ಹಾವೇರಿ

ಹಾನಗಲ್ಲ: ಇಂದಿನಿಂದ ಪೀರ್ ಸೈಯದ್ ಉರೂಸ್

Published On :

ಹಾನಗಲ್ಲ: ಹಾಗಲ್ಲಿನ ಪ್ರಸಿದ್ಧ ಕಾಶ್ಮೀರಿ ಗುರುಗಳಾದ ಪೀರ ಸೈಯದ್ ಮಖಬೂಲ್ ಅಹ್ಮದ್ ಶಾ ಖಾದರಿ ಅವರ ಉರೂಸ್ ಡಿ. 7 ಹಾಗೂ 8ರಂದು ನಡೆಯಲಿದೆ. ಶನಿವಾರ ಝಂಡಾ, ಡಿ. 8ರಂದು ಪ್ರಸಿದ್ಧ ಗುರುಗಳಾದ ಮೌಲಾನಾ ಶೆಹರೆಯಾರ ಆಲಂ, ಹಾಫೀಜ ಮಹ್ಮದ ಅಹಸಾನ ಮತ್ತು ನಾತ ಖಾನ ಮಹ್ಮದ್ ಸಲೀಂ ರಜಾ ಮಖಬೂಲಿ ಅವರಿಂದ ವಾಜ, ಬಯಾನ ಹಾಗೂ ನಾತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತೆಹರೀಕ ಫಿಕ್ರೆ ರಜಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಾನಗಲ್ಲ: ಇಂದಿನಿಂದ ಪ್ರತಿಭಾ ಕಾರಂಜಿ
ಹಾನಗಲ್ಲ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲೆ ಆವರಣದಲ್ಲಿ ಡಿ. 7 ಹಾಗೂ 8 ರಂದು ಆಯೋಜಿಸಲಾಗಿದೆ. ಶನಿವಾರ ಪ್ರಾಥಮಿಕ ಶಾಲಾ ವಿಭಾಗದ ವೈಯುಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆ, ಡಿ. 8ರಂದು ಪ್ರೌಢಶಾಲಾ ವಿಭಾಗದ ವೈಯುಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿಭಾ ಕಾರಂಜಿಯನ್ನು ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಹರಿಜನ, ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಮಹಾದೇವಪ್ಪ ಬಾಗಸರ, ಗೀತಾ ಅಂಕಸಖಾನಿ, ಕಸ್ತೂರೆವ್ವ ವಡ್ಡರ, ಅಬಿದಾಬಿ ನದಾಫ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭೆ ಉಪಾಧ್ಯಕ್ಷ ಮಹಮ್ಮದ ಜಾಫರ ಕೇಣಿ, ಡಿಡಿಪಿಐ ಎಸ್.ಬಿ. ಕೊಡ್ಲಿ, ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ತಾಪಂ ಇಒ ಡಾ೤ ಡಿ.ಸಿ. ಬಸವರಾಜಪ್ಪ, ಮಾದರಿ ಶಾಲೆಯ ಅಧ್ಯಕ್ಷ ಜಯಪ್ಪ ದೇವಗಿರಿ ಭಾಗವಹಿಸುವರು. ಈ ಸ್ಪರ್ಧೆಗೆ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮಕ್ಕಳನ್ನು ನಿಗದಿಪಡಿಸಿದ ದಿನ ಬೆಳಗ್ಗೆ 9.30ಕ್ಕೆ ಕರೆದುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ತಿಳಿಸಿದ್ದಾರೆ.
ಬಸಮ್ಮ ತಳವಾರ ನಿಧನ
ಹಾನಗಲ್ಲ: ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರ ಮಾತೋಶ್ರೀ, ತಾಲೂಕಿನ ಬೀಳಿಗಿ ನಿವಾಸಿ ಬಸಮ್ಮ ಬೆಳ್ಳೆಪ್ಪ ತಳವಾರ (80) ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.
ಹಾನಗಲ್ಲ: ಇಂದಿನಿಂದ ಪೀರ್ ಸೈಯದ್ ಉರೂಸ್
ಹಾನಗಲ್ಲ: ಹಾಗಲ್ಲಿನ ಪ್ರಸಿದ್ಧ ಕಾಶ್ಮೀರಿ ಗುರುಗಳಾದ ಪೀರ ಸೈಯದ್ ಮಖಬೂಲ್ ಅಹ್ಮದ್ ಶಾ ಖಾದರಿ ಅವರ ಉರೂಸ್ ಡಿ. 7 ಹಾಗೂ 8ರಂದು ನಡೆಯಲಿದೆ. ಶನಿವಾರ ಝಂಡಾ, ಡಿ. 8ರಂದು ಪ್ರಸಿದ್ಧ ಗುರುಗಳಾದ ಮೌಲಾನಾ ಶೆಹರೆಯಾರ ಆಲಂ, ಹಾಫೀಜ ಮಹ್ಮದ ಅಹಸಾನ ಮತ್ತು ನಾತ ಖಾನ ಮಹ್ಮದ್ ಸಲೀಂ ರಜಾ ಮಖಬೂಲಿ ಅವರಿಂದ ವಾಜ, ಬಯಾನ ಹಾಗೂ ನಾತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತೆಹರೀಕ ಫಿಕ್ರೆ ರಜಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಣ ವ್ಯಾಪಾರವಲ್ಲ: ಬಳ್ಳಾರಿ
ಬ್ಯಾಡಗಿ: ಶಿಕ್ಷಣ ವ್ಯಾಪಾರವಲ್ಲ. ಶಾಲೆಗಳು ಮಗುವಿನಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆ, ಮಾನಸಿಕ ಸದೃಢತೆ, ದೈಹಿಕ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯನ್ನು ಒರೆಗಲ್ಲಿಗೆ ಹಚ್ಚುವ ಪ್ರಯೋಗಶಾಲೆಗಳಿದ್ದಂತೆ ಎಂದು ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದ ಮಹದೇವ ಮೈಲಾರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಅವರು, ಇತ್ತೀಚೆಗೆ ಮಗು ಪಡೆದ ಅಂಕಗಳಿಂದ ಸಾಮರ್ಥ್ಯ ಅಳೆಯಲಾಗುತ್ತಿದೆ. ಆದರೆ, ಈ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಮಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆಸಮಾನ ಪ್ರಾತಿನಿಧ್ಯ ನೀಡಬೇಕು ಎಂದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ ಗೊರವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ವಿಜಯ ಸವಣೂರ, ಎಸ್.ಎಂ. ಅಕ್ಕಿ, ಟಿ.ವಿ. ರಾಮಪ್ಪ ಇದ್ದರು. ಮುಖ್ಯಶಿಕ್ಷಕ ಎಸ್.ಜಿ. ಶಿಗ್ಗಾಂವಿ ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳು ಪ್ರದರ್ಶಿಸಿದ ಜಾನಪದ ನೃತ್ಯ, ಕೋಲಾಟ, ಭರತನಾಟ್ಯ, ಛದ್ಮವೇಷಗಳು ಮನಮೋಹಕವಾಗಿದ್ದವು. ಬಸವರಾಜ ಕಂಬಿ ಸ್ವಾಗತಿಸಿದರು. ನಾಗಾ ನಾಯ್ಕ ನಿರೂಪಿಸಿದರು. ಎಸ್.ಜಿ. ಸವದಿ ವಂದಿಸಿದರು.
12ರಂದು ಹೋರಿ ಬೆದರಿಸುವ ಸ್ಪರ್ಧೆ
ಹಿರೇಕೆರೂರು: ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ಡಿ. 12ರಂದು ಜರುಗಲಿದೆ. ಅಂದು ಬೆಳಗ್ಗೆ 11ಕ್ಕೆ ಚಲನಚಿತ್ರ ನಟ, ಮಾಜಿ ಶಾಸಕ ಬಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಪಪಂ ಅಧ್ಯಕ್ಷೆ ಶಿವಲೀಲಾ ಎಸ್.ಆರ್., ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಬಾಳಿಕಾಯಿ, ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ, ಕೆಎಂಎಫ್ ಮಾಜಿ ಅಧ್ಯಕ್ಷ ತಿರುಕಪ್ಪ ಗುಡ್ಡಳ್ಳಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಗೌಡ ಪಾಟೀಲ, ರಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್. ಪಾಟೀಲ, ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ, ಪಪಂ ಸದಸ್ಯ ಮಹ್ಮದ ಹುಸೇನ ವಡ್ಡಿನಕಟ್ಟಿ, ಉದ್ಯಮಿಗಳಾದ ಸತೀಶ ನಾಡಿಗೇರ, ಬಾಲು ಡಿ. ಜನ್ನು, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಖಾದರ ಸಾಬ್ ಲೋಹಾರ ಉಪಸ್ಥಿತರಿರುವರು. ಸಂಜೆ 6ಕ್ಕೆ ಶಾಸಕ ಯು.ಬಿ. ಬಣಕಾರ ಬಹುಮಾನ ವಿತರಿಸುವರು. ಕಿರುತೆರೆ ಕಲಾವಿದ ಗುರುಶಾಂತ ಯತ್ತಿನಹಳ್ಳಿ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಎಪಿಎಂಸಿ ಅಧ್ಯಕ್ಷ ಪರ್ವತಪ್ಪ ಅಜಗೋಳ, ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಜಿಪಂ ಸದಸ್ಯ ಬಸವರಾಜ ಬೇವಿನಹಳ್ಳಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಬಿಜೆಪಿ ಅಧ್ಯಕ್ಷ ಎಸ್.ಆರ್. ಅಂಗಡಿ, ಮುಖಂಡರಾದ ಜೆ.ಬಿ. ತಂಬಾಕದ, ಸತೀಶ ತಂಬಾಕದ, ಚಂದ್ರಶೇಖರ ಬಾಳಿಕಾಯಿ ಪಾಲ್ಗೊಳ್ಳುವರೆಂದು ಕಾರ್ಯಾಧ್ಯಕ್ಷ ದುರುಗಪ್ಪ ನೀರಲಗಿ ತಿಳಿಸಿದ್ದಾರೆ.
ಆಸಕ್ತಿಯಿಂದ ಬೋಧಿಸಿ
ಹಿರೇಕೆರೂರು: ಗಣಿತ ವಿಷಯವನ್ನು ಅತಿ ಸುಲಲಿತವಾಗಿ ಕಲಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಗಣಿತ ಶಿಕ್ಷಕರು ಸರಳ ವಿಧಾನ ಅನುಸರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಕರೆ ನೀಡಿದರು. ಹಂಸಬಾವಿ ದುರ್ಗದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಗಣಿತ ವಿಷಯದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸದಾಚಾರ, ಸದ್ವರ್ತನೆ, ಶಾಂತ ಸ್ವಭಾವ ಬೆಳೆಸಿಕೊಂಡು, ಏಕಾಗ್ರತೆ ಪಡೆಯಲು ಸಾಧ್ಯ ಎಂದರು. ಮೂರು ತಾಸಿಗೂ ಹೆಚ್ಚು ಅವಧಿಗೆ ನಡೆದ ಗಣಿತ ಸಂವಾದದಲ್ಲಿ 95 ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿಕ್ಕಿಂ ರಾಜ್ಯದಲ್ಲಿ ಜರುಗಿದ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ವಿಜ್ಞಾನ ಶಿಕ್ಷಕ ದಯಾನಂದ ಡಿ.ಎಚ್. ಹಾಗೂ ವಿದ್ಯಾರ್ಥಿ ಲಿಂಗರಾಜ ಬಸಾಪುರ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಭಿನಂದಿಸಿದರು. ಮುಖ್ಯ ಶಿಕ್ಷಕ ಜಿ.ಆರ್. ಕೆಂಚಕ್ಕನವರ, ಎಸ್.ಎನ್. ಬಣಕಾರ, ವಿನಾಯಕ ಹಡಪದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.