ಹಾವೇರಿ

ಚಿಕಿತ್ಸೆ ನಿರ್ಲಕ್ಷ್ಯಿಸಿದರೆ ಎಲುವು ಸಾಂದ್ರತೆ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 17
ಸಂಧಿ ಕೀಲು, ಸೊಂಟ, ಕತ್ತುಗಳಲ್ಲಿ ನೋವು ಕಂಡ ತಕ್ಷಣ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ತೋರಿದರೆ ಎಲುವು ಸಾಂದ್ರತೆ ಉಂಟಾಗುತ್ತದೆ ಎಂದು ಇಲ್ಲಿನ ಅಮೃತಂ ಆಯುರ್ವೇದ ಆಸ್ಪತ್ರೆ ವೈದ್ಯ ಡಾ೤ ನಾರಾಯಣ ಪವಾರ ಹೇಳಿದರು.
ನಗರದ ಮಾನ್ವಿ ಕಂಪನಿ ರಸ್ತೆಯಲ್ಲಿರುವ ಎಂ.ಕೆ. ಪವಾರ್ ಮೆಮೋರಿಯಲ್ ಸೊಸೈಟಿ ಸಭಾ ಭವನದಲ್ಲಿ ಅಮೃತಂ ಆಯುರ್ವೇದ ಆಸ್ಪತ್ರೆ ಹಾಗೂ ಪಂಚಕರ್ಮ ಕೇಂದ್ರಗಳು ಏರ್ಪಡಿಸಿದ್ದ ಉಚಿತ ಎಲುವು ಸಾಂದ್ರತೆ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ ಬಳಿಕ ಮಾತನಾಡಿದರು.
ಸಾಮಾನ್ಯವಾಗಿ 40 ವರ್ಷದ ಮಹಿಳೆಯರಲ್ಲಿ ಹಾಗೂ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಎಲುವು ಸಾಂದ್ರತೆ ಕಂಡುಬರುತ್ತಿದ್ದು, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದು ಅವರ ಮಾರ್ಗದರ್ಶನದಲ್ಲಿ ಆಹಾರ ಸೇವನೆಗೆ ಮುಂದಾಗಬೇಕು.
ಸಾಮಾನ್ಯವಾಗಿ 40 ವರ್ಷ ವಯಸ್ಸಾದವರಲ್ಲಿ ಸಂಧಿ ಕೀಲು, ಸೋಂಟ ಮತ್ತು ಕತ್ತು ನೋವು ಕಂಡುಬರುತ್ತಿದ್ದು,ನೋವಿಗೆ ಆಹಾರ ಸೇವನೆ ಹಾಗೂ ಅನಿಯಮಿತ ವ್ಯಾಯಾಮ ಕಾರಣವೆಂದರೆ ತಪ್ಪಾಗಲಾರದು. ಕಾರಣ ಎಲುವು ಸಾಂದ್ರತೆಗೆ ಚಿಕಿತ್ಸೆ ಅವಶ್ಯವಾಗಿದ್ದು, ಸರ್ವರು ಚಿಕಿತ್ಸೆ ಪಡೆಯಲು ಮುಂದಾಗಬೇಕೆಂದು ಡಾ೤ ಪವಾರ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಂ.ಕೆ. ಪವಾರ್ ಮೆಮೋರಿಯಲ್ ಸೊಸೈಟಿ ಸದಸ್ಯ ಎಲ್ಲೂಸಾ ಪವಾರ ಕಾರ್ಯಕ್ರಮದ ಕುರಿತು ಮಾತನಾಡಿದರು.
ಸಂಸ್ಥೆ ಉಪಾಧ್ಯಕ್ಷ ಕೃಷ್ಣಾಸಾ ಎಂ.ಕೆ. ಇತರರು ಇದ್ದರು. ಶಿಬಿರದಲ್ಲಿ ಭಾಗವಹಿಸಿದ್ದ 400 ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.