ಹಾವೇರಿ

ತಪ್ಪದೇ ಮತ ಚಲಾಯಿಸಿ: ಅನ್ಬುಕುಮಾರ್

Published On :

ಕನ್ನಡಪ್ರಭ  ವಾರ್ತೆ, ಹಾವೇರಿ, ಏ. 28
ಚುನಾವಣಾ ಆಯೋಗ ಮತದಾನದ ಅವಧಿಯನ್ನು ಮೇ 5ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಿಗದಿಪಡಿಸಿದ್ದು, ಮತದಾರರು ಅಂದು ಸಕಾಲಕ್ಕೆ ಬಂದು ತಪ್ಪದೇ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಮನವಿ ಮಾಡಿದರು.
ಜಿಲ್ಲಾ ಕ್ರೀಡಾಂಗಣದ ಬಯಲಿನಲ್ಲಿ ಏರ್ಪಡಿಸಿದ್ದ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ, ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ಮತದಾನದ ಮಹತ್ವ ಕುರಿತು ಬಿಡಿಸಿದ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾವೇರಿಯ ವಾರ್ತಾ ಭವನದಲ್ಲಿ ಏರ್ಪಡಿಸಿದ್ದ ಕಲಾವಿದರ ಶಿಬಿರದಲ್ಲಿ ಭಾಗವಹಿಸಿದ್ದ 15 ಚಿತ್ರಕಲಾ ಶಿಕ್ಷಕರು ಹಾಗೂ ಆಸಕ್ತ ವಿದ್ಯಾರ್ಥಿಗಳು 28ಕ್ಕೂ ಹೆಚ್ಚು ಪೇಟಿಂಗ್‌ಗಳನ್ನು ಸಿದ್ದಗೊಳಿಸಿದ್ದರು.
ಗಮನ ಸೆಳೆದ ಚಿತ್ರಗಳು: ಚಿತ್ರ ಪ್ರದರ್ಶನದಲ್ಲಿ 28 ಪೇಂಟಿಂಗ್ ಹಾಗೂ 8 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮತ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವುದನ್ನು ಕಲಾವಿದರು ತಮ್ಮ ಚಿತ್ರದಲ್ಲಿ ಬಿಂಬಿಸಿದ್ದು, ವಿಶೇಷವಾಗಿತ್ತು. ಮತದಾರರ, ಪ್ರತಿಯೊಬ್ಬ ಚಿತ್ರಕಾರನ ವಿಷಯ ವಸ್ತುವಾದ್ದರಿಂದ, ಆತನ ಹೊಣೆಗಾರಿಕೆ ನೆನಪಿಸುವಲ್ಲಿ ಕಲಾವಿದರು ಮುತುವರ್ಜಿ ವಹಿಸಿದ್ದು ಗಮನಾರ್ಹವಾಗಿತ್ತು.
9 ವರ್ಷದ ಪುಟ್ಟ ಪೋರಿ ಸಂಜನಾ ಬಣಕಾರ ಬಿಡಿಸಿದ ಚಿತ್ರ, ಮತದಾನದಿಂದ ಉತ್ತಮ ಆಯ್ಕೆ ಸಾಧ್ಯ. ಅದರಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆಯೆನ್ನುವದನ್ನು ಬಿಂಬಿಸಿ, ಮತದಾನದ ತೀರ್ಮಾನ ನನ್ನದೇ ಎನ್ನುವುದನ್ನು ಚಿತ್ರಿಸಿದ್ದು ಗಮನ ಸೆಳೆಯಿತು.
ಬಹುತೇಕ ಚಿತ್ರಗಳು ಹಣ, ಹೆಂಡ ಹಾಗೂ ಸೀರೆಯಂತಹ ಆಮಿಷಗಳಿಂದ ಹಾಗೂ ಜಾತಿಯಂಥ ಸಂಕೀರ್ಣ ಎನ್ನುವುದನ್ನು ಪರಿಗಣನೆಯಿಂದ ಮತದಾರ ದೂರವಿರಬೇಕೆನ್ನುವುದನ್ನು ಸೊಗಸಾಗಿ ಬಿಂಬಿಸುವಲ್ಲಿ ಯಶಸ್ವಿಯಾದವು.
ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ, ಜಿಪಂ ಸಿಇಓ ಉಮೇಶ  ಕುಸುಗಲ್ಲ, ಸಮಿತಿಯ ನೋಡಲ್ ಅಧಿಕಾರಿ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ, ಸಮಿತಿ ಸದಸ್ಯರಾದ ನಗರಸಭೆ ಆಯುಕ್ತ ಬಿ.ಆರ್. ಮಲ್ಲಾಪುರ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರವಿ ಗುಡಿಸಾಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ವಾರ್ತಾ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.