ಹೊಂದಾಣಿಕೆಯಿಂದ ಬದುಕಿ: ಕೂಡ್ಲಗಿಮಠ
ಶಿಗ್ಗಾಂವಿ: ಮಹಿಳೆಯರಿಗೆ ಪುರುಷರ ಸಮಾನ ಹಕ್ಕನ್ನು ನೀಡಲಾಗಿದೆ. ಸೊಸೆಯನ್ನು ಮಗಳಂತೆ ಹಾಗೂ ಅತ್ತೆಯನ್ನು ತಾಯಿಯಂತೆ ಕಂಡರೆ ಸಮಸ್ಯೆಗಳು ಉದ್ಭವಿಸಲಾರವು ಎಂದು ಸರ್ಕಾರಿ ಅಭಿಯೋಜಕ ಎಸ್.ಜಿ. ಕೂಡ್ಲಗಿಮಠ ಹೇಳಿದರು.
ತಾಲೂಕಿನ ತಾಲೂಕು ಕಾನೂನು ಸೇವಾ ಸಮಿತಿ, ಸರ್ಕಾರಿ ಅಭಿಯೋಜಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಆಶ್ರಯದಲ್ಲಿ ಧುಂಡಸಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕಾನೂನು ಅರಿವು-ನೆರವು ಶಿಬಿರ ಉದ್ಘಾಟಿಸಿದ ಅವರು, ತವರು ಮನೆ ಹಾಗೂ ಗಂಡನ ಮನೆಯಲ್ಲಿ ಹೆಣ್ಣು ಮಕ್ಕಳು ಸಮಾನ ಆಸ್ತಿ ಹಕ್ಕು ಹೊಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಸಂಬಂಧಗಳನ್ನು ಕಳಚಿಕೊಳ್ಳದೆ ಹೊಂದಾಣಿಕೆಯಿಂದ ಬದುಕುವುದು ಸೂಕ್ತ. ಅನಿವಾರ್ಯವಾದಾಗ ಮಾತ್ರ ಕಾನೂನು ಸಹಾಯ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ, ಮಗು ಕಣ್ಣು ತೆಗೆದಾಗ ಮೊದಲು ನೋಡುವುದು ತಾಯಿಯನ್ನು. ಎಲ್ಲ ತಾಯಂದಿರು ಮಕ್ಕಳನ್ನು ಒಳ್ಳೆಯ ಮಾರ್ಗದತ್ತ ನಡೆಸಬೇಕು. ಅವಿಭಕ್ತ ಕುಟುಂಬಗಳಾಗಿ ಉಳಿಯಬೇಕಾದರೆ ಹೆಣ್ಣು ಮಕ್ಕಳ ಸಹನೆ, ತ್ಯಾಗವೇ ಮುಖ್ಯ ಎಂದರು.
ಸಿಡಿಪಿಒ ಪದ್ಮಾವತಿ ಮಾತನಾಡಿ, ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆ ತಡೆಗಟ್ಟಲು ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದ್ಧತಿಗಳ ತಿಳಿವಳಿಗೆ ಹಾಗೂ ಪೌಷ್ಟಿಕ ಆಹಾರ ನೀಡುತ್ತಿದ್ದು, ಇದೊಂದು ಯಶಸ್ವಿ ಯೋಜನೆ ಎಂದರು.
ನ್ಯಾಯವಾದಿ ಕೆ.ಎನ್. ಭಾರತಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಅವರ ರಕ್ಷಣೆಯ ಅಗತ್ಯದ ಬಗ್ಗೆ ಕಾನೂನು ತಿಳಿವಳಿಕೆ ನೀಡಿದರು. ನ್ಯಾಯವಾದಿ ಜೆ.ಎ. ಹಿರೇಮಠ ಶಾಶ್ವತ ಕಾನೂನು ಸಲಹಾ ಕೇಂದ್ರದಲ್ಲಿ ಉಚಿತ ಕಾನೂನು ಸಲಹೆಗಳು ಮತ್ತು ನೆರವು ಬಗ್ಗೆ ತಿಳಿಸಿದರು. ನ್ಯಾಯವಾದಿ ಜಿ.ಎನ್. ಎಲಿಗಾರ ವೃತ್ತಿನಿರತ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿದರು.
ನ್ಯಾಯಾಲಯದ ಸಿಬ್ಬಂದಿ ಎಚ್.ವೈ. ಮುಳಗುಂದ, ಅಜ್ಜಪ್ಪ ವಡ್ಡರ, ಆರೋಗ್ಯ ಇಲಾಖೆಯ ಎಸ್.ಎಸ್. ಶಿವಪೂಜಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ಪಿ.ಎನ್. ಕೋಟಿ ಸ್ವಾಗತಿಸಿದರು. ಎಲ್.ಎಫ್. ಬಗಾಡೆ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

