ಕಾಯ್ದಿಟ್ಟ ಅರಣ್ಯ ಪ್ರದೇಶ ತೆರವಿಗೆ ವಿರೋಧ
ಹಿರೇಕೆರೂರು: ತಾಲೂಕಿನ ಹಳೆ ನೀಡನೇಗಿಲು ಗ್ರಾಮದ ಹೊರ ವಲಯದಲ್ಲಿ ಒತ್ತುವರಿಯಾಗಿದ್ದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ಪೊಲೀಸ್ ಭದ್ರತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿದಾಗ ಸ್ಥಳೀಯ ರೈತರು ಪ್ರತಿಭಟಿಸಿ, ವಿರೋಧ ವ್ಯಕ್ತಪಡಿಸಿದರು.
ಬೆಳಗ್ಗೆ ಅರಣ್ಯಾಧಿಕಾರಿಗಳು ಪೊಲೀಸರೊಂದಿಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿರುವ ರೈತರನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅರಣ್ಯೀಕರಣಕ್ಕೆ ಸಜ್ಜುಗೊಳಿಸಲು ಮುಂದಾದಾಗ ಹಳೆ ನೀಡನೇಗಿಲು, ಬೆಳ್ಳೂರ, ಬನ್ನಿಹಟ್ಟಿ, ಹಳೆ ವೀರಾಪುರ ಗ್ರಾಮದ ರೈತರು ಜೆಸಿಬಿ ಯಂತ್ರವನ್ನು ತಡೆದು ಪ್ರತಿಭಟನೆಗೆ ಮುಂದಾದರು.
ನೇತೃತ್ವ ವಹಿಸಿದ್ದ ನ್ಯಾ. ಕೆಂಚಪ್ಪ ಕುರಿಯವರ ಮಾತನಾಡಿ, 1973-74ರಿಂದ ಸುಮಾರು 850 ಹೆಕ್ಟರ್ ಪ್ರದೇಶದಲ್ಲಿ 400ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡುತ್ತಿದ್ದಾರೆ. ಈ ಭೂಮಿ ಮೇಲೆಯೇ ಸಾಕಷ್ಟು ಬಡ ಕುಟುಂಬಗಳು ಅವಲಂಬಿತರಾಗಿ ಜೀವನ ನಡೆಸುತ್ತಿವೆ. ಇಷ್ಟು ವರ್ಷ ಬಿಟ್ಟು ಏಕಾಏಕಿ ಅರಣ್ಯಾಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿರುವುದರಿಂದ ಅನೇಕ ಬಡ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗುತ್ತದೆ ಎಂದರು. ಸರ್ಕಾರ ಮಧ್ಯ ಪ್ರವೇಶಿಸಿ ಸಾಗುವಳಿ ಮಾಡುತ್ತಿರುವ ನೂರಾರು ರೈತರಿಗೆ ಕಾನೂನು ಬದ್ಧವಾಗಿ ಜಮೀನು ನೀಡಬೇಕೆಂದು ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, 2003ರ ಸರ್ಕಾರಿ ಆದೇಶದ ಪ್ರಕಾರ ಸುಮಾರು 500 ಹೆಕ್ಟರ್ ಪ್ರದೇಶದಲ್ಲಿ ಮಾಡಲಾಗಿದ್ದ ಒತ್ತುವರಿ ತೆರವುಗೊಳಿಸಲಾಗಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ 200 ಹೆಕ್ಟರ್ ಪ್ರದೇಶವನ್ನು ತೆರವುಗೊಳಿಸಿ ಅರಣ್ಯೀಕರಣಕ್ಕೆ ಸಜ್ಜುಗೊಳಿಸಲಾಗುವುದು. ಇದಕ್ಕೆ ಅಡ್ಡಿಪಡಿಸಿದವರ ಮೇಲೆ ಕ್ರಮ ಕೈಕೊಂಡು ಕಾರ್ಯಾಚರಣೆ ನಡೆಸಲಾಗುವುದು ಎಂದರು. ಡಿವೈಎಸ್ಪಿ ಜಯಪ್ರಕಾಶ ಅಕ್ಕರಕಿ, ಪಿಎಸ್ಐ ಜಿ.ಟಿ. ಶ್ರೀಶೈಲಮೂರ್ತಿ, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.
ಪ್ರತಿಭಟನೆಯಲ್ಲಿ ಶಿವ್ಯಾನಾಯ್ಕ ಲಮಾಣಿ, ರಾಜಾನಾಯ್ಕ ಲಮಾಣಿ, ಶಂಕರ್ ನಾಯ್ಕ ಲಮಾಣಿ, ರಾಜಪ್ಪ ಹರಿಜನ, ಬಸವರಾಜ ಹರಿಜನ, ಬಸವರಾಜ ಲಮಾಣಿ, ರಮೇಶ ಲಮಾಣಿ, ದೇವೇಂದ್ರ ಲಮಾಣಿ, ಬಸವರಾಜ ಬೆಳ್ಳೂರ, ಲೋಕೇಶ ಹರಿಜನ, ಹನುಮಂತ ಲಮಾಣಿ, ನಾಗಪ್ಪ ಮಲ್ಲಾಡದ, ಶಾಂತಿಬಾಯಿ ಲಮಾಣಿ, ಗಂಗಿಬಾಯಿ ಲಮಾಣಿ, ರೇಣುಕಾಬಾಯಿ ಲಮಾಣಿ, ರತ್ನವ್ವ ಲಮಾಣಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

