ನಿರುದ್ಯೋಗ ತೊಲಗುವಂತ ತರಬೇತಿ ನೀಡಿ
ರಾಣಿಬೆನ್ನೂರು: ವಿವಿಧ ಸ್ವಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ವಿದ್ಯಾವಂತ ನಿರುದ್ಯೋಗಿಗಳ ಇಚ್ಛೆಗೆ ತಕ್ಕಂತೆ ತರಬೇತಿ ನೀಡಬೇಕೆಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಡಿಬಿ) ವ್ಯವಸ್ಥಾಪಕ ಅಬ್ದುಲ್ ಕರೀಮ ಹೇಳಿದರು.
ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ, ನೀಡ್ಸ್ ರಾಣಿಬೆನ್ನೂರು, ಫಂಕ್ಷನಲ್ ಲೋಕೇಶನಲ್ ಟ್ರೈನಿಂಗ್ ರೀಸರ್ಚ್ ಸೊಸೈಟಿ ಬೆಂಗಳೂರು ಆಶ್ರಯದಲ್ಲಿ ನಗರದ ಸಂಗಮ್ ಸರ್ಕಲ್ ಹತ್ತಿರದ ನೀಡ್ಸ್ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಸ್ವಉದ್ಯೋಗ ಕೈಗೊಳ್ಳಲು ಹಣ ಪಡೆಯಲು ವಿದ್ಯಾವಂತ ನಿರುದ್ಯೋಗಿಗಳು ಅರ್ಜಿಸಲ್ಲಿಸುವ ಪೂರ್ವದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ ನೀಡ್ಸ್ ಸೇವಾ ಸಂಸ್ಥೆಯಂಥ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಸ್ವಯಂ ಉದ್ಯೋಗಾಧಾರಿತ ತರಬೇತಿ ಶಿಬಿರಗಳಲ್ಲಿ ಕನಿಷ್ಠ 3ರಿಂದ 4 ತಿಂಗಳು ಕಾಲ ತರಬೇತಿ ಪಡೆದಿಬೇಕು. ಆ ಕುರಿತು ಸಂಸ್ಥೆ ನೀಡುವ ಪ್ರಮಾಣಪತ್ರ ಮತ್ತು ವಿದ್ಯಾರ್ಹತೆ ಪ್ರಮಾಣಪತ್ರಗಳನ್ನು ಸಲ್ಲಿಸಿದರೆ ಹಣಕಾಸು ಸಂಸ್ಥೆಗಳು ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದರು.
ಹಾವೇರಿ ಜಿಲ್ಲಾ ಕೈಗಾರಿಕೆ ವಿಸ್ತಣಾಧಿಕಾರಿ ವಿನಾಯಕ ಜೋಷಿ ಮಾತನಾಡಿದರು. ನೀಡ್ಸ್ ಸಂಸ್ಥೆ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಎಚ್.ಎಫ್. ಅಕ್ಕಿ ಮಾತನಾಡಿ, ಕರ್ನಾಟಕದಹಾವೇರಿ, ಧಾರವಾಡ, ಶಿವಮೊಗ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೀಡ್ಸ್ ಸ್ವಯಂ ಸೇವಾ ಸಂಸ್ಥೆ 20 ವರ್ಷಗಳ ಹಿಂದೆಯೇ ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಸಂಸ್ಥೆಯಿಂದ ತರಬೇತಿ ಪಡೆದವರಲ್ಲಿ 10 ಸಾವಿರಕ್ಕೂ ಅಧಿಕ ನಿರುದ್ಯೋಗಿಗಳು ಸ್ವಉದ್ಯೋಗಿಗಳಾಗಿದ್ದಾರೆ ಎಂದರು.
ನೀಡ್ಸ್ ಸ್ವಯಂಸೇವಾ ಸಂಸ್ಥೆ ಕಾರ್ಯದರ್ಶಿ ವನಮಾಲ ತುಮ್ಮಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂಬ್ರೈಡರಿ, ಬ್ಯುಟಿಶಿಯನ್, ವಾಹನ ಚಾಲನೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಜಯಶ್ರೀನಾಯಕ, ಶೋಭಾ ತೆಗ್ಗಿನಮನಿ, ಅಮಜದ್ಸಾಬ್ ಅರಿಹಂತ್ ತರಬೇತಿ ನೀಡಿದರು. ತರಬೇತಿ ಸಂಘಟಕರಾದ ಸಂತೋಷ ದೊಡ್ಡತಮ್ಮಣ್ಣನವರ, ಈ.ಟಿ. ಸುಧೀರ, ಉಷಾರಾಣಿ, ಮಂಜುನಾಥ ಹಲಗೇರಿ, ತಿಪ್ಪೇಶ ಕನ್ನಮ್ಮನವರ, ಗುಡ್ಡಪ್ಪ ಸೂಟ್ಟಪ್ಪನವರ, ಶಂಕ್ರಯ್ಯ ಸಂದಿಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

