ಹಾವೇರಿ

ಹಿರೇಬೂದಿಹಾಳ: ಕೆಜೆಪಿ ಸೇರ್ಪಡೆ

Published On :

ಹಿರೇಕೆರೂರು: ತಾಲೂಕಿನ ಹಿರೇಬೂದಿಹಾಳ ಗ್ರಾಮದ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಮಾಜಿ ಶಾಸಕ ಯು.ಬಿ. ಬಣಕಾರ ಸಮ್ಮುಖದಲ್ಲಿ ಕರ್ನಾಟಕ ಜನತಾ ಪಕ್ಷ ಸೇರಿದ್ದಾರೆ.
ಗ್ರಾಪಂ ಉಪಾಧ್ಯಕ್ಷ ರಮೇಶ ಮಾಳಮ್ಮನವರ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಕಲ್ಲಹನುಮಣ್ಣನವರ, ಶಿದ್ದನಗೌಡ ಕದರಮಂಡಲಗಿ, ತಿರಕನಗೌಡ ಗೌಡ್ರ, ನಾಗಪ್ಪ ಕೆಂಚಣ್ಣನವರ, ರಾಮನಗೌಡ ಗೌಡ್ರ, ಶಿವಾಜೆಪ್ಪ ಕೆಂಚಣ್ಣನವರ, ಹನುಮಂತಪ್ಪ ಕೋಡಿಹಳ್ಳಿ, ಮರಿಯಪ್ಪ ಕೋಡಿಹಳ್ಳಿ, ಚೌಡಪ್ಪ ಯಲ್ಲಣ್ಣನವರ, ಮಂಜಪ್ಪ ಕಲ್ಲಣ್ಣನವರ, ಶಿವನಗೌಡ ಗೌಡ್ರ, ಪರಮೇಶ ಜಡಿಯಣ್ಣವರ, ಹೂವಪ್ಪ ಸುಂಕನವರ, ನಿಂಗಪ್ಪ ಸೊರಟೂರ, ನಿಜಗುಣಿ ಒಡೆಯನಪುರ ಮತ್ತಿತರರನ್ನು ಪಕ್ಷದ ಶಾಲು ಹೊದೆಸುವ ಮೂಲಕ ಮಾಜಿ ಶಾಸಕ ಯು.ಬಿ. ಬಣಕಾರ ಕೆಜೆಪಿಗೆ ಬರಮಾಡಿಕೊಂಡರು.
ಬಣಕಾರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಅವರ ಕೈ ಬಲಪಡಿಸಲು ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಅಲ್ಪಮತದ ಅಂತರದಿಂದ ಸೋತಿದ್ದೇನೆ. ಬಳಿಕ ನಿರಂತರ ಸಂಘಟನೆಯಲ್ಲಿ ತೊಡಗಿ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಸಂಘಟನೆ ಜಯಗಳಿಸಿದೆ. ಈಗ ಧರ್ಮಯುದ್ಧ ಆರಂಭವಾಗಿದೆ. ಕೆಜೆಪಿಗೆ ಮತ ಹಾಕುವ ಮೂಲಕ ವಿರೋಧಿಗಳಿಗೆ ಪಾಠ ಕಲಿಸುವ ಅವಕಾಶ ಒದಗಿದೆ ಎಂದರು.
ಕೆಜೆಪಿ ತಾಲೂಕು ಅಧ್ಯಕ್ಷ ಮಹೇಶ ಗುಬ್ಬಿ, ಉಪಾಧ್ಯಕ್ಷ ವಿ.ಎಸ್. ಪುರದ, ಯುವ ಘಟಕದ ಅಧ್ಯಕ್ಷ ಕೊಟ್ರೇಶ ಕಾಟೇನಹಳ್ಳಿ, ಶಿವ್ಯಾ ನಾಯ್ಕ ಲಮಾಣಿ, ಪ್ರಕಾಶಗೌಡ ಗೌಡರ, ಮಹೇಂದ್ರ ಬಡಳ್ಳಿ, ಲಿಂಗರಾಜ್ ಚಪ್ಪರದಹಳ್ಳಿ, ಫಕ್ಕಿರಪ್ಪ ಕಲ್ಲಕೊಪ್ಪದ, ಛತ್ರಪತಿ ಕದರಮಂಡಲಗಿ, ದಿಲ್ಲೆಪ್ಪ ಹಳ್ಳಳ್ಳಿ, ಗಣೇಶಪ್ಪ ಒಡೆಯನಪುರ, ಗುಡ್ಡಪ್ಪ ಒಡೆಯರಹಳ್ಳಿ, ಭರಮಪ್ಪ ಬಿದರಿ, ಹನುಮಂತಪ್ಪ ಚೌಟಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.