ಮಕ್ಕಳಲ್ಲಿ ಸಮಯ ಪ್ರಜ್ಞೆ ಮೂಡಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.25
ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿರಬೇಕು ಹಾಗೂ ಮಕ್ಕಳಲ್ಲಿ ಸಮಯ ಪ್ರಜ್ಞೆ ಮೂಡಿಸಬೇಕೆಂದು ಪ್ರಗತಿಪರ ರೈತ ನಿಜಲಿಂಗಪ್ಪ ಬಸೇಗಣ್ಣಿ ನುಡಿದರು.
ಬಿಇಓ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಗಳ ಆಶ್ರಯದಲ್ಲಿ ಅಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಮಟ್ಟದ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದರು.
ಸೇವೆ ಎಂಬುದು ಪ್ರತಿಯೊಂದು ಮಗುವಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮುಖಾಂತರ ಮೂಡಿ ಬರುವಂತ ಕೆಲಸವಾಗಬೇಕು ಎಂದು ನುಡಿದರು.
ಅತಿಥಿಗಳಾಗಿ ಅಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಾ. ಸತೀಶ ಈಳಿಗೇರ ಮಾತನಾಡಿ, ಈ ಸಂಸ್ಥೆಯು ಶಿಕ್ಷಣ ಸಂಸ್ಥೆಯ ಒಂದು ಅಂಗವಾಗಿದೆ. ಶಿಸ್ತು ದೇಶಾಭಿಮಾನ ಮೂಡಿಸುವಂತ ಕಾರ್ಯ ಮನಸ್ಸಿನಿಂದ ಮಾಡಬೇಕಿದೆ. ಇತರರಿಗೆ ಸಹಾಯ ಮಾಡುವ ಕೆಲಸ ಮಕ್ಕಳಿಂದ ಆಗಬೇಕಿದೆ. ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ರೂಢಿಸಬೇಕೆಂದರು. ಮಕ್ಕಳ ಸಮವಸ್ತ್ರ ನೋಡಿ ಮಿನಿ ಸೋಲ್ಜರರಂತೆ ಕಾಣುತ್ತಿದ್ದಾರೆ. ದೇಶದ ಹೆಮ್ಮೆಯ ಸೈನಿಕರಾಗಿ ಸೇವೆ ಸಲ್ಲಿಸಿ ಎಂದು ಶುಭ ಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವಸಂತರಾವ್ ಕಾಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವಂಥ ಕಾರ್ಯಗಳನ್ನು ಮಾಡಬೇಕಿದೆ ಎಂದರು.
ಮಕ್ಕಳ ಮೇಳದಲ್ಲಿ 369 ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಾಗೂ 68 ಜನ ಶಿಕ್ಷಕರು ಸ ಬಸಪ್ಪ ಬೆಳವಲಕೊಪ್ಪ, ಪೂರ್ಣಿಮಾ ನಿರ್ವಾಣಿಮಠ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಐ. ಇಚ್ಚಂಗಿ, ಶಿಕ್ಷಣ ಸಂಯೋಜಕ ಆರ್.ಎಚ್. ಭಜಂತ್ರಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಪಿ.ಎ. ಮರಗುರಮಠ, ರಮೇಶ ಭಜಂತ್ರಿ, ಆರ್.ಎಚ್. ಗೌಡರ, ಎಸ್‌ಡಿಎಂಸಿ ಸದಸ್ಯರು, ಸಿಬ್ಬಂದಿ, ಎ.ಎಲ್. ಶೇಖಸೂರಣಿಗಿ, ಬಣಕಾರ, ಎನ್.ಬಿ. ಹಾವನೂರ, ಗೋನಾಳ, ಶಾಂತಾ ಬಾರ್ಕಿ, ಎ.ಟಿ. ನೀರಲಗಿ, ಪಿ.ವಿ. ಕಲ್ಲೂರ, ಕೆ.ವೈ. ಕಿಡ್ಡಿ, ಸಿ.ಸಿ. ಲಮಾಣಿ, ಎಂ.ಬಿ. ಹಿರೇಮಠ ಇದ್ದರು. ಗಾಣಿಗೇರ ನಿರೂಪಿಸಿ, ಮುರಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

