ಬಜೆಟ್ ಮಂಡನೆ: ಚುನಾವಣಾ ಪ್ರಣಾಳಿಕೆ
ಹಾನಗಲ್: ಮುಂಬರುವ ವಿಧಾನಸಭೆ ಚುನಾವಣೆ ಕೆಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ, ಬಿಜೆಪಿ ಗಾಳಿಯಿಲ್ಲ. ಬಜೆಟ್ ಮಂಡಿಸಿದರೆ ಅದು ಚುನಾವಣಾ ಪ್ರಣಾಳಿಕೆ, ಯಡಿಯೂರಪ್ಪ ಇನ್ನೊಬ್ಬ ಮೋದಿ. ಕೆಜೆಪಿಗೆ ಖಚಿತ ಬಹುಮತ ದೊರೆಯಲಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ತೊರೆದು ಕೆಜೆಪಿ ಸೇರಿ ಮೊದಲ ಬಾರಿಗೆ ಶುಕ್ರವಾರ ಹಾನಗಲ್ಲಗೆ ಬಂದು, ವಿರಕ್ತಮಠದ ಕಲ್ಯಾಣ ಮಂಟಪದಲ್ಲಿ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.
ಕೆಜೆಪಿಯಿಂದ ರಾಜ್ಯ ನಂ.1
ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಸರಕಾರ, ಜಗದೀಶ ಶೆಟ್ಟರ್ ಅವಧಿಯಲ್ಲಿ 7ನೇ ಸ್ಥಾನಕ್ಕೆ ಇಳಿದಿರುವುದು ದುರದೃಷ್ಟರಕರ ಸಂಗತಿ. ಮತ್ತೆ ಕೆಜೆಪಿ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕ ದೇಶದಲ್ಲಿಯೇ ನಂಬರ ಒನ್ ಅಭಿವೃದ್ಧಿ ರಾಜ್ಯ ಸರಕಾರವಾಗುತ್ತದೆ ಎಂದರು.
ಕೆಜೆಪಿಯಿಂದ ಚಿತ್ರಣ ಬದಲು ಕರ್ನಾಟಕದಲ್ಲಿ ಬಿಜೆಪಿ ಗಾಳಿ ಇದೆ ಎನ್ನುವವರು ಒಂದು ಸಾರಿ ಆಲೋಚಿಸಬೇಕು. ಈಗಷ್ಟೇ ನಡೆದ ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಅಭಿವೃದ್ಧಿ ಕಾರಣದಿಂದಾಗಿ ಬಿಜೆಪಿ ಗೆದ್ದಿದೆ. ಗಾಳಿಯಿಂದ ಅಲ್ಲ ಎಂದರು. ಬಂಗಾರಪ್ಪ ಹಾಗೂ ದೇವರಾಜ ಅರಸ್ ಕರ್ನಾಟಕದಲ್ಲಿ ಹಿಂದೆ ಪ್ರಾದೇಶಿಕ ಪಕ್ಷಕ್ಕೆ ಸರಿಯಾದ ಯೋಜನೆ ರೂಪಿಸಿದರು. ಅವನ್ನು ಅನುಷ್ಠಾನಗೊಳಿಸಲು ಆಗಲಿಲ್ಲ. ಆದ್ದರಿಂದ ಯಶಸ್ಸು ಆಗಲಿಲ್ಲ. ಆದರೆ, ಯಡಿಯೂರಪ್ಪ ಮಾತ್ರ ಮೂರುವರೆ ವರ್ಷದಲ್ಲಿ ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸಿದ್ದಾರೆ. ಈಗ ಪ್ರಾದೇಶಿಕ ಪಕ್ಷ ಕೆಜೆಪಿ ಹೊಸ ಮನ್ವಂತರ ಬರೆಯಲಿದೆ ಎಂದರು.
ಎರಡು ಕ್ಷೇತ್ರ ಪ್ರಥಮ ಸ್ಥಾನಕ್ಕೆ
ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ. ಎಲ್ಲ ಸಂದರ್ಭದಲ್ಲಿ ಕಾರ್ಯಕರ್ತರ ರಕ್ಷಣೆಗೆ ನಾನು ಬದ್ಧ ಎಂದ ಉದಾಸಿ ಬದ್ಧತೆಯಿಂದ ಅಭಿವೃದ್ಧಿಗೆ ಮುಂದಾದ ನನಗೆ ಹಾವೇರಿ ಜಿಲ್ಲೆ ಹಾಗೂ ಹಾನಗಲ್ಲ ತಾಲೂಕನ್ನು ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿ ತರುವ ಉದ್ದೇಶವಿದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ಹಸೀನಾಬಿ ನಾಯ್ಕನವರ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಬಸಣ್ಣ ಸಂಶಿ, ಎಂ.ಆರ್. ಪಾಟೀಲ, ಕಲ್ಯಾಣಕುಮಾರ ಶೆಟ್ಟರ್, ಎಚ್.ಎಸ್. ನಾಗಜ್ಜನವರ, ವೈ.ಎಫ್. ಕಿತ್ತೂರ, ಚಂದ್ರಣ್ಣ ಹರಿಜನ, ಸಿದ್ದನಗೌಡ ಪಾಟೀಲ, ರಾಜಣ್ಣ ಗೌಳಿ, ದುಶ್ಯಂತ ನಾಗರವಳ್ಳಿ, ಬಿ.ಆರ್. ಪಾಟೀಲ, ಷಣ್ಮುಖಯ್ಯ ಹಿರೇಮಠ, ರಾಜಣ್ಣ ಪಟ್ಟಣದ, ಪಿ.ವೈ. ಗುಡಗುಡಿ, ಶಕುಂತಲಾ ಪವಾಡಿ, ವಿ.ಬಿ. ಕೊರಗರ, ಚಂದ್ರಣ್ಣ ಗೂಳಿ, ಸುರೇಶ ರಾಯ್ಕರ, ಎಸ್.ಎಚ್. ಕೋಟಿ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

