ಹೀರೋ ಇಲ್ಲದೆ ಬಿಜೆಪಿ ಝೀರೋ
ಕನ್ನಡಪ್ರಭ ವಾರ್ತೆ, ಹಾನಗಲ್, ಏ. 15
ನಾಯಕತ್ವ ಕೊರತೆಯಿಂದ ನಲುಗುತ್ತಿರುವ ಭಾರತೀಯ ಜನತಾ ಪಕ್ಷ ಈಗ ಹೀರೋ ಇಲ್ಲದೆ ಝೀರೋ ಆಗಿದೆ ಎಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ವ್ಯಂಗ್ಯವಾಡಿದರು.
ತಾಲೂಕಿನ ಹುಡಾ ಗ್ರಾಮದಲ್ಲಿ ಸೋಮವಾರ ಮತ ಯಾಚಿಸಿ ಮಾತನಾಡಿದ ಅವರು, ರಾಜ್ಯ ಕಂಡ ಮುಖ್ಯಮಂತ್ರಿಗಳ ಪೈಕಿ ರೈತಪರ ಕಾಳಜಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಅಧಿಕಾರವಧಿಯಲ್ಲಿ ರೈತಪರ ಬಜೆಟ್ ಮಂಡಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆದಿದ್ದರು ಎಂದರು.
ಹಲವು ದಶಕಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಿಕೊಂಡಿದೆ ಮಾತ್ರವಲ್ಲದೇ, ಈ ಸಮುದಾಯ ಶಿಕ್ಷಣ ವಂಚಿತರನ್ನಾಗಿಸಿದೆ ಎಂದು ದೂಷಿಸಿದರು.
ಅಲ್ಪಸಂಖ್ಯಾತರಿಗೆ ಸೌಲಭ್ಯ: ಬಿಎಸ್ವೈ ಸಿಎಂ ಆಗಿದ್ದ ಸಂದರ್ಭದಲ್ಲಿ ರು. 350 ಕೋಟಿಗಳನ್ನು ಈ ಸಮುದಾಯದ ಅಭಿವೃದ್ಧಿಗೆ ತೆಗೆದಿರಿಸಿದ್ದರು.
ಹಜ್ ಭವನ, ಉರ್ದು ತರಗತಿಯ ವಿದ್ಯಾರ್ಥಿಗಳಿಗೆ ತಲಾ ರು. 1 ಸಾವಿರ ವಿದ್ಯಾರ್ಥಿ ವೇತನ ನೀಡಲಾಗಿದೆ.
ಎಲ್ಲ ತಾಲೂಕುಗಳಲ್ಲಿ ಶಾದಿ ಮಹಲ್ಗಳ ನಿರ್ಮಾಣ, ಉರ್ದು ಪ್ರೌಢ ಶಾಲೆಗಳ ಸ್ಥಾಪನೆ ಮಾಡಿದ ಕೀರ್ತಿ ಬಿಎಸ್ವೈ ಅವರಿಗೆ ಸಲ್ಲುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ಇಂದು ಮುಸ್ಲಿಂ ಬಾಂಧವರು ಕೆಜೆಪಿಗೆ ಹರಿದು ಬರುತ್ತಿದ್ದಾರೆ ಎಂದು ಉದಾಸಿ ಹೇಳಿದರು.
ಮತಯಾಚನೆ: ತಾಲೂಕಿನ ಯಳ್ಳೂರ, ಯಲಿವಾಳ, ಬೈಲವಾಳ, ಆರೆಗೊಪ್ಪ, ಹುಲ್ಲತ್ತಿ, ಹಸನಾಬಾದಿ, ದಶರಥಕೊಪ್ಪ, ಗುಡಗುಡಿ, ರಾಮತೀರ್ಥ-ಹೊಸಕೊಪ್ಪ, ಗಾಜೀಪೂರ, ಕೊಪ್ಪರಸಿಕೊಪ್ಪಗಳಲ್ಲಿ ಸಂಚರಿಸಿ ಉದಾಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ತಾಪಂ ಸದಸ್ಯ ಹನುಮಂತಪ್ಪ ಗೊಂದಿ, ಮಂಜುಳಾ ಕಾಮನಹಳ್ಳಿ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಗಣೇಶ ಮೂಡ್ಲಿ, ರವಿಕಿರಣ ಪಾಟೀಲ, ನಾಗೇಂದ್ರ ತುಮರಿಕೊಪ್ಪ, ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

