ಅತ್ತೆಯನ್ನು ತಾಯಿಯಂತೆ ಕಾಣಿ: ಕಾಶಿ ಶ್ರೀ
ಶಿಗ್ಗಾಂವಿ: ತಂದೆ-ತಾಯಿ ಹೆಣ್ಣಿಗೆ ಜನ್ಮ ನೀಡಿದ್ದರೂ, ಹೆಣ್ಣು ಕೊಟ್ಟ ಮನೆ ಸ್ವತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಣ್ಣು ಅತ್ತೆಯನ್ನು ತಾಯಿ ಎಂಬ ಭಾವನೆಯಿಂದ ಕಾಣಬೇಕು. ಅತ್ತೆಯೂ ಸೊಸೆಯನ್ನು ಮಗಳು ಎಂದು ಪ್ರೀತಿಸಬೇಕು. ಅಂದಾಗ ಸುಂದರ ಸಂಸಾರ ಸಾಗುತ್ತದೆ ಎಂದು ಕಾಶಿ ಪೀಠ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಬಂಕಾಪುರದ ಹುಚ್ಚೇಶ್ವರ ಮಹಾಮಠದಲ್ಲಿ ನಡೆದ 9ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಪ್ರವಚನ ಮುಕ್ತಾಯ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗಳಿಗೆ ಅವರು ಆಶೀರ್ವಚನ ನೀಡಿದರು. ಸಣ್ಣಪುಟ್ಟ ಸಮಸ್ಯೆಗಳಿಂದ ಅತ್ತೆ-ಸೊಸೆ ಮಧ್ಯೆ ಎದುರಾಗುವ ಕಲಹದಿಂದ ಸಂಸಾರದ ನೆಮ್ಮದಿ ಕೆಡುತ್ತದೆ. ಪರಸ್ಪರ ಹೊಂದಾಣಕೆಯಿಂದ ಜೀವಿಸಿದಲ್ಲಿ ಮಾತ್ರ ಅಂತಹ ಗೃಹಾಶ್ರಮದಲ್ಲಿ ದೇವರು ನೆಲೆಸುತ್ತಾನೆ. ಸೊಸೆಯಾಗಿ ಬಂದವಳು, ಆ ಮನೆಯ ಸರಸ್ವತಿ, ಲಕ್ಷ್ಮಿಯಾಗಿ ಬಾಳು ನಡೆಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರ, ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯ ನಿಂಗಪ್ಪ ಜವಳಿ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ರಾಣಿಬೆನ್ನೂರು ಉಪತಹಸೀಲ್ದಾರ್ ವೀರಯ್ಯ ಹಿರೇಮಠದ, ವಿಶ್ವಾರಾಧ್ಯ ಸಮಿತಿ ಪದಾಧಿಕಾರಿಗಳಾದ ಜಿ.ಐ. ಸಜ್ಜನಗೌಡ್ರ, ಬಸವರಾಜ ಹುಚ್ಚಯ್ಯನವರಮಠ, ಗುರುಶಾಂತಪ್ಪ ನರೇಗಲ್ಲ, ಪರಶುರಾಮ ನರೇಗಲ್ಲ, ಶಂಕ್ರಯ್ಯನವರ ಹುಚ್ಚಯ್ಯನವರಮಠ, ಉಮೇಶ ಬನ್ನಿಮಟ್ಟಿ ಇದ್ದರು. ಸಾಹಿತಿ ಸಿ.ಎನ್. ಶಿಗ್ಗಾಂವ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

