ಹಾವೇರಿ

ಶರಣರ ಮಾರ್ಗದಲ್ಲಿ ಸಾಗಿ: ಕುಸಗೂರು

Published On :

ರಾಣಿಬೆನ್ನೂರು: ಮನುಕುಲ ಉದ್ಧಾರಕ್ಕಾಗಿ ಅವತರಿಸಿದ ಶರಣರು ತೋರಿಸಿದ ಮಾರ್ಗದಲ್ಲಿ ಸಾಗಿ, ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ವಾಸಣ್ಣ ಕುಸಗೂರು ನುಡಿದರು.
ದೊಡ್ಡಪೇಟೆ ವಿರಕ್ತಮಠ, ಸಂಘ-ಸಂಸ್ಥೆ ಕಾರ್ಯಕರ್ತರು, ಕರೂರು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಶರಣರ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವಿಕರಿಸಿ, ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಹೇಮರಡ್ಡಿ ಮಲ್ಲಮ್ಮ, ದೇವರ ದಾಸಿಮಯ್ಯ, ಮಾಳಗಿ ಮಾರಯ್ಯ, ಮಡಿವಾಳ ಮಾಚಿದೇವರು ಸಿರಿತನ ಬಂದಾಗ ಸೊಕ್ಕದ, ಬಡತನ ಬಂದಾಗ ಕೊರಗದೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ರಾಣಿಬೆನ್ನೂರು ವಿರಕ್ತ ಮಠದ ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಜಿ.ಎಂ. ದೇವಗಿರಿಮಠ, ಜೆ.ಎಂ. ಮಠದ, ಚಂದ್ರಪ್ಪ ಕರಿಗಾರ, ಜಮಾಲಸಾಬ ತಾವರಗೊಂದಿ ಮಾತನಾಡಿದರು. ಕರೂರು ಗ್ರಾಪಂ ಸದಸ್ಯ ಪ್ರಕಾಶ ಕೊಳಜಿ, ಅಜ್ಜಪ್ಪ ಲೆಕ್ಕಿಕೂನಿ, ತಿಪ್ಪೇಶ ಲೆಕ್ಕಿಕೂನಿ, ರಾಜು ಕರಿಗಾರ, ರಾಜು ಸೂರ್ವೆ, ಗುಡ್ಡಪ್ಪ ಮಾಳಗುಡ್ಡಪ್ಪನವರ ಇದ್ದರು. ಹಾಲಕ್ಕಿ ಬಳಗದ ಹಾಲೇಶ ಗುಂಗೇರ ಜಾನಪದ ಹಾಗೂ ಬಸವಣ್ಣನವರ ವಚನಗಳನ್ನು ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.