ಹಾವೇರಿ

ಕಾಮಗಾರಿ ಶೀಘ್ರ ಪೂರ್ಣಕ್ಕೆ ಆಗ್ರಹ

Published On :

ಶಿಗ್ಗಾಂವಿ: ತಾಲೂಕು ಪಂಚಾಯಿತಿ ಅನುದಾನದಲ್ಲಿ ಶ್ಯಾಡಂಬಿ ಗ್ರಾಮದಲ್ಲಿ ಅಂಗನವಾಡಿಗೆ ರು. 50 ಸಾವಿರ ವೆಚ್ಚದಲ್ಲಿ ಮಕ್ಕಳಿಗೆ ಕೂಡ್ರಲು ಪರ್ಸಿ ಕಲ್ಲುಗಳನ್ನು ಹಾಕುವ ಕಾಮಗಾರಿ ನಿರ್ಮಿಸಲು ಚಾಲನೆ ನೀಡಿದ್ದು, ನಿಧಾನಗತಿಯ ಕಾಮಗಾರಿಯಿಂದ ಮತ್ತಷ್ಟು ಮಕ್ಕಳಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ಕುರಿತು ಗಮನಹರಿಸುತ್ತಿಲ್ಲ. ತಕ್ಷಣ ಕಾಮಗಾರಿ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಶ್ಯಾಡಂಬಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕುಳಿತುಕೊಳ್ಳಲು ಪಾಲೀಸ್ ಕಲ್ಲು ಹಾಕುವ ಕಾಮಗಾರಿಯನ್ನು ನೀಡಲಾಗಿದ್ದು, ಕಾಮಗಾರಿಗೆ ಸೂಕ್ತವಾಗಿ ಸಿಮೆಂಟ್ ಹಾಕದೆ ಅಲ್ಲಲ್ಲಿ ಬಿರುಕುಗಳು ಉಳಿಸಿಸುವ ಕಾರಣ ಅಲ್ಲಿ ಹಾವೂ, ಚೇಳು ಸೇರಿದಂತೆ ವಿವಿಧ ವಿಷ ಜಂತುಗಳು ಸೇರುವಂತಾಗಿದ್ದು, ಮಕ್ಕಳು ಸುಮ್ಮನೆ ಕೂಡ್ರದೆ ಬಿರುಕುಗಳಲ್ಲಿ ಕೈಹಾಕುವುದರಿಂದ ಅಪಾಯಕ್ಕೆ ತುತ್ತಾಗುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಕಾಮಗಾರಿ ಮಾಡಿ ಅಲ್ಲಿಯ ಕಲ್ಲುಗಳನ್ನು ಬಾಗಿಲು ಮುಂದೆ ಒಡೆದು ಹಾಕಿದ್ದಾರೆ. ಆದ್ದರಿಂದ ಮಕ್ಕಳು ನಿತ್ಯ ಒಂದಿಲ್ಲೊಂದು ಸಮಸ್ಯೆಗೆ ಗುರಿಯಾಗುವಂತಾಗಿದೆ. ಬಾಗಿಲಿನ ಆವರಣದಲ್ಲಿದ್ದ ಕಲ್ಲುಗಳನ್ನು ಬೇರೆಡೆಗೆ ವರ್ಗಾಯಿಸಿ ಸ್ವಚ್ಛತೆಯನ್ನು ಮಾಡಿ ಮಕ್ಕಳ ಓದಿಗೆ ವ್ಯವಸ್ಥೆ ಮಾಡುವುದನ್ನು ಬಿಟ್ಟು ಅವ್ಯವಸ್ಥೆ ಮಾಡಿದ್ದರೂ ಗ್ರಾಮ ಪಂಚಾಯತಿ ಮಾತ್ರ ಕುಂಭಕರ್ಣನ ನಿದ್ದೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಸೋರುತ್ತಿರುವುದು ಮೇಲ್ಛಾವಣಿ ಹಾಗೂ ಗೋಡೆಗಳು ಬಿರುಕುಬಿಟ್ಟಿದ್ದರಿಂದ ಮೇಲ್ಛಾವಣಿ ದುರಸ್ತಿ ಮಾಡುವ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಲ್ಲದೆ ತಕ್ಷಣ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಪದ್ಮಾವತಿ ಜಿ., ಮೇಲ್ವಿಚಾರಕಿ ಕೋಟಿ ಈ ಸಂದರ್ಭದಲ್ಲಿ ಕಟ್ಟಡ ವೀಕ್ಷಿಸಿ ಮೇಲಧಿಕಾರಿಗೆ ವರದಿ ನೀಡುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.