ಕನಕ ಮಾರ್ಗದಲ್ಲಿ ನಡೆಯಿರಿ: ಶಿವಣ್ಣನವರ
ರಾಣಿಬೆನ್ನೂರು: ದಾಸ ಶ್ರೇಷ್ಠರೆನ್ನಿಸಿಕೊಂಡಿರುವ ಕನಕದಾಸರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವುದರೊಂದಿಗೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಯುವ ಜನತೆ ಮುಂದಾಗಬೇಕೆಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಕಾಕೋಳ ಗ್ರಾಮದ ಕನಕದಾಸ ಯುವಕ ಸಂಘ ಹಾಗೂ ಗ್ರಾಪಂ ಕಾಕೋಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನಕದಾಸ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀಕೃಷ್ಣನನ್ನು ಕಾಣಲು ಪಾದಯಾತ್ರೆ ಮೂಲಕ ಉಡುಪಿಗೆ ತೆರಳಿದ್ದ ಜನರಿಗೆ ಮೇಲ್ವರ್ಗದ ಜನರು ನೀಡಿದ್ದ ಹಿಂಸೆ ಸಹಿಸಿಕೊಂಡ ಕನಕದಾಸರು ತಮ್ಮ ಭಕ್ತಿಯಿಂದ ಶ್ರೀಕೃಷ್ಣನನ್ನು ದೇವಸ್ಧಾನದ ಹಿಂದೆ ನಿಂತು ಧ್ಯಾನಿಸಿದ್ದರ ಫಲವಾಗಿ ಶ್ರೀಕೃಷ್ಣ ಅತ್ತ ತಿರುಗಿದ್ದಾನೆ ಎಂಬುದಕ್ಕೆ ಉಡುಪಿಯ ಕೃಷ್ಣ ದೇವಸ್ಧಾನದ ಹಿಂದೆ ಇರುವ ಕನಕನ ಕಿಂಡಿಯೆ ಅದಕ್ಕೆ ಸಾಕ್ಷಿ ಎಂದರು.
ಜಿಪಂ ಸದಸ್ಯಣಿ ಲಲಿತಾ ಜಾಧವ, ತಾಪಂ ಸದಸ್ಯ ಬಸನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜಪ್ಪ ಸವಣೂರು, ಎಪಿಎಂಸಿ ಸದಸ್ಯ ಮಂಜಪ್ಪ ಹಾವನೂರು, ಗುಡ್ಡಪ್ಪ ಕಡೇಮನಿ, ದಿಳ್ಳೆಪ್ಪ ಹಿತ್ತಲಮನಿ ಮಾತನಾಡಿದರು.
ಚನ್ನವ್ವ ಭಾರ್ಕಿ, ಸುರೇಶಗೌಡ ಪಾಟೀಲ, ದಿಳ್ಳೆಪ್ಪ ಬಣಕಾರ, ಗುಡ್ಡಪ್ಪ ಹಾರೋಗೊಪ್ಪ, ರಾಮಪ್ಪ ಹೋಳಿಯಪ್ಪನವರ, ಕೆಂಚಪ್ಪ ಹಿತ್ತಲಮನಿ, ಪುಟ್ಟಪ್ಪ ಕರಬಣ್ಣನವರ, ಗಂಗಮ್ಮ ಅಗಸನಹಳ್ಳಿ, ಚನ್ನಪ್ಪ ಕೊಂಬಳಿ, ಚಂದ್ರಪ್ಪ ಅಗಸನಹಳ್ಳಿ, ಬಸವ್ವ ಸಾವಕ್ಕನವರ ಇದ್ದರು.
ಕಾರ್ಯಕ್ರಮ ಸಂಘಟಿಸಿದ್ದ ಕನಕದಾಸ ಯುವಕ ಸಂಘದ ಅಧ್ಯಕ್ಷ ರಮೇಶ ಕರಬಣ್ಣನವರ, ಜಗದೀಶ ಚಪ್ಪರದ, ಲೋಕೇಶ ಅಗಸನಹಳ್ಳಿ, ನಂಜಪ್ಪ ಕಿವುಡನವರನ್ನು ಶಾಸಕ ಬಸವರಾಜ ಶಿವಣ್ಣನವರ ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

