ಶೋಷಿತರ ಪರ ಸಂಘಟನೆಗಳು ಹೋರಾಡಲಿ
ಶಿಗ್ಗಾಂವಿ: ಸಂಘಟನೆಗಳು ಜಾತಿಗೆ ಸೀಮಿತವಲ್ಲ. ಯಾವುದೇ ವರ್ಗದ ಬಡಜನತೆ, ಶೋಷಿತರಿಗಾಗಿ ಹೋರಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಬಸವರಾಜ ಎಚ್. ಮುಧೋಳ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂಬೇಡ್ಕರ್ ಎಲ್ಲ ಜನಾಂಗಗಳನ್ನೂ ಒಗ್ಗೂಡಿಸಿಕೊಂಡು ದೇಶದ ಏಳಿಗೆಗಾಗಿ ಶ್ರಮಿಸಿದವರು. ಅವರು ತೋರಿದ ಮಾರ್ಗದಲ್ಲಿ ನಡೆಯುವುದು ಅಗತ್ಯ ಎಂದರು.
ಜಿಲ್ಲಾ ಸಂಚಾಲಕ ಟಿ.ಎನ್. ಮಂಜುನಾಥ, ಅಂಬೇಡ್ಕರ್ ತತ್ವಾದರ್ಶಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಕಾನೂನು ಅರಿವನ್ನು ಪಡೆದು ಶೋಷಿತ ವರ್ಗದ ಏಳಿಗೆಗಾಗಿ ಶ್ರಮಿಸಬೇಕು. ಮೌಢ್ಯ ತೊಲಗಿದಾಗಲೇ ಗ್ರಾಮಗಳು ಉದ್ಧಾರವಾಗಲು ಸಾಧ್ಯ ಎಂದರು.
ಪದಾಧಿಕಾರಿಗಳ ಆಯ್ಕೆ
ದಸಂಸ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅಶೋಕ ಎಲ್. ಕನಕಪ್ಪನವರ, ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕರಾಗಿ ಕಂಟೆಪ್ಪ ಚನ್ನದಾಸರ, ನಗರ ಸಂಚಾಲಕರಾಗಿ ಮಂಜುನಾಥ ಕಾಳಿ ಅವರನ್ನು ಆಯ್ಕೆ ಮಾಡಲಾಯಿತು.
ಡಿ.ಎಫ್. ಧಾರವಾಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಚಾಲಕ ಶೇಖಪ್ಪ ಭೀಮನವರ, ಸಂಘಟನಾ ಸಂಚಾಲಕ ಶಿವಾನಂದ ಕಾಳಿ, ಬಸಪ್ಪ ಚನ್ನದಾಸರ, ಸುರೇಶ ಬಿ. ಹಾನಗಲ್ಲ, ಗಂಗಾಧರ ಬನ್ನೂರ, ಜಿಲಾನಿ ಜಂಗ್ಲಿ, ಬಸವರಾಜ ಬನ್ನಿಮಟ್ಟಿ, ಫಕ್ಕೀರಪ್ಪ ಕುಂದೂರ, ದ್ಯಾಮಣ್ಣ ಶೆರೆವಾಡ, ಹನುಮಂತ ನಾಯಕೊಪ್ಪ, ಧರ್ಮಪ್ಪ ಕಿವಡನೆವರ, ಅಣ್ಣಪ್ಪ ಚನ್ನದಾಸರ, ಡಿ.ಎಸ್. ಓಲೆಕಾರ, ಅನಿಲ ಭದ್ರಾಪುರ, ಹನೀಫ್ ಕಾರಡಗಿ, ಶಬ್ಬೀರ ಸುಲ್ತಾನಕಾನವರ ಇದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಕಾಳೆ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

