ಹಾವೇರಿ

ಅರ್ಚಕರ ಸಂಘದ ಕಾರ್ಯಾಲಯ ಉದ್ಘಾಟನೆ

Published On :

ಹಿರೇಕೆರೂರು: ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ತಾಲೂಕು ಘಟಕದ ಕಾರ್ಯಾಲಯ ಉದ್ಘಾಟಿಸಲಾಯಿತು.
ನೂತನ ಘಟಕದ ಗೌರವಾಧ್ಯಕ್ಷರಾಗಿ ಬಸವರಾಜಪ್ಪ ಪೂಜಾರ, ಅಧ್ಯಕ್ಷರಾಗಿ ಮಲ್ಲೇಶಪ್ಪ ಪೂಜಾರ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಪೂಜಾರ, ಕಾರ್ಯದರ್ಶಿಯಾಗಿ ಪ್ರಕಾಶ ಬಡಿಗೇರ ನಿರ್ರ್ದೇಶಕರಾಗಿ ಅಶೋಕ ಎಂ. ಪೂಜಾರ, ಗದಿಗೆಪ್ಪ ತಾವರಗಿ ರಾಘವೇಂದ್ರ ಭೀಮರಾವ್ ದೇಶಪಾಂಡೆ, ಜಗದೀಶ ಬಿ. ಪೂಜಾರ, ದೇವಿರಪ್ಪ ಪೂಜಾರ, ಕರಬಸಪ್ಪ ನಾ ಬಡಿಗೇರ ಆಯ್ಕೆಯಾದರು.  
ಈ ಸಂದರ್ಭ ತಾಲೂಕಾಧ್ಯಕ್ಷ ಮಲ್ಲೇಶಪ್ಪ ಪೂಜಾರ ಮಾತನಾಡಿ, ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅರ್ಚಕರಿಗೆ ಕಡ್ಡಾಯವಾಗಿ ಗುರುತಿನ ಚೀಟಿ, ಯುನಿಟ್ ಬಾಂಡ್, ಸರ್ಕಾರಿ ವೇತನ ಇತರ ಸವಲತ್ತುಗಳನ್ನು ಪಡೆಯಲು ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದರು.
ಈ ಹಿನ್ನಲೆಯಲ್ಲಿ ಹಿರೇಕೆರೂರು ತಾಲೂಕಿನ ಎಲ್ಲ ದೇವಸ್ಥಾನಗಳ ಅರ್ಚಕರ ಸಭೆಯನ್ನು ಅ. 20ರಂದು ಕರೆಯಲಾಗಿದೆ ಎಂದರು. ನೂತನ ಘಟಕದ ಕಾರ್ಯಾಲಯವು ಪಟ್ಟಣದ ವಡ್ಡಿನಕಟ್ಟಿ ಬಿಲ್ಡಿಂಗ್‌ನಲ್ಲಿ ಆರಂಭಗೊಂಡಿದ್ದು ತಾಲೂಕಿನ ಅರ್ಚಕರು ತಮ್ಮ ಕುಂದುಕೊರತೆಗಳ ಬಗ್ಗೆ ಸಂಪರ್ಕಿಸಬಹುದು ಎಂದರು.
ಹೆಚ್ಚಿನ ಮಾಹಿತಿಗೆ 94806 18748, 94830 51156 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.