ಹಾವೇರಿ

ಯೋಜನೆ ತಲುಪಿಸುವಲ್ಲಿ ಶಾಸಕರು ವಿಫಲ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 25
ಕಳೆದೆರಡು ಅವಧಿಯಲ್ಲಿ ತಾಲೂಕಿನ ಶಾಸಕರಾಗಿದ್ದ ಜಿ. ಶಿವಣ್ಣ ಅವರು ಕೇಂದ್ರ ಸರ್ಕಾರದ ಯೋಜನೆಗಳಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಲಾಭವನ್ನು ತಾಲೂಕಿನ ಸಮಸ್ತ ಜನತೆಗೆ ಮುಟ್ಟಿಸುವಲ್ಲಿ ಮತ್ತು ರಸ್ತೆಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಕ್ರಮ ಕೈಗೂಳ್ಳುವಲ್ಲಿ ವಿಫಲಗೊಂಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಕೆ.ಬಿ. ಕೋಳಿವಾಡ ಆರೋಪಿಸಿದರು.
ತಾಲೂಕಿನ ಮೇಡ್ಲೆರಿ, ಐರಣಿ, ಹಿರೇಬಿದರಿ, ಕೂಣನತಂಬಿಗಿ, ಹಿಲದಹಳ್ಳಿ ಬೇಲೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತ ಯಾಚಿಸಿದ ಬಳಿಕ ಮಾತನಾಡಿದರು.
ಸುಧಾರಣೆಯಾಗದ ರಸ್ತೆ: ಮಾಜಿ ಶಾಸಕ ಜಿ. ಶಿವಣ್ಣ ಅವರು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳುವ ರಸ್ತೆಗಳ ಅಭಿವೃದ್ಧಿಗಾಗಿ ಮಿಸಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿರುವ ಕಾರಣ, ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳುವ ರಸ್ತೆಗಳೆಲ್ಲ ಹದಗೆಟ್ಟಿದ್ದು, ರಸ್ತೆಯ ಮೇಲೆ ಸಂಚರಿಸಿದರೆ ಕುದುರೆ ಮೇಲೆ ಸಂಚರಿಸಿದಂತಹ ಅನುಭವವಾಗುತ್ತದೆ ಎಂದು ದೂರಿದರು.
ಕೈ ಹಿಡೀತಾರೆ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಜಾರಿಗೆ ತಂದಿದ್ದ ಬಹುಗ್ರಾಮ ನದಿ ನೀರು ಪೂರೈಸುವ ಯೋಜನೆಯನ್ನು ಪೂರ್ಣಗೊಳಿಸಿ, ತಾಲೂಕಿನ ಜನತೆಗೆ ಕುಡಿಯುವುದಕ್ಕಾಗಿ ಶುದ್ಧ ನದಿ ನೀರನ್ನು ಪೂರೈಸುವಲ್ಲಿ ವಿಫಲಗೊಂಡಿರುವ ಕಾರಣ ಬೇಸರಗೊಂಡಿರುವ ತಾಲೂಕಿನ ಸಮಸ್ತ ಮತದಾರರು ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಮತ ನೀಡಲು ಕಾತುರರಾಗಿದ್ದಾರೆ.
ಮತದಾರರು ಪಾಠ ಕಲಿಸ್ತಾರೆ: ಕಳೆದ 5 ವರ್ಷ ಅವಧಿಯಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರು, ಕುರ್ಚಿ ಹಾಗೂ ಸ್ವಾರ್ಥ ಸಾಧನೆಗಾಗಿ ಕಚ್ಚಾಡುತ್ತ ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದಲ್ಲದೆ, ಪಕ್ಷದಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿಕೊಳ್ಳುವುದರೊಂದಿಗೆ ಬಿಜೆಪಿಯನ್ನು ನಂಬಿದವರಿಗೆ ನಾಯಕರೆನಿಸಿಕೊಂಡವರು ಮೋಸವೇಸಗಿರುವ ಕಾರಣ ರಾಜ್ಯದ ಮತದಾರರು, ಈ ಬಾರಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆಂದು ಮಾಜಿ ಸಚಿವ ಕೆ.ಬಿ. ಕೋಳಿವಾಡ ಹೇಳಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿಂದ್ರಗೌಡ ಎಫ್. ಪಾಟೀಲ, ಅಲ್ಪಸಂಖ್ಯಾತ ಮುಖಂಡ ಇಖ್ಬಾಲ್ ನಬಿ ರಾಣಿಬೆನ್ನೂರು, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ರಾಮಣ್ಣ ನಾಯ್ಕ ಇನ್ನಿತರರು ಉಪಸ್ದಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.