ಹಾವೇರಿ

ಸಚಿವ ಎಚ್. ಆಂಜನೇಯಗೆ ಅಭಿನಂದನೆ

Published On :

ಶಿಗ್ಗಾಂವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪೂರಕವಾಗುವ ವಿಧೇಯಕವೊಂದನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ಕೆಪಿಸಿಸಿ ಎಸ್‌ಟಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಹಾದಿಮನಿ ಪ್ರಕಟಣೆ ನೀಡಿದ್ದು, ಪರಿಶಿಷ್ಟರಿಗೆ ಮೀಸಲಾದ ಹಣ ನಿರ್ದಿಷ್ಟ ಫಲಾನುಭವಿಗೆ ತಲುಪುವ ವ್ಯವಸ್ಥೆ ಹಾಗೂ ವೆಚ್ಚ ಮಾಡಲಾಗದ ಹಣವನ್ನು ಮುಂದಿನ ಆರ್ಥಿಕ ಸಾಲಿಗೆ ಮುಂದುವರಿಸುವ, ವೆಚ್ಚ ಮಾಡುವಲ್ಲಿ ಉದಾಸೀನ ತೋರುವ ಅಥವಾ ಅನ್ಯ ಉದ್ದೇಶಕ್ಕೆ ವರ್ಗಾಯಿಸುವ ಅಧಿಕಾರಿಗಳಿಗೆ 6 ತಿಂಗಳ ಸೆರೆಮನೆ ವಾಸ ವಿಧಿಸುವ ಕ್ರಮ ಸ್ವಾಗತಾರ್ಹ. ಎಸ್ಸಿ, ಎಸ್ಟಿ ಜನರಿಗೆ ಮೀಸಲಾದ ಶೇ. 23 ಅನುದಾನ ಸದ್ಬಳಕೆಗೆ ಇವೆಲ್ಲ ದಿಟ್ಟತನದ ಕ್ರಮಗಳನ್ನು ಜಾರಿಗೆ ತಂದಿರುವ ಎಚ್. ಆಂಜನೇಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿಟ್ಟ ಕ್ರಮವನ್ನು ಸ್ವಾಗತಿಸಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಕಾಂಗ್ರೆಸ್ ಇದನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ. ವೈ. ಪಾಟೀಲ, ಶಿವಾನಂದ ರಾಮಗಿರಿ, ಯುಸೂಫ್‌ಸಾಬ ಬಾವಿಕಟ್ಟಿ, ಗುರುನಗೌಡ ಪಾಟೀಲ, ಈರಣ್ಣ ಬಡ್ಡಿ, ಶಿವಪುತ್ರಪ್ಪ ಜಕ್ಕಣ್ಣವರ, ಫಯಾಜ್ ಮುಲ್ಲಾ, ಅಶೋಕ ಓಲೇಕಾರ, ಈರಪ್ಪ ಓಲೇಕಾರ ಇತರರು ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.