ಶಿಗ್ಗಾಂವಿಯಲ್ಲಿ ಕ್ರಿಕೆಟ್ ಪಂದ್ಯ: ಬಹುಮಾನ ವಿತರಣೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 6
ಗೆಲುವು ಯಾರಿಗೆ ಬಂದರೂ ಚಿಂತೆ ಇಲ್ಲ. ಶಾಂತಿ, ಸಹನೆ ಹಾಗೂ ಕ್ರೀಡಾ ಮನೋಭಾವದಿಂದ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಂಡು ಪ್ರತಿಭೆ ತೋರಿಸಬೇಕೆಂದು ಯುವ ಧುರೀಣ ಪಿ.ಡಿ. ಕಾಳಿ ಕರೆ ನೀಡಿದರು.
ತಾಲೂಕಿನ ಕುನ್ನೂರ ಗ್ರಾಮದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಂಘಟಕ ಸುಮಂತಗೌಡ ಪಾಟೀಲ ಮಾತನಾಡಿದರು. ಯುವ ಮುಖಂಡ ಮಹಾವೀರ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ತಡಸದ ಸ್ವಾಮಿ ವಿವೇಕಾನಂದ ಕ್ರಿಕೆಟ್ ಕ್ಲಬ್ ಪ್ರಥಮ, ಕುನ್ನೂರಿನ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ದ್ವಿತೀಯ ಹಾಗೂ ಕ್ಯಾಲಕೊಂಡ ತಂಡ ತೃತೀಯ ಬಹುಮಾನ ಪಡೆದವು. ಆನಂದಗೌಡ ಪಾಟೀಲ, ಚಂದ್ರು ಚಿತ್ರಗಾರ, ಮಾಬೂಸಾಬ ಜಿಗಳೂರ, ಎಂ.ಕೆ. ಮುಲ್ಲಾ, ಯಮನಪ್ಪ ನವಲೂರ, ಶಶಿಧರಗೌಡ ಪಾಟೀಲ, ಬಸವರಾಜ ಗೊಬ್ಬಿ, ಸಿ.ಬಿ. ಪೊಲೀಸ್ಪಾಟೀಲ, ಮಹೇಶ ಪತ್ತಾರ, ನಾಗರಾಜ ಹಿರೇಮಠ, ಬಾಹುಬಲಿ ಸಾವಂತಣ್ಣವರ, ನಾಗರಾಜ ಸೋಗಲಿ, ಸಿದ್ದನಗೌಡ್ರ ಪಾಟೀಲ ಇದ್ದರು. ಎಂ.ಬಿ. ಹಿರೇಮಠ ಸ್ವಾಗತಿಸಿದರು. ಟಾಕನಗೌಡ್ರ ಪಾಟೀಲ ನಿರ್ವಹಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

