ನಾಮಪತ್ರ ಸಲ್ಲಿಕೆಗೂ ನೂಕುನುಗ್ಗಲು
ಹಾವೇರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಆಕಾಂಕ್ಷಿಗಳ ಉತ್ಸಾಹ ಮೇರೆ ಮೀರುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿಗಳಲ್ಲಿ ಚಳಕು ಆರಂಭವಾಗಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತ ಹೋದಂತೆ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾದ ಪಕ್ಷಗಳು ಆಯಾ ವಾರ್ಡಿನಲ್ಲಿ ಆಕಾಂಕ್ಷಿಗಳನ್ನು ನಿಲ್ಲಿಸಿ ಅಲ್ಲಿನ ಮುಖಂಡರು ಸೂಚಿಸಿದವರಿಗೇ ಬಿ ಫಾರಂ ನೀಡುವುದಾಗಿ ಘೋಷಿಸಿ ಪಾರದರ್ಶಕತೆ ಮೆರೆಯುವ ಪ್ರಯತ್ನಿಸಿದರಾದರೂ ಅದಕ್ಕೆ ಕಾರ್ಯಕರ್ತರು ಸೊಪ್ಪು ಹಾಕದೆ, ಪಕ್ಷಕ್ಕಾಗಿ ಶ್ರಮಿಸಿವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸಿದೆ.
ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು...
ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ಪ್ರತಿ 8 ವಾರ್ಡ್ಗಳಿಗೆ ಒಬ್ಬರಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದರೂ, ನಾಮಪತ್ರ ಸಲ್ಲಿಕೆಗೆ ಎರಡೇ ದಿನಗಳು ಬಾಕಿಯಿದ್ದ ಕಾರಣ ಶುಕ್ರವಾರ ಜನಜಂಗುಳಿ ಕಂಡುಬಂದಿತ್ತು. ಬೆಂಬಲಿಗರ ಘೋಷಣೆಗಳೂ ತಾರಕಕ್ಕೇರುತ್ತಿದ್ದು, ಇದು ತಹಸೀಲ್ದಾರ ಕಚೇರಿ ಆವರಣದಲ್ಲಿ ಬಹುತೇಕ ಸಂತೆಯ ಸನ್ನಿವೇಶ ಸೃಷ್ಟಿಸಿತು. ಬೇಸತ್ತ ಸಿಬ್ಬಂದಿ ಈ ಅನಗತ್ಯ ಕಿರಿಕಿರಿ, ಚೀರಾಟಗಳಿಂದ ಮುಕ್ತಿಗಾಗಿ ಕಂಡುಕೊಂಡ ದಾರಿ ಮಾತ್ರ ಸ್ವಾಗತಾರ್ಹ. ಅಭ್ಯರ್ಥಿಗಳು, ಅನುಮೋದಕರು ಹಾಗೂ ಸೂಚಕರು ಹಾಗೂ ಅವರೊಂದಿಗೆ ಸಹಾಯಕರಾಗಿ ಇಬ್ಬರಿಗೆ ಅವಕಾಶ ಕೊಟ್ಟು ಇತರೆ ಎಲ್ಲ ಬೆಂಬಲಿಗರನ್ನೂ, ಅನಗತ್ಯ ಕಿರಿಕಿರಿಗೆ ಕಾರಣರಾಗಿದ್ದ ಜನರನ್ನು ಕಚೇರಿ ಆವರಣದಿಂದ ಹೊರಗೆ ಕಳಿಸಿ ಗೊಂದಲಕ್ಕೆ ತೆರೆ ಎಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

