ಹಾವೇರಿ

ಭ್ರಷ್ಟಾಚಾರ ನಿವಾರಿಸಲು ಪಣತೊಡಿ: ಬಣಕಾರ

Published On :

ಹಿರೇಕೆರೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಗತಿಸಿದ್ದರೂ ಪ್ರಮುಖ ಸಮಸ್ಯೆಗಳಾದ ಭ್ರಷ್ಟಾಚಾರ, ಅನಕ್ಷರತೆ, ಬಡತನ ಸಮಾಜದಿಂದ ದೂರವಾಗಿಲ್ಲ. ಇದರ ನಿವಾರಣೆಗೆ ಯುವಜನತೆ ಪಣ ತೊಡಬೇಕು ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು. ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಸೀಲ್ದಾರ್ ಹಣಮಂತಪ್ಪ ಬಡದಾಳೆ ಧ್ವಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಜಿಪಂ ಸದಸ್ಯರಾದ ಪಾರ್ವತಿ ಬೋಗಾವಿ, ಬಸಮ್ಮ ಅಬಲೂರ, ತಾಪಂ ಸದಸ್ಯ ಬಸನಗೌಡ ಕಳ್ಳೇರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ರಮೇಶ ತೋರಣಗಟ್ಟಿ, ನಾಗರಾಜ ಗುಡ್ಡಳ್ಳಿ, ರಾಜಶೇಖರ ಹಂಪಾಳಿ, ಮುಜೀಬ ರಿಕಾರ್ಟಿ, ಶಿವಕುಮಾರ ತಿಪ್ಪಶೆಟ್ಟಿ, ಗೀತಾ ದಂಡಗಿಹಳ್ಳಿ, ಶಿವಕುಮಾರ ತಿಪ್ಪಶೆಟ್ಟಿ, ಶಿವಲೀಲಾ ರಂಗಕ್ಕನವರ, ರತ್ಮಮ್ಮ ತಿಪ್ಪಣ್ಣನವರ, ಮಮತಾ ಮಳವಳ್ಳಿ, ಕುಸುಮಾ ಬಣಕಾರ, ರಜಿಯಾ ಅಸಾದಿ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಸ್ವಾಗತಿಸಿದರು. ದೈಹಿಕ ಶಿಕ್ಷಣಾಧಿಕಾರಿ ಬಿ.ಪಿ. ನಿಂಗನಗೌಡ್ರ ನಿರೂಪಿಸಿ ವಂದಿಸಿದರು.
ಶಾಂತಿ-ಭಾವೈಕ್ಯದಿಂದ ಬದುಕೋಣ: ಪೀರಜಾದೆ
ಹಾನಗಲ್ಲ: ಭಾರತದ ಆಂತರಿಕ ಭದ್ರತೆ ಜತೆಗೆ ನಾಡು, ನುಡಿ ಹಾಗೂ ಗಡಿಗಳ ಭದ್ರತೆಯೂ ಮುಖ್ಯವಾಗಿದ್ದು, ಶಾಂತಿ ಭಂಗಕ್ಕೆ ಅವಕಾಶವಿಲ್ಲದೆ ಭಾವೈಕ್ಯದ ಬದುಕು ಮುನ್ನಡೆಸಬೇಕಾಗಿದೆ ಎಂದು ಹಾನಗಲ್ಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ನುಡಿದರು. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಅವರು, ಜಾತಿ-ಮತದ ಹೆಸರಿನಲ್ಲಿ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವವರ ಬಗ್ಗೆ ಎಚ್ಚರಿಕೆ ಬೇಕು. ಭಾವೈಕ್ಯದಿಂದ ಬದುಕುವ, ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಾಡಿನ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯೆ, ಶ್ರದ್ಧೆ, ದೇಶಭಕ್ತಿಗೆ ಹೆಸರು ಮಾಡಿದ ಈ ದೇಶದ ಜನರ ನೆಮ್ಮದಿ ಕೆಡಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕು ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮುತ್ತಣ್ಣ ನಾಸಿಕ, ಸದಸ್ಯರಾದ ಅರುಣ ನಾಗಜ್ಜನವರ, ಸಾಹಿತಿ ಮಾರುತಿ ಶಿಡ್ಲಾಪುರ, ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಮಹೇಂದ್ರ ಬಾರಿಕರ, ಉಪನ್ಯಾಸಕರಾದ ಕಾಡಪ್ಪನವರ, ಎಸ್. ಕಮಾಟಿ, ಸುರೇಶ ಹೀರೂರ, ವೀಣಾ ದೇವರಗುಡಿ, ರಶ್ಮಿ, ಕೆ. ಈಶ್ವರ, ಹೊನ್ನತ್ತಿ, ಹಿರೇಮಠ ಇದ್ದರು. ವಿದ್ಯಾರ್ಥಿನಿ ದಿವ್ಯಾ ತಳವಾರ, ವಿದ್ಯಾರ್ಥಿ ದೆಸೆಯಲ್ಲೇ ದೇಶಪ್ರೇಮ ಬೆಳೆಯಬೇಕು. ನಾಡಿನ ಪ್ರೀತಿ ನಮ್ಮ ಮನದಾಳದಲ್ಲಿ ಜೀವಂತವಾಗಿರಬೇಕು. ನಾಳಿನ ನಮ್ಮ ಭಾರತದ ಕನಸು ನನಸಾಗಬೇಕು ಎಂದರು. ಬಿದರಮಳೆ ದೇಶಭಕ್ತಿ ಗೀತೆ ಹಾಡಿದರು.

ಶಾಂತಿ-ಭಾವೈಕ್ಯದಿಂದ ಬದುಕೋಣ: ಪೀರಜಾದೆ
ಹಾನಗಲ್ಲ: ಭಾರತದ ಆಂತರಿಕ ಭದ್ರತೆ ಜತೆಗೆ ನಾಡು, ನುಡಿ ಹಾಗೂ ಗಡಿಗಳ ಭದ್ರತೆಯೂ ಮುಖ್ಯವಾಗಿದ್ದು, ಶಾಂತಿ ಭಂಗಕ್ಕೆ ಅವಕಾಶವಿಲ್ಲದೆ ಭಾವೈಕ್ಯದ ಬದುಕು ಮುನ್ನಡೆಸಬೇಕಾಗಿದೆ ಎಂದು ಹಾನಗಲ್ಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ನುಡಿದರು.
ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಜಾತಿ-ಮತದ ಹೆಸರಿನಲ್ಲಿ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವವರ ಬಗ್ಗೆ ಎಚ್ಚರಿಕೆ ಬೇಕು. ಭಾವೈಕ್ಯದಿಂದ ಬದುಕುವ, ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಾಡಿನ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯೆ, ಶ್ರದ್ಧೆ, ದೇಶಭಕ್ತಿಗೆ ಹೆಸರು ಮಾಡಿದ ದೇಶದ ಜನರ ನೆಮ್ಮದಿ ಕೆಡಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮುತ್ತಣ್ಣ ನಾಸಿಕ, ಸದಸ್ಯರಾದ ಅರುಣ ನಾಗಜ್ಜನವರ, ಸಾಹಿತಿ ಮಾರುತಿ ಶಿಡ್ಲಾಪುರ, ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಮಹೇಂದ್ರ ಬಾರಿಕರ, ಉಪನ್ಯಾಸಕರಾದ ಕಾಡಪ್ಪನವರ, ಎಸ್. ಕಮಾಟಿ, ಸುರೇಶ ಹೀರೂರ, ವೀಣಾ ದೇವರಗುಡಿ, ರಶ್ಮಿ, ಕೆ. ಈಶ್ವರ, ಹೊನ್ನತ್ತಿ, ಹಿರೇಮಠ ಇದ್ದರು.
ವಿದ್ಯಾರ್ಥಿನಿ ದಿವ್ಯಾ ತಳವಾರ, ವಿದ್ಯಾರ್ಥಿ ದೆಸೆಯಲ್ಲೇ ದೇಶಪ್ರೇಮ ಬೆಳೆಯಬೇಕು. ನಾಡಿನ ಪ್ರೀತಿ ನಮ್ಮ ಮನದಾಳದಲ್ಲಿ ಜೀವಂತವಾಗಿರಬೇಕು. ನಾಳಿನ ನಮ್ಮ ಭಾರತದ ಕನಸು ನನಸಾಗಬೇಕು ಎಂದರು. ಬಿದರಮಳೆ ದೇಶಭಕ್ತಿ ಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.