ಹಾವೇರಿ

ಬಡವರ ನೆರವಿಗೆ ಕೈ ಚಾಚಿಲ್ಲ: ಆರೋಪ

Published On :

ಶಿಗ್ಗಾಂವಿ: ಹಸ್ತ ಕಾ ಹಾತ್ ಆಮ್ ಆದಿಮಿ ಕೇ ಸಾಥ್ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಚುನಾವಣೆ ನಂತರ ಒಮ್ಮೆಯೂ ಬಡವರ ನೆರವಿಗೆ ಕೈ ಮುಂದೆ ಚಾಚಿಲ್ಲ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದರು.
 ಸಾವಿರಾರು ಕೋಟಿ ರು.ಗಳ ಹಗರಣಗಳ ಸುಳಿಯಲ್ಲಿ ಯುಪಿಎ ಸಿಕ್ಕಿ ಹಾಕಿಕೊಂಡು ಒದಾಡುತ್ತಿದೆ. ಕಾಮನ್ ವೆಲ್ತ್ ರು. 70 ಸಾವಿರ ಕೋಟಿ, 2ಜಿ ಸ್ಪೆಕ್ಚ್ರಮ್ ರು. 1.76 ಸಾವಿರ ಕೋಟಿ ಹಾಗೂ ಕಲ್ಲಿದ್ದಿಲು 1.80 ಸಾವಿರ ಕೋಟಿ ಲೂಟಿ ಮಾಡಿರುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ವಿಶ್ವ ದಾಖಲೆ ಸ್ಥಾಪಿಸಿದೆ ಎಂದು ಯುವರಾಜ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂಬಂತಾಗಿದೆ ಎಂದು ಲೇವಡಿ ಮಾಡಿದರು.  ಚುನಾವಣೆ ಪೂರ್ವದಲ್ಲಿ ಬಿಜೆಪಿಯಲ್ಲಿ ಜಗಳವಿತ್ತು. ಆದರೆ ಈಗ ಇಲ್ಲ. ಸೂರ್ಯನ ರಥಕ್ಕೆ ಏಳು ಕುದುರೆಗಳು ಇರುವಂತೆ ಸಿಎಂ ಶೆಟ್ಟರ್, ಅನಂತಕುಮಾರ, ಪ್ರಹ್ಲಾದ ಜೋಶಿ, ಆರ್. ಅಶೋಕ, ಗೋವಿಂದ ಕಾರಜೋಳ, ಡಿ.ವಿ. ಸದಾನಂದಗೌಡ ಹಾಗೂ ಕೆ.ಎಸ್. ಈಶ್ವರಪ್ಪನವರು ಬಿಜೆಪಿ ಚುನಾವಣಾ ರಥದ ಏಳು ಕುದುರೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್‌ನಲ್ಲಿ ಘನಘೋರ ಜಗಳ ಆರಂಭಗೊಂಡಿದೆ  ಕೈ ಪಕ್ಷದ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಹತ್ತಾರು ಹೆಸರು ಕೇಳಿ ಬರುತ್ತಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.