ಹಾವೇರಿ

ಸಾಹಿತ್ಯಾಭಿರುಚಿ ಹೆಚ್ಚಿಸುವ ಕಾರ್ಯ ಆಗಲಿ: ನಂದಿ

Published On :

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಈರಣ್ಣ ಮಹಾರಾಜಪೇಟ ಅವರ ದತ್ತಿ ನಿಧಿ ಇತ್ತೀಚೆಗೆ ಜಿಲ್ಲಾ ನೌಕರ ಭವನದಲ್ಲಿ ಜರುಗಿತು. ಅತಿಥಿಗಳಾಗಿ ಹಿರಿಯ ಸಾಹಿತಿ ಗಂಗಾಧರ ನಂದಿ ಮಾತನಾಡಿ, ಕಸಾಪ ಹಳೆಯ ಸಾಹಿತಿಗಳನ್ನು ಗುರುತಿಸಿ, ಗೌರವಿಸಬೇಕು. ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಬೇಕು. ಇದರಿಂದ ಕನ್ನಡಪ್ರೇಮ ಉದಯಿಸಲು ಹಾಗೂ ಕನ್ನಡ ಸಾಹಿತ್ಯದ ಸಿಹಿ ಹೆಚ್ಚಿಸಲು ಸಾಧ್ಯವಿದೆ ಎಂದರು. ದತ್ತಿ ಉಪನ್ಯಾಸ ನೀಡಿದ ಡಾ೤ ಸವಿತಾ ಹಿರೇಮಠ ಮಾತನಾಡಿ, ಸ್ತ್ರೀಯರು ಪುರುಷರಷ್ಟೇ ಸಬಲರು. ಕರ್ನಾಟಕದ ಮಹಿಳಾ ಶಿಕ್ಷಣದಲ್ಲಿ ಹಾವೇರಿ ಎರಡನೇ ಸ್ಥಾನದಲ್ಲಿದೆ ಎಂದರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ವಹಿಸಿದ್ದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಮಾಳಗಿ, ಶೋಭಾ ಜಾಗಟಗೇರಿ, ನಿಜಲಿಂಗಪ್ಪ ಕಾಳೆ, ಜೆ.ಎನ್. ಜಾವೂರ, ಬಸವರಾಜ ಮುದಗಲ್ಲ, ಎಸ್.ಎನ್. ದೊಡ್ಡಗೌಡರ, ಹನುಮಂತಗೌಡ ಗೊಲ್ಲರ, ಕಸ್ತೂರಮ್ಮ ಮಹಾರಾಜಪೇಟ, ಉಮೇಶ ಮಹಾರಾಜಪೇಟ ಉಪಸ್ಥಿತರಿದ್ದರು. ಸಹನಾ ಮಹಾರಾಜಪೇಟ ಪ್ರಾರ್ಥಿಸಿದರು. ನಾಗರಾಜ ದೇಸಳ್ಳಿ ಸ್ವಾಗತಿಸಿದರು. ಎ.ಬಿ. ಗುಡ್ಡಳ್ಳಿ ನಿರ್ವಹಿಸಿದರು. ಎಂ.ಎಸ್. ಮರಿಗೂಳಪ್ಪನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.