ಹಾವೇರಿ

ದಾನ, ಭ್ರಾತೃತ್ವ, ಅನ್ಯೋನ್ಯತೆ ಸಾರಿದರು...

Published On :

ಶಿಗ್ಗಾಂವಿ: ದಾನ-ಧರ್ಮ, ಸಹೋದರತೆ, ಅನ್ಯೋನ್ಯತೆಗಳ ಮೌಲ್ಯಗಳನ್ನು ಪ್ರತಿಪಾದಿಸುವ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ರಂಜಾನ್ ತಿಂಗಳ ಪರ್ಯಂತ ಕಠಿಣ ಉಪವಾಸ ವ್ರತ ಆಚರಿಸಿದ್ದ ಮುಸ್ಲಿಂ ಬಾಂಧವರು ಶುಕ್ರವಾರ ಉಪವಾಸ ಮುಕ್ತಾಯಗೊಳಿಸಿ, ಬಂಧು-ಮಿತ್ರರೊಂದಿಗೆ ಸ್ವಾದಿಷ್ಟ ಭೋಜನ ಸವಿದರು. ಪಟ್ಟಣದ ವಿವಿಧ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಸಾಮಾಜಿಕ ನ್ಯಾಯದ ಕೋರಿಕೆ ಸಲ್ಲಿಸಿದರು.
ಸಮಾಜದ ಕಡು ಬಡವನೂ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ಆಶಯ ಹೊತ್ತ ಮುಸ್ಲಿಮರು ದಾನ - ಧರ್ಮಾದಿಗಳನ್ನು ಮಾಡಿದರು. ಪಟ್ಟಣದ ಹೊರವಲಯದಲ್ಲಿ ಈದ್ಗಾ ಮೈದಾನದಲ್ಲಿ ಗುರುಗಳಾದ ಅಬ್ದುಲ್ ಮುನಾಫ್ ಮುಲ್ಲಾ ಅವರ ನೇತೃತ್ವದಲ್ಲಿ ಪ್ರಾರ್ಥನೆ ಪಠಿಸಿದರು. ಆ ಬಳಿಕ ಪಟ್ಟಣಕ್ಕೆ ಆಗಮಿಸಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ ಮಾಳಗಿಮನಿ, ಪುರಸಭೆ ಸದಸ್ಯರಾದ ಶಬ್ಬೀರ್ ಮಕಾಂದರ, ಸತ್ತಾರಸಾಬ ವರ್ದಿ, ಹನೀಫ್ ದುಕಾನದಾರ್, ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಕರೀಂಸಾಬ ಮೊಗಲಲ್ಲಿ, ಎ.ಎ. ಸೌದಾಗರ, ಮುಸ್ತಾಕ ಮುಲ್ಲಾ, ಬಶೀರ್ ಖಾನ್ ಎಳ್ಳೂರ, ಅದ್ದು ಹಾವೇರಿ, ಸುಲೇಮಾನ ತರ್ಲಗಟ್ಟ, ಅಹ್ಮದ್ ಬಾಷಾ ಗುಲಾಮುದ್ದಿನ, ಮುನಾಫ್ ನರೆಗಲ್, ಅಬ್ಬಾಸ್ ಅಲಿ ತೌಕಲಿ, ಮೆಹಬೂಬಸಾಬ ಮಲ್ಲೂರು, ಇರ್ಫಾನ್ ಇನಾಮದಾರ, ಹಜರತ್ ಅಲಿ ತೌಕಲಿ, ಅಬ್ದುಲ್ ಖಾದರ ಲಾಲನವರ, ಮುನೀರ್ ದೊಡಮನಿ, ಬಾಬುಸಾಬ ತೌಕಲಿ, ಇಮಾಮ ಹುಸೇನ್ ನೀರಮನಿ, ಚಮನಾಸಾಬ ಮಖಾಂದರ, ಅಬ್ದುಲ್ ಕರೀಮ ನೆರೇಗಲ್ಲ, ರೌಫ್ ಮುಲ್ಲಾ, ಸಲೀಂ ಪರುಖಿ, ಹರ್ಷಾದ್ ಮೊಗಲಲ್ಲಿ ಪಾಲ್ಗೊಂಡು ಪಟ್ಟಣದ ಎಲ್ಲ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.