ಸಮಾವೇಶ ಖಂಡಿಸಿ ಗಂಗಾಮತಸ್ಥರ ರಸ್ತೆ ತಡೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 8
ಪಟ್ಟಣದಲ್ಲಿ ಫೆ. 14ರಂದು ನಡೆಸಲು ಉದ್ದೇಶಿಸಿರುವ ಗಂಗಾಮತಸ್ಥರ ರಾಜ್ಯ ಸಮಾವೇಶವನ್ನು ವಿರೋಧಿಸಿ ಸ್ಥಳೀಯ ಸಮಾಜ ಬಾಂಧವರು ಶುಕ್ರವಾರ ರಸ್ತೆ ತಡೆ ನಡೆಸಿ, ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ ಅವರ ಪ್ರತಿಕೃತಿ ದಹಿಸಿದರು.
ಬೆಳಗ್ಗೆ 10ಕ್ಕೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ್ದ ಸಮಾಜ ಬಾಂಧವರು, ರಾಜಕೀಯ ಉದ್ದೇಶವಿರುವ ಸಮಾವೇಶವನ್ನು ಹಾನಗಲ್ನಲ್ಲಿ ಮಾಡಲು ಅವಕಾಶ ನೀಡುವುದಿಲ್ಲ. ರಾಜಕೀಯಕ್ಕೂ ಸಮಾಜಕ್ಕೂ ತಳಕು ಹಾಕುವುದು ಬೇಡ. ಚುನಾವಣೆ ವಿಷಯದಲ್ಲಿ ಎಲ್ಲರೂ ಸ್ವತಂತ್ರರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆಯಲ್ಲಿ ಆಗಮಿಸಿ, ಕನಕದಾಸ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು. ಅಲ್ಲೇ ಒಂದು ತಾಸು ರಸ್ತೆ ತಡೆ ಮಾಡಲಾಯಿತು. ರಾಜ್ಯ ಸಮ್ಮೇಳನ ನಡೆಸಲು ಮೋಹನಕುಮಾರ್ ಪೊಲೀಸ್ ಇಲಾಖೆ ಅನುಮತಿ ಪಡೆದಿಲ್ಲ. ಪೋಸ್ಟರ್ ಹಾಗೂ ಕಟೌಟ್ ಹಾಕಿಸಲೂ ಪುರಸಭೆ ಪರವಾನಿಗೆ ಪಡೆದಿಲ್ಲ ಎಂಬುದನ್ನು ಪ್ರತಿಭಟನಾಕಾರರು ಅಧಿಕಾರಿಗಳ ಗಮನಕ್ಕೆ ತಂದರು.
ಪುರಸಭೆ ಕ್ರಮ: ಪುರಸಭೆಗೆ ಮನವಿ ಸಲ್ಲಿಸಿ, ಹಾನಗಲ್ಲ ನಗರದಲ್ಲಿ ಹಾಕಿದ ಮೋಹನ್ ಕುಮಾರ ಅವರ ಕಟೌಟ್ ಹಾಗೂ ಪೋಸ್ಟರ್ಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಪುರಸಭೆ ಆ ಬಳಿಕ ಎಲ್ಲ ಕಟೌಟ್ಗಳನ್ನು ತೆಗೆಸಿತು. ಪ್ರತಿಭಟನೆ ನೇತೃತ್ವವನ್ನು ಗಂಗಾಮತ ಸಮಾಜದ ತಾಲೂಕು ಆಧ್ಯಕ್ಷ ಮಂಜುನಾಥ ಸುಣಗಾರ, ರಾಮಣ್ಣ ಚಿಕ್ಕಣ್ಣನವರ, ಕೃಷ್ಣಮೂರ್ತಿ ವಡ್ನಿಕೊಪ್ಪ, ರಮೇಶ ಗುಳೇದ, ಫಕ್ಕೀರಪ್ಪ ತುಮ್ಮಿನಕಟ್ಟಿ, ನಾಗೇಂದ್ರ ತುಮರಿಕೊಪ್ಪ, ಅಶೋಕ ಆರೇಗೊಪ್ಪ, ಸಿದ್ದರಾಮಪ್ಪ ಚಿಕ್ಕಣ್ಣನವರ, ಪ್ರಶಾಂತ ಗೊಂದಿ, ಕೇಶವ ಶೇಷಗಿರಿ, ಮಾಲತೇಶ ಸುಂಕದ, ಹನುಮಂತಪ್ಪ ಮಲಗುಂದ, ಗುಡ್ಡಪ್ಪ ಗೋವಿಕಾಯಿ, ರಾಮಣ್ಣ ತೊರವಂದ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

