ಅಂಚೆ ಕೋರ್ ಬ್ಯಾಂಕಿಂಗ್ ಶೀಘ್ರ ಆರಂಭ: ಬಂಗಿಗೌಡ್ರ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 22
ಹಾವೇರಿಯ ಅಂಚೆ ಇಲಾಖೆಯಲ್ಲಿ ಶೀಘ್ರದಲ್ಲೇ ಹೊಸ ಯೋಜನೆಗಳಾದ ಅಂಚೆ ಕೋರ್ ಬ್ಯಾಂಕ್ ಮುಂತಾದ ಸೇವೆಗಳನ್ನು ನೀಡುವುದಾಗಿ ಶಿಗ್ಗಾಂವಿ ಅಂಚೆ ನಿರೀಕ್ಷಕ ಎನ್.ಜಿ. ಬಂಗಿಗೌಡ್ರ ಹೇಳಿದರು.
ಪಟ್ಟಣದ ಮಾಮ್ಲೆದೇಸಾಯಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಗ್ಗಾಂವಿಯ ಅಂಚೆ ಮಹಾ ಮೇಳವನ್ನು ಉದ್ಘಾಟಿಸಿದ ಅವರು, ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ನೀಡಲು ಅಂಚೆ ಇಲಾಖೆಯನ್ನು ಆಧುನೀಕರಣಗೊಳಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ಎಸ್. ಹಕೀಂ 'ವ್ಯಕ್ತಿತ್ವ ವಿಕಸನ ಮತ್ತು ಯಶಸ್ಸಿನ ದಾರಿ' ಕುರಿತು ಉಪನ್ಯಾಸ ನೀಡಿದರು. ದೂರು ನಿರೀಕ್ಷಕ ಜಾಫರಸಾಬ ಮ್ಯಾಗೇರಿ ಆಡಳಿತ ಬದಲಾವಣೆ ಕುರಿತು ಮಾತನಾಡಿದರು. ಎಸ್ಪಿಎಂಗಳಾದ ಜಯರಾಮ ನಾಯಕ್ (ಹಾನಗಲ್), ಕೆ.ಎಚ್. ನಾಯಕ್ (ಶಿಗ್ಗಾಂವಿ), ಪಿ.ಜಿ. ಮಠದ (ಸವಣೂರ) ಹಾಗೂ ಹಾವೇರಿಯ ಸಹಾಯಕ ಅಂಚೆ ಅಧೀಕ್ಷಕ ಎಂ.ವಿ. ಬಸಾಪುರ ಆಗಮಿಸಿದ್ದರು. ಯಲ್ಲಪ್ಪ ಗೋಣೆಪ್ಪನವರ ನಿರೂಪಿಸಿದರು. ಎಸ್.ಎಸ್. ಗಾಜಿಪುರ ವಂದಿಸಿದರು.
--
29ರಂದು ಗಾಯತ್ರಿ ಪೂರ್ವಕ ಮಹಾಲಕ್ಷ್ಮಿ ಹೋಮ
ರಾಣಿಬೆನ್ನೂರು: ಭಕ್ತರ ಅಭೀಷ್ಟ ಸಿದ್ಧಿಗಾಗಿ ನಗರದ ಸಂಗಮ್ ಚಿತ್ರಮಂದಿರದ ಪಕ್ಕದ ರಂಗನಾಥ ನಗರದ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆ. 29ರಂದು ಬೆಳಗ್ಗೆ 8 ಗಂಟೆಗೆ ಗಾಯಿತ್ರಿ ಪೂರ್ವಕ ಮಹಾಲಕ್ಷ್ಮಿ ಹೋಮವನ್ನು ನಡೆಸಲು ದೇವಸ್ದಾನ ಸಮಿತಿ ನಿರ್ಧರಿಸಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿ.ವಿ. ಹರಪನಹಳ್ಳಿ ಅವರನ್ನು (ಮೊ. 9986765584, 9980862003) ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

