ವೀರಭದ್ರೇಶ್ವರ ಜಾತ್ರೋತ್ಸವ 17ರಿಂದ
ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ನಿಂದ ಏ. 17ರಿಂದ 22ರ ವೆರೆಗೆ ವೀರಭದ್ರೇಶ್ವರ ಸ್ವಾಮೀಯ ಗುಗ್ಗಳ ಮತ್ತು ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ. ಏ. 17ರಂದು ರಾತ್ರಿ 8 ಗಂಟೆಗೆ ಕಂಕಣಧಾರಣೆ, 18ರಂದು ಕುದುರೆ ಉತ್ಸವ, 19ರಂದು ಆನೆ ಉತ್ಸವ, 20ರಂದು ಹೂವಿನ ತೇರು, 21ರಂದು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಎಡೆ ಕೊಡುವುದು, ಜವಳ, ಹರಕೆ, ಮುಡುಪು ಒಪ್ಪಿಸಲಾಗುವುದು. 22ರಂದು ದೊಡ್ಡ ರಥೋತ್ಸವ ಜರುಗುವುದು. ಅದೇ ದಿನ ಚಿಕ್ಕೇರೂರಿನ ಶ್ರೀ ಕೋನಪ್ಪ ಶೆಟ್ಟರ್ ಮತ್ತು ವಂಶಸ್ಥರಿಂದ ಅನ್ನಸಂತರ್ಪಣೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಟ್ಟಿಹಳ್ಳಿ ಘಟಕದವರು ತಂಪು ಪಾನೀಯ ವಿತರಿಸುವರು. ವಾರ್ಷಿಕ ಲೆಕ್ಕಪತ್ರ 23ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟಿ ವಿ.ಆರ್. ಶೆಟ್ಟರ್ ತಿಳಿಸಿದ್ದಾರೆ.
ಇಂದು ಜಿ. ಶಿವಣ್ಣ ನಾಮಪತ್ರ ಸಲ್ಲಿಕೆ
ರಾಣಿಬೆನ್ನೂರು: ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಜಿ. ಶಿವಣ್ಣ ಅವರು ಏ. 15ರಂದು ಬೆಳಗ್ಗೆ 11 ಗಂಟೆಗೆ ಪಕ್ಷದ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ತಾಲೂಕು ಕೆಜೆಪಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನ ಬಹಿಷ್ಕಾರಕ್ಕೆ ಹುಲ್ಲತ್ತಿ ಗ್ರಾಮಸ್ಥರ ನಿರ್ಧಾರ
ರಾಣಿಬೆನ್ನೂರು: ಕಳೆದ 60 ವರ್ಷಗಳಿಂದ ರಸ್ತೆಯನ್ನೆ ಕಾಣದ ತಾಲೂಕಿನ ಹುಲ್ಲತ್ತಿ ಗ್ರಾಮಕ್ಕೆ ನಗರದಿಂದ ಗ್ರಾಮದವರೆಗೆ ನಮ್ಮ ಹೊಲ ನಮ್ಮ, ರಸ್ತೆ ಯೋಜನೆ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಿರುವ ರಸ್ತೆಯನ್ನು ಹುಲ್ಲತ್ತಿ ಗ್ರಾಮಸ್ಥರು ಸಂಚರಿಸಲು ಬಿಟ್ಟು ಕೊಡಲಿಲ್ಲ. ಗ್ರಾಮಸ್ಧರಿಗೆ ತೊಂದರೆ ನೀಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಂದ ರಸ್ತೆಯನ್ನು ಬಿಡಿಸಿಕೊಡದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ನಿರ್ಧರಿಸಿರುವುದಾಗಿ ಹುಲ್ಲತ್ತಿ ಗ್ರಾಮಸ್ಧರು ರಾಜ್ಯಪಾಲರಿಗೆ ಪತ್ರ ಕಳುಹಿಸಿರುವುದಾಗಿ ಪ್ರಕಟಣೆ ತಿಳಿಸಿದೆ.
ಬೆಳ್ಳಿ ಛತ್ರಿ ಅರ್ಪಣೆ
ಶಿಗ್ಗಾಂವಿ: ಪಟ್ಟಣದ ಮೈಲಾರ ದೇವರ ಗುಡಿ ಓಣಿಯ ನಿವಾಸಿಗಳು ಇಲ್ಲಿಯ ಗ್ರಾಮದೇವಿಗೆ ಒಂದು ಕೆಜಿ ಬೆಳ್ಳಿಯ ಛತ್ರಿಯನ್ನು ಅರ್ಪಿಸಿದರು. ಗ್ರಾಮ ದೇವತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ರಾಚನಕಟ್ಟಿ ಹೊಸ ಬಸ್ ನಿಲ್ದಾಣ ಹೊಸಪೇಟೆ, ಹಳಪೇಟೆ ಮುಖಾಂತರ ಸಕಲ ವಾದ್ಯಗಳೊಂದಿಗೆ ಹಾಗೂ ಜಾಂಜ್ ಮೇಳದೊದಿಗೆ ವಿಜೃಂಬಣೆಯಿಂದ ವಿವಿಧ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತೆರಳಿ ಬೆಳ್ಳಿಯ ಛತ್ರಿಯನ್ನು ಗ್ರಾಮ ದೇವತೆಗೆ ಅರ್ಪಿಸಿದರು. ಈ ಸಂದರ್ಭ ವಾರ್ಡಿನ ಸದಸ್ಯ ಪ್ರಸಾದ ಸುರಗಿಮಠ, ಸಣ್ಣಪ್ಪ ಬುಳ್ಳಕ್ಕನವರ, ಸಂಗಣ್ಣಾ ಮೊರಬದ, ಸಾದೇವಪ್ಪ ಕಬನೂರ, ಮಾದೇವಪ್ಪ ಬಾದಮಗಟ್ಟಿ, ರಾಮಣ್ಣಾ ಕ್ಯಾಲಕೋಡ, ಫಕ್ಕಿರಪ್ಪ ಕುದುಂರ, ಮಾದೇವಪ್ಪ ದುಂಡಪ್ಪನವರ, ಮಂಜು ಕಮ್ಮಾರ, ಸೋಮು ಬುಳಕ್ಕನವರ, ಶಿವಪುತ್ರಪ್ಪ ಆಸಕಟ್ಟಿ, ಆನಂದ ಕುದುಂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

