ಹಾವೇರಿ

ಸಾಮಾನ್ಯ, ಪೊಲೀಸ್ ವೀಕ್ಷಕರ ನೇಮಕ

Published On :

ಹಾವೇರಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ-2013ರ ಅಂಗವಾಗಿ ಜಿಲ್ಲೆಯ ಆರು ಕ್ಷೇತ್ರಗಳಿಗೆ ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಕರಿಗೆ ಲೈಜನ್ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ಲ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಅನುಗಾರ ಚೌಧರಿ(ಮೊ.9422317120), ಲೈಸನ್ ಅಧಿಕಾರಿಯಾಗಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹಾಗೂ ತಾಂತ್ರಿ ಸಿಬ್ಬಂದಿಯಾಗಿ ಹಾನಗಲ್ಲ ಪುರಸಭೆ ತಾಂತ್ರಿಕ ಸಹಾಯಕ ಕಿರಣ ಎಸ್.ಪಾಟೀಲ ನೇಮಕವಾಗಿದ್ದಾರೆ. ಶಿಗ್ಗಾಂವ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಕುಮಾರ ವಿನೋದ ಮಾರಾಯಣ ಸಿಂಗ್ (ಮೊ.9431632268), ಲೈಸನ್ ಅಧಿಕಾರಿಯಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ(ಮೊ. 9739788642) ಹಾಗೂ ತಾಂತ್ರಿಕ ಸಿಬ್ಬಂದಿಯಾಗಿ ಮಹಾದೇವ ಹೂಗಾರ ನೇಮಕವಾಗಿದ್ದಾರೆ. ಹಾವೇರಿ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಟಿ.ನಟರಾಜನ್ (ಮೊ.9978406048), ಲೈಸನ್ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟ (ಮೊ.94483 38806) ತಾಂತ್ರಿಕ ಸಿಬ್ಬಂದಿಯಾಗಿ ರಾಜೇಶ್ವರಿ ಬಿ.ಮಠದ ನೇಮಕವಾಗಿದ್ದಾರೆ. ಬ್ಯಾಡಗಿ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಸಿ.ಟಿ.ಮಣಿ ಮೇಕಳಾಯು (ಮೊ.9444266242), ಲೈಸನ್ ಅಧಿಕಾರಿಯಾಗಿ ರಾಣೇಬೆನ್ನೂರ ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರಿ(ಮೊ.9448685195), ತಾಂತ್ರಿಕ ಸಿಬ್ಬಂದಿಯಾಗಿ ಬ್ಯಾಡಗಿ ಪುರಸಭೆ ತಾಂತ್ರಿಕ ಸಹಾಯಕ ಶಿವಕುಮಾರ ಹಲಗಣ್ಣನವರ ನೇಮಕವಾಗಿದ್ದಾರೆ. ಹಿರೇಕೆರೂರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಶ್ಯಾಮಕೃಷ್ಣ(ಮೊ.9838922229), ಲೈಸನ್ ಅಧಿಕಾರಿಯಾಗಿ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಆರ್.ಬಿ. ಹಿರೇಗೌಡರ(ಮೊ. 9449122223), ತಾಂತ್ರಿಕ ಸಿಬ್ಬಂದಿಯಾಗಿ ಹಿರೇಕೆರೂರ ಸರ್ವೇಯರ ಎಸ್.ಕೆ.ಐರಣಿ ಹಾಗೂ ರಾಣೇಬೆನ್ನೂರು ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ರಾಮೊಂಗೋ ಲೋಥಾ(ಮೊ. 9436608373), ಲೈಸನ್ ಅಧಿಕಾರಿಯಾಗಿ ರಾಣೇಬೆನ್ನೂರು ತುಂಗಾಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧಿನಾಧಿಕಾರಿ ಇಸ್ಮಾಯಿಲ್ ಶಿರಹಟ್ಟಿ ಅವರು ನೇಮಕವಾಗಿದ್ದಾರೆ. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಚುನಾವಣಾ ಪೊಲೀಸ್ ವೀಕ್ಷಕರಾಗಿ ಪರಮಪಾಸಿಂಗ್ ಸಿಧು, ಲೈಸನ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಬಸವರಾಜ(ಮೊ. 944899230) ಹಾಗೂ ತಾಂತ್ರಿಕ ಸಿಬ್ಬಂದಿಯಾಗಿ ಬ್ಯಾಡಗಿಯ ಅಂಗೂರ ಅವರು ನೇಮಕವಾಗಿದ್ದಾರೆ.
ಮಾಜಿ ಸೈನಿಕರ ಕುಂದುಕೊರತೆ ವಿಚಾರಣೆ
ಹಾವೇರಿ: ಜಿಲ್ಲೆಯ ಮಾಜಿ ಸೈನಿಕರ, ಅವರ ಅವಲಂಬಿತರ ಕುಂದುಕೊರತೆ ವಿಚಾರಿಸಲು, ಅಹವಾಲು ಸ್ವೀಕರಿಸಲು ಸೈನಿಕ ಕಲ್ಯಾಣ-ಪುನರ್ ವಸತಿ ಇಲಾಖೆ ಸಿಬ್ಬಂದಿ ಏ. 18ಕ್ಕೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮಾಜಿ ಸೈನಿಕರು, ಅವಲಂಬಿತರು ತಮ್ಮ ಮೂಲ ಸೇನಾ ದಾಖಲೆಗಳು, ಇಲಾಖೆ ನೀಡಿದ ಗುರುತಿನ ಚೀಟಿಯೊಂದಿಗೆ ಭೇಟಿಯಾಗಬಹುದು. ಹೆಚ್ಚಿನ ಮಾಹಿತಿಗೆ ದೂ. 0836-2440176 ಸಂಪರ್ಕಿಸಿ ಎಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.