ಹಾವೇರಿ

ಶಿಗ್ಗಾಂವಿಯಲ್ಲಿ ನರಬಲಿ ವದಂತಿ: ಸ್ಥಳ ಅಗೆದು ಪರಿಶೀಲನೆ

Published On :

ಶಿಗ್ಗಾಂವಿ:  ನಿಧಿಗಾಗಿ ನರಬಲಿ ನೀಡಲಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಜಿ.ಎಂ. ಶಶಿಧರ ನೇತೃತ್ವದಲ್ಲಿ ಪೊಲೀಸರು ಪಟ್ಟಣದ ಶಿವಪ್ಪ ನವಲುಗುಂದ ಎಂಬವರ ತೋಟದಲ್ಲಿ ಸಂಶಯಾಸ್ಪದ ಸ್ಥಳವೊಂದನ್ನು ಅಗೆದು ಎರಡು ಗಂಟೆ ಕಾಲ ಪರಿಶೀಲಿಸಿದ ಪ್ರಸಂಗ ಬುಧವಾರ ನಡೆಯಿತು.  ನಿಧಿಗಾಗಿ ದಾವಣಗೆರೆ ನಗರದ ಮೂಲಾ ನಕ್ಷತ್ರದಲ್ಲಿ ಹುಟ್ಟಿದ 14 ವರ್ಷದ ಮಗುವೊಂದನ್ನು ಇದೇ ತೋಟದಲ್ಲಿ ಬಲಿ ಕೊಡಲಾಗಿದೆ ಎಂಬ ವದಂತಿ ಶಿಗ್ಗಾಂವಿ ಪಟ್ಟಣದಲ್ಲಿ ಜೋರಾಗಿ ಹರಡಿತ್ತು. ಈ ವಿಷಯ ಪೊಲೀಸರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂಬ ಆರೋಪಗಳು ಕೇಳಲಾರಂಭಿಸಿದವು. ಇದು ಪೊಲೀಸರಿಗೆ ತಲೆ ಬಿಸಿ ಮಾಡಿತ್ತು.  ವದಂತಿ, ಆರೋಪದ ಹಿನ್ನೆಲೆಯಲ್ಲಿ ತೋಟದ ಮಾಲೀಕನನ್ನು ಠಾಣೆಗೆ ಕರೆದು ವಿಚಾರಣೆ ಕೈಗೊಂಡ ವೇಳೆ, ಮಾಲೀಕ ತನ್ನ ಮನೆಯಲ್ಲಿರುವ ಸಮಸ್ಯೆ ನಿವಾರಣೆಗಾಗಿ ವಿಶೇಷ ಪೂಜೆಗೈದು ನೀರನ್ನು ಮಾತ್ರ ಇಲ್ಲಿ ಹಾಕಲಾಗಿದೆಯೇ ಹೊರತು ನಿಧಿಗಾಗಿ ನರಬಲಿ ಮಾಡಿಲ್ಲ. ಇದು ನನಗೆ ಗೊತ್ತಿಲ್ಲದ ವಿಷಯ ಎಂದು ಸ್ಪಷ್ಟಪಡಿಸಿದರು.  ಆದರೂ ಸಂಶಯ ವ್ಯಕ್ತಪಡಿಸಿದ ಪೊಲೀಸರು, ಬುಧವಾರ ಬೆಳಗ್ಗೆ 11 ಗಂಟೆಗೆ ತೋಟದ ಮಾಲೀಕ ಪೂಜೆಗೈದ ಸ್ಥಳವನ್ನು ಸುಮಾರು 4 ಅಡಿ ಆಳ ಅಗೆದು ಪರಿಶೀಲಿಸಿದರು. ನಿಧಿಗಾಗಿ ನರಬಲಿ ಕೊಟ್ಟ ಶವ ಪತ್ತೆಯಾಗದ ಪರಿಣಾಮ ಎರಡು ಗಂಟೆ ಪರಿಶೀಲನೆ ಕೈಗೊಂಡು ತೆರಳಿದರು. ಪುರಸಭೆ ಸಿಬ್ಬಂದಿ ಭೂಮಿ ಅಗೆಯಲು ನೆರವಾದರು. ಆರೋಗ್ಯ ನಿರೀಕ್ಷಕ ವಿ.ಆರ್. ಪಾಟೀಲ ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.