ಹಾವೇರಿ

ಪ್ರಕರಣ ಹಿಂಪಡೆಯದಿದ್ದರೆ ಉಗ್ರ ಹೋರಾಟ

Published On :

ರಾಣಿಬೆನ್ನೂರು: ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾದ ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಕೇಂದ್ರ ಕಚೇರಿ ಸ್ಥಾಪನೆಗಾಗಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ 1998ರಲ್ಲಿ ಸುಮಾರು 48 ಗಂಟೆ ಹೋರಾಟ ನಡೆಸಿದ್ದ ನಾಡೋಜ ಡಾ೤ ಪಾಟೀಲ ಪುಟ್ಟಪ್ಪ ಹಾಗೂ ಹೋರಾಟಕ್ಕೆ ಸಹಕರಿಸಿದ್ದ ಕನ್ನಡಪರ ಸಂಘಟಕರ ಮೇಲೆ ಕೇಂದ್ರ ರೇಲ್ವೆ ಇಲಾಖೆ ಹಾಕಿರುವ ಎಲ್ಲ ಪ್ರಕರಣಗಳನ್ನು ಕೂಡಲೆ ರದ್ದುಪಡಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ತಿಳಿಸಿದ್ದಾರೆ.
ಶುಕ್ರವಾರ ನಗರದ ರೇಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ರೇಲ್ವೆ ನಿಲ್ದಾಣಾಧಿಕಾರಿಗಳ ಮುಖಾಂತರ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಮಂತ್ರಿ ಡಾ೤ ಮನಮೋಹನ ಸಿಂಗ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣಕ್ಕಾಗಿ ಗೋಕಾಕ ಚಳವಳಿ ನಡೆಸುವುದರೊಂದಿಗೆ ರಾಜ್ಯದ ನೆಲ, ಜಲ, ಭಾಷೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ನಿತ್ಯ ಹೋರಾಟ ನಡೆಸುತ್ತಿರುವ ಡಾ೤ ಪಾಟೀಲ ಪುಟ್ಟಪ್ಪನವರು, ಕನ್ನಡ ವಿರೋಧಿಗಳಿಗೆ ತಮ್ಮದೆ ಆದ ದಾಟಿಯಲ್ಲಿ ಉತ್ತರ ನೀಡುತ್ತಾ ರಾಜ್ಯದ ಸಮಸ್ತ ಕನ್ನಡಿಗರ ರಕ್ಷಣೆಗೆ ದುಡಿಯುತ್ತಿದ್ದಾರೆ.
ದಶಕಗಳ ಹಿಂದೆ ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಕಚೇರಿ ಸ್ಥಾಪಿಸುವಂತೆ ಹೋರಾಟ ನಡೆಸಿದ್ದ ಡಾ೤ ಪಾಟೀಲ ಪುಟ್ಟಪ್ಪನವರ ಮೇಲೆ ಕೇಂದ್ರ ಮತ್ತು ರಾಜ್ಯ ರೇಲ್ವೆ ಇಲಾಖೆಗಳು ಹಾಕಿದ್ದ ಪ್ರಕರಣವನ್ನೆಲ್ಲ ರಾಜೀ ಸೂತ್ರದಡಿ ಬಗೆಹರಿಸುತ್ತೆವೆಂದು ಕೇಂದ್ರ ರೇಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್ ಸೇರಿದಂತೆ ಅನೇಕರು, ಪಾಟೀಲ ಪುಟ್ಟಪ್ಪ ಹಾಗೂ ಪುಟ್ಟಪ್ಪನವರ ಜೊತೆಗೆ ಹೋರಾಟ ನಡೆಸಿದವರ ಮೇಲೆ ರೇಲ್ವೆ ಇಲಾಖೆ ಹಾಕಿರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತೆವೆಂದು ನೀಡಿದ್ದ ಆಶ್ವಾಸನೆಗಳೆಲ್ಲ ಹುಸಿಯಾದ ಕಾರಣ 94ರ ಹಿರಿಯ ಜೀವಿ ನಾಡೋಜ ಡಾ೤ ಪಾಟೀಲ ಪುಟಪ್ಪನವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ನಡೆಸಿದ್ದರ ಫಲವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆಂದರೆ ಕರ್ನಾಟಕದ ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತಾಗಿದೆ ಎಂದರು.
ಕೇಂದ್ರ, ರಾಜ್ಯ ಸರ್ಕಾರ ಒಂದಾಗಿ ಪುಟ್ಟಪ್ಪನವರ ಮೇಲಿನ ಎಲ್ಲ ಪ್ರಕರಣ ಕೂಡಲೆ ಇತ್ಯರ್ಥಪಡಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಆಗ್ರಹಿಸಿದರು.
ತಾಲೂಕು ಕರವೇ ಅಧ್ಯಕ್ಷ ಚಂದ್ರು ಕಡ್ಲಿಗೊಂದಿ ಮಾತನಾಡಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ರಾಣಿಬೆನ್ನೂರು ರೇಲ್ವೆ ನಿಲ್ದಾಣಾಧಿಕಾರಿ ಮೋಹನದಾಸ್ ಮಕ್ಕಿತಾಯಿ ಮಾತನಾಡಿ, ಸದರಿ ಪತ್ರವನ್ನು ಕೂಡಲೆ ಮೇಲಧಿಕಾರಿಗಳಿಗೆ ಒಪ್ಪಿಸಲಾಗುವುದೆಂದು ತಿಳಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಸ್ವಾಭಿಮಾನಿ ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮ್ಮ ಹೆಗ್ಗಪ್ಪನವರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಕ್ಕಮ್ಮ ನೇಕಾರ, ಪ್ರಧಾನ ಕಾರ್ಯದರ್ಶಿ ರಾಜು ಅಳಲಗೇರಿ, ಜಿಲ್ಲಾ ಕಾರ್ಯದರ್ಶಿ ಸಿದ್ದಾರೂಢ ಗುರಂ, ಪಾಲಾಕ್ಷಪ್ಪ ಕಡೆಮನಿ, ತಿಮ್ಮಣ್ಣ ವೆಂಕಣ್ಣನವರ, ಚನ್ನಪ್ಪ, ಕುಪ್ಪೆಲೂರಿನ ಶಾಮರಡ್ಡಿ, ಪರಸಪ್ಪ ಶೆಟ್ಟೆರ್, ಮಡಿವಾಳಪ್ಪ ಮಡಿವಾಳರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.