ನಾಳೆಯಿಂದ ವಾರದ ಸಂತೆ
ಹಾವೇರಿ: ತಾಲೂಕಿನ ಬಸಾಪುರ ಗ್ರಾಮದಲ್ಲಿ ವಾರದ ಸಂತೆಯನ್ನು ಪ್ರತಿ ಮಂಗಳವಾರ ವಾರದ ಸಂತೆ ಆರಂಭಿಸಲು ನಿರ್ಧರಿಸಲಾಗಿದೆ. ಪ್ರತಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಬಸಾಪುರದ ಗಾಂಧಿ ಸರ್ಕಲ್ನಲ್ಲಿ ಸಂತೆ ಪ್ರಾರಂಭಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಇದೇ ಡಿ. 10ರಿಂದ ಮಂಗಳವಾರ ಸಂತೆಯನ್ನು ಪ್ರಾರಂಭಿಸಲು ಸೂಚಿಸಿದ್ದು, ವಹಿವಾಟುದಾರರು ನಿಯಮಾನುಸಾರವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಚಾವಡಿ, ಪಿಡಿಒ ವೀರಣ್ಣ ಜಾಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ದತ್ತ ಜಯಂತಿ
ಶಿಗ್ಗಾಂವಿ: ಪಟ್ಟಣದ ದೇಸಾಯಿ ಗಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ. 10ರಿಂದ 17ರ ವರೆಗೆ ದತ್ತ ಜಯಂತಿ ಉತ್ಸವ ಅದ್ಧೂರಿಯಾಗಿ ಜರುಗಲಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕಾಕಡಾರತಿ, 8 ಗಂಟೆಗೆ ಮಹಾಪೂಜೆ, 10 ಗಂಟೆಗೆ ಗುರುಚರಿತ್ರೆ ಪಾರಾಯಣ, ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿವೆ. ಡಿ. 14ರಿಂದ ಮೂರು ದಿನಗಳ ಕಾಲ ಮುಂಜಾನೆ 11ರಿಂದ ಮಧ್ಯಾಹ್ನ 1.30ರ ತನಕ ಮಧುಕರಿ ಸೇವೆ ಇದೆ. ಡಿ. 16ರಂದು ಬೆಳಗ್ಗೆ 8 ಗಂಟೆಗೆ ಗುರುಚರಿತ್ರೆ ಪುರಾಣ ಮಂಗಲೋತ್ಸವ, ಮಧ್ಯಾಹ್ನ 11 ಗಂಟೆಗೆ ಶ್ರೀ ದತ್ತ ಹೋಮ, ಪೂರ್ಣಾಹುತಿ, ಸಂಜೆ 7 ಗಂಟೆಗೆ ಗುರು ದತ್ತಾತ್ರೇಯ ತೊಟ್ಟಿಲೋತ್ಸವ ಇದೆ. ಡಿ. 17ರಂದು ಬೆಳಗ್ಗೆ 9 ಗಂಟೆಗೆ ಗುರು ದತ್ತಾತ್ರೇಯರ ಪಲ್ಲಕ್ಕಿಯ ನಗರ ಸಂಕೀರ್ತನೆ, ಶೋಭಾಯಾತ್ರೆ, ಅಮೃತ ಸ್ನಾನ ನಡೆಯಲಿದ್ದು, ಪಲ್ಲಕ್ಕಿ ದತ್ತಾತ್ರೇಯ ಸನ್ನಿಧಿ ತಲುಪಿದ ಮೇಲೆ ಮಹಾಮಂಗಳಾರತಿ, ಮಹಾನೈವೇದ್ಯ ಹಾಗೂ ಮಹಾಪ್ರಸಾದ ಜರುಗಲಿದೆ ಎಂದು ಶ್ರೀ ಗುರುದತ್ತ ಜಯಂತಿ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

