ಕಾಂಗ್ರೆಸ್, ಬಿಜೆಪಿ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ: ಆರೋಪ
ಹಾವೇರಿ: ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನತೆಯ ಅಭಿವೃದ್ಧಿ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಚುನಾವಣೆ ವೇಳೆ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಗಿಟ್ಟಿಸಿಕೊಂಡು ಗೆದ್ದು ಬಂದ ಮೇಲೆ ಜನರ ಕಷ್ಟಗಳಿಗೆ ಸ್ಪಂದಿಸದೆ ಅವರನ್ನು ವಂಚಿಸುತ್ತಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ನೆಹರೂ ಓಲೇಕಾರ ಆರೋಪಿಸಿದರು.
ನಗರದ ನಾಗೇಂದ್ರನಮಟ್ಟಿ, ಸವಣೂರು ತಾಲೂಕಿನ ಹಿರೇಮುಗದೂರ ಮತ್ತು ಚಿಕ್ಕಮುಗದೂರ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡು ಮತನಾಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಸಂಪೂರ್ಣ ಕಡೆಗಣಿಸಿದೆ. ಅವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಸಿರುವುದನ್ನು ಮನಗಂಡ ಅವರೆಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ತೊರೆದು ಕೆಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು. ಅಧಿಕಾರದ ಗದ್ದುಗೆ ಏರಲು ರಾಷ್ಟ್ರೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಹುಸಿ ಭರವಸೆಗಳ ಮಹಾಪೂರ ಹರಿಸುತ್ತಿವೆ. ಮತದಾರರು ಅವುಗಳಿಗೆ ಕಿವಿಗೊಡಬೇಡಿ, ರಾಜ್ಯದ ಅಭಿವೃದ್ಧಿ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ಅದು ಪ್ರಾದೇಶಿಕ ಪಕ್ಷ ಕೆಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯದ ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಕೆಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಅನಿತಾ ಸುಬ್ರಹ್ಮಣ್ಯ, ಮುಖಂಡರಾದ ಸೊನ್ನುಬರಖಾನ್ ಪಠಾಣ, ಕಬೀರ್ ಮಾಡಳಕರ, ನಗರಸಭೆ ಮಾಜಿ ಸದಸ್ಯೆ ನಾಗರತ್ನಾ ಹಿರೇಮಠ, ಶಾಂತಲಿಂಗಪ್ಪ ಉಜನಿಕೊಪ್ಪ, ಹಿರೇಮುಗದೂರ ಗ್ರಾಮದ ಕೆಜೆಪಿ ಮುಖಂಡರಾದ ಮಲ್ಲಪ್ಪ ಸೋಮಸಾಗರ, ಗುರುಬಸಯ್ಯ ಚಪ್ಪರದಹಳ್ಳಿಮಠ, ಬಸವರಾಜ ಸೋಮಸಾಗರ, ಗ್ರಾಪಂ ಸದಸ್ಯ ಮಲ್ಲಪ್ಪ ತಳವಾರ, ಲಲಿತಾ ಸೋಮಸಾಗರ, ಚಂದ್ರಪ್ಪ ತಳವಾರ, ರಾಮಣ್ಣ ಸೋಮಸಾಗರ, ಕೊಟ್ರಪ್ಪ ಮಣ್ಣೂರ, ಬಿ.ಡಿ. ಕೋಳೂರ, ಮಲ್ಲಪ್ಪ ಹೊಸಮನಿ, ಚಂಬಣ್ಣ ಆರೇರ, ಗಂಗಪ್ಪ ಸೋಮಸಾಗರ, ಚಿಕ್ಕಮುಗದೂರ ಗ್ರಾಮದ ಸಣ್ಣಪ್ಪ ತಳವಾರ, ಶಿವಯೋಗಿ ಕುಲಕರ್ಣಿ, ಚನ್ನಬಸಪ್ಪ ಮಠದ, ಸಿದ್ರಾಮಪ್ಪ ಮಠದ, ಹನುಮಂತಪ್ಪ ಹರಿಜನ, ದ್ವಾರಕಸ್ವಾಮಿ ಪುರಾಣಿಕಮಠ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

