ಯುವಕರಿಗೆ ನೈತಿಕ ಶಿಕ್ಷಣ ಅವಶ್ಯ: ಪ್ರೊ. ರಾಮಗಿರಿ
ಬ್ಯಾಡಗಿ: ನೈತಿಕ ನೆಲೆಗಟ್ಟಿನ ಶಿಕ್ಷಣವನ್ನು ಯುವ ಸಮುದಾಯಕ್ಕೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತೆ ಮಾಡುವುದು ಪ್ರಸ್ತುತ ದಿನಗಳಲ್ಲಿ ಅವಶ್ಯಕವೆನಿಸುತ್ತಿದೆ ಎಂದು ಬಿಇಎಸ್ಎಂ ಕಾಲೇಜು ಉಪನ್ಯಾಸಕ ಪ್ರೊ. ಪಿ.ಎಂ. ರಾಮಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಿಸಲಹಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಪರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತವೆಂದು ಬಣ್ಣಿಸಿದ ಅವರು, ಯುವಕನೊಬ್ಬ ಶಿಕ್ಷಣ ಪಡೆದಲ್ಲಿ ಸಮಾಜ ಸರಿದಾರಿಗೆ ಶಕ್ತಿ ಬಂದಂತೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನರು ತಾಂತ್ರಿಕ ಶಿಕ್ಷಣಕ್ಕೆ ಮುಗಿಬೀಳುತ್ತಿದ್ದಾರೆ. ವಿಕಸನದ ಹಾದಿಗೆ ಇವರ ಅವಶ್ಯಕತೆಯಿದೆ. ಒಂದೆಡೆ ಇದನ್ನೇ ಒಪ್ಪಿಕೊಳ್ಳಬಹುದುದಾದರೂ ಎಲ್ಲದನ್ನೂ ಅದರಿಂದಲೇ ಪಡೆದುಕೊಳ್ಳಬಹುದು ಎಂಬುದು ವಿಷಯ ಸತ್ಯಕ್ಕೆ ದೂರವಾಗಿದೆ ಎಂದರು.
ಶೇಖರಗೌಡ್ರ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಉದಾತ್ತ ಗುರಿಯೊಂದಿಗೆ ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥ್ಥೆಯಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ಶ್ರಮಪಟ್ಟಾಗ ಮಾತ್ರ ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಎದುರಿಸಲು ಸಾಧ್ಯವೆಂದರು. ವಿಷಯ ಜ್ಞಾನದಿಂದ ವ್ಯಕ್ತಿ ಹಾಗೂ ಸಮಾಜ ಬದಲಾವಣೆಗೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನೈತಿಕ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದು. ಈ ದಿಸೆಯಲ್ಲಿ ಶಿಕ್ಷಕರು, ಪಾಲಕರು ಚಿಂತಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಉಪನ್ಯಾಸಕ ಆರ್.ಎನ್. ಕೊಟ್ಟೂರು ಇವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಆರ್.ಎಸ್. ತಳವಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕ ವಿ.ಕೆ. ಶಿರಗಂಬಿ, ಚಂದ್ರಶೇಖರ್ ಶಿರಗೇರಿ, ಶೃತಿ ಅಂಗಡಿ, ಸವಿತಾ ಮಣ್ಣೂರ, ವೀರನಗೌಡ್ರ ಗೌಡರ ಉಪಸ್ಥಿತರಿದ್ದರು. ಬಿ.ಕೆ. ತಿಪ್ಪಣ್ಣನವರ ನಿರೂಪಿಸಿದರು. ಎಸ್.ಎ. ಮಕಾಂದರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

