ಬಿಜೆಪಿ ತುಘಲಕ್ ದರ್ಬಾರ್: ಕೋಳಿವಾಡ
ರಾಣಿಬೆನ್ನೂರು: ಐದು ವರ್ಷ ಕಾಲ ರಾಣಿಬೆನ್ನೂರು ನಗರಸಭೆಯ ಆಡಳಿತ ನಡೆಸಿದ ಬಿಜೆಪಿ ಜನರ ಮೇಲೆ ಇಲ್ಲಸಲ್ಲದ ಕರ ವಿಧಿಸಿ, ತುಘಲಕ್ ದರ್ಬಾರ್ ನಡೆಸಿತ್ತು. ಈಗದು ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ ಎಂದು ಮಾಜಿ ಸಚಿವ ಕೆ.ಬಿ. ಕೋಳಿವಾಡ ನುಡಿದರು.
ಬಿಜೆಪಿ ಹಾಗೂ ಕೆಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ನಗರಸಭೆಯ ಬಿಜೆಪಿ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಪಾರ್ಕ್ ಫೀ ವಸೂಲಿ, ನೀರಿನ ದರ ಏರಿಕೆ, ಕಟ್ಟಡ ಫೀ ಹೆಚ್ಚಳ, ಖಾತೆ ಬದಲಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಹಕ್ಕಿಲ್ಲ ಎಂದು ಠರಾವು ಬರೆಯುವ ಮೂಲಕ ಜನವಿರೋಧಿ ಕಾರ್ಯ ಮಾಡಿ, ತುಘಲಕ್ ದರ್ಬಾರ್ ನಡೆಸಿದ್ದಾರೆ ಎಂದುರು. ಮಾ. 7ರಂದು ನಡೆಸಲು ಉದ್ದೇಶಿಸಿರುವ ಚುನಾವಣೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದೂಡುವಂತೆ ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ ಎಂದರು.
ನಗರಸಭೆಯ ಬಿಜೆಪಿ ಮಾಜಿ ಸದಸ್ಯ ಗೋಪಾಲ ಪಾಳೇದ, ಮುಖಂಡರಾದ ಪ್ರಕಾಶಗೌಡ ಪಾಟೀಲ, ನಾರಾಯಣ ಜಕನೂರು, ವಾಗೀಶ ಗುತ್ತಲ, ಮಾಲತೇಶ ಮೈಸೂರು, ಗಿರೀಶ ಅರ್ಕಾಚಾರಿ, ಹನುಮಂತಪ್ಪ ಭಜಂತ್ರಿ, ನಿಂಗಪ್ಪ ಸಣ್ಣಿಂಗಣ್ಣನವರ, ಲಕ್ಷ್ಮಣ ರಂಗನವರ, ದುರ್ಗೇಶ ಬಾಳಿಕಾಯಿ ಕಾಂಗ್ರೆಸ್ ಸೇರಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ಮಹಿಳಾ ಅಧ್ಯಕ್ಷೆ ಇಂದಿರಾ ಗಡ್ಡದಗೂಳಿ, ನಗರಸಭೆ ಮಾಜಿ ಸದಸ್ಯ ಶರಿನ್ತಾಜ ಶೇಖ, ಮಂಜುನಾಧ ದುಗ್ಗತ್ತಿ, ಶಶಿಧರ ಬಸೆನಾಯ್ಕರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

