ಬೈಕ್ಗೆ ಲಾರಿ ಡಿಕ್ಕಿ:ಓರ್ವ ಸಾವು
ಹಾವೇರಿ: ನಿರ್ಲಕ್ಷ್ಯದಿಂದ ಲಾರಿ ಚಾಲನೆ ಮಾಡಿದ ಪರಿಣಾಮ ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸವಣೂರಿನಲ್ಲಿ ಜರುಗಿದೆ. ಮೃತನನ್ನು ರಾಜಪ್ಪ ತಿಮ್ಮಾಪುರ (35) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ಕಳ್ಳತನ
ಹಾನಗಲ್ಲ: ನಡೆದು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ರಸ್ತೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಹೊರಟಿದ್ದ ಭಾರತಿ ದೈವಜ್ಞ ಅವರ ಕೊರಳಲ್ಲಿದ್ದ ರು. 1 ಲಕ್ಷ ಮೌಲ್ಯದ 40ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇದರಿಂದ ಭಾರತಿ ಅವರ ಕೊರಳಿಗೆ ಗಾಯವೂ ಆಗಿದೆ. ಈ ಕುರಿತಂತೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ
ಬ್ಯಾಡಗಿ: ಇತ್ತೀಚೆಗೆ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಬಂಗಾರ ದೋಚಿ ಪರಾರಿಯಾಗಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಸಿಂಧಗಾವಿಯ ಜಗದೀಶ ಅಲಿಯಾಸ್ ಯಂಕಣ್ಣ ರಾಮಣ್ಣ ಪವಾರ, ದೇವ್ಯಾ ಅಲಿಯಾಸ್ ಜಗದೀಶ ಅಲಿಯಾಸ್ ಯಂಕಣ್ಣ ಪವಾರ, ಉರಳಿ ಗ್ರಾಮದ ರಾಜು ಅಲಿಯಾಸ್ ಬಲ್ಯಾ ಹುಸೇನ ಭೋಸಲೆ ಅಲಿಯಾಸ್ ಪವಾರ ಮತ್ತು ಕೊಪ್ಪಳ ಜಿಲ್ಲೆಯ ಜರಕುಂದಿ ಗ್ರಾಮದ ಯಮುನಪ್ಪ ಬಾಲಪ್ಪ ಪೂಜಾರ ಎನ್ನಲಾಗಿದೆ. ಬ್ಯಾಡಗಿ ವಿದ್ಯಾನಗರದಲ್ಲಿ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಕಳ್ಳರ ಜಾಡು ಬೆನ್ನುಹತ್ತಿದ ಸ್ಥಳಿಯ ಪೊಲೀಸರು ಬಂಕಾಪುರದ ಬಳಿ ಕಳ್ಳರನ್ನು ಬಂಧಿಸಿದ್ದಾರೆ. ಸಿಪಿಐ ಎಂ.ಎಚ್. ಚಿಕ್ಕರೆಡ್ಡಿ ನೇತೃತ್ವದಲ್ಲಿ ಪಿಎಸ್ಐ ಬಿ.ಸಿ. ಕಲ್ಲಮ್ಮನವರ, ಎಂ.ಎಂ. ಮಹಾಂತೇಶ, ಎನ್.ಎಚ್. ಹೊಸೂರ, ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

