರ, ನಿಸ್ಸಾರ ಅಹ್ಮದ ಲೋಹಾರ, ಕಾಶೀನಾಥ ಕಲಾಲ, ಪ್ರವೀಣ ಸುಲಾಖೆ, ಗೋಪಾಲ ಹುಲಗಿನಹಳ್ಳಿ, ಮುಕ್ತಾರ ಅಹ್ಮದ ಬಾಳೂರ, ಮಂಜುನಾಥ ಅಗಸಿಬಾಗಿಲ, ಖ್ವಾಜಾ ಮೊದ್ದೀನ ಮನಿಯಾರ, ಬಾಷಾಸಾಬ ಮೋಡಿ, ರಾಘವೇಂದ್ರ ಬಂಡಿವಡ್ಡರ, ಮಖಬೂಲ ಅಹ್ಮದ ಲೋಹಾರ, ರಿಯಾಜ ಅಹ್ಮದ ಸಾಂವಿಕೇರಿ, ಅಬ್ದುಲಖಾದರ ಅಬ್ದುಲ ಮುನಾಫ ಬಾಳೂರ ಕೆಜೆಪಿ ಸೇರಿದ ಪ್ರಮುಖರು. ಕೆಜೆಪಿ ನಗರ ಅಧ್ಯಕ್ಷ ರಾಜು ಗೌಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಕರೆಣ್ಣನವರ, ಮುಖಂಡರಾದ ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಚಮನಸಾಬ ಕಿತ್ತೂರ, ಗಣೇಶ ಮೂಡ್ಲಿಯವರ್, ಮುರಲೀಧರ ಕಾಮನಹಳ್ಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

